ಜೆಟ್, ಇಂಡಿಗೋನಲ್ಲಿ ಮೊದಲು ವಿಮಾನ ಪ್ರಯಾಣ ಮಾಡಿ

indigo-jet-airways-passenger-can-pay-for-tickets-in-emi
ನವದೆಹಲಿ, ಜೂನ್ 14: ದೇಶದ ಖಾಸಗಿ ವಿಮಾನ ಯಾನ ಸಂಸ್ಥೆಗಳು ಪ್ರಾಯಾಣಿಕರನ್ನು ಸೆಳೆಯಲು ಸಾಕಷ್ಟು ಕಸರತ್ತು ಮಾಡುತ್ತಿವೆ. ಇದೀಗ ದೇಶದ ಅಗ್ರಮಾನ್ಯ ನಾಗರಿಕ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಜೆಟ್ ಏರ್ ವೇಸ್ ಹೊಸ ಯೋಜನೆಯೊಂದನ್ನು ಬಿಟ್ಟಿದೆ.

ಏನಪ್ಪಾ ಅಂದರೆ 'ಮೊದಲು ನೀವು ವಿಮಾನ ಹತ್ತಿ. ಪ್ರಯಾಣದ ದರ ಪಾವತಿಸುವ ಬಗ್ಗೆ ಆಮೇಲೆ ವಿಚಾರಿಸಿಕೊಂಡರೆ ಆದೀತು. ಸರಿಯಾಗಿ ಲೆಕ್ಕಾಚಾರ ಹಾಕಿ ಪ್ರಯಾಣ ದರವನ್ನು ಕಂತುಗಳ ಮೂಲಕವೇ ಪಾವತಿಸಿದರೆ ಆದೀತು. ಈ ಹಿಂದಿನಂತೇ ಮೊದಲು ಟಿಕೆಟ್ ಆಮೇಲಷ್ಟೇ ಪ್ರಯಾಣ ಅಂತೇನೂ ಇಲ್ಲ. ಬನ್ನಿ ತಡವೇಕೆ, ಇಂದೇ ವಿಮಾನ ಹತ್ತಿ' ಎಂದು ಪ್ರಾಯಾಣಿಕರಿಗೆ ವಿಮಾನ ಹತ್ತಿಸುತ್ತಿವೆ.

'ಅಂದರೆ ಪ್ರಯಾನಿಸಿದ ನಂತರ ಮುಂದಿನ 2 ತಿಂಗಳಲ್ಲಿ ಅರ್ಧ ಅರ್ಧ ದುಡ್ಡು ಕೊಟ್ಟುಬಿಟ್ಟರೆ ಸಾಕು. ಈ ಸಂಬಂಧ HDFC, Citibank ಮತ್ತು ICICI Bank ಜತೆ ನಾವು ಒಪ್ಪಂದವೊಂದನ್ನು ಮಾಡಿಕೊಂಡಿದ್ದೇವೆ. ಕ್ರೆಡಿಟ್ ಕಾರ್ಡ್ ಮೂಲಕ ಮೊದಲು ಟಿಕೆಟ್ ಖರೀದಿಸಿಬಿಡಿ. ಆ ಮೇಲೆ 2 ಕಂತುಗಳಲ್ಲಿ ಪ್ರಯಾಣ ದರ ಪಾವತಿಸಿ ಸಾಕು' ಎನ್ನುತ್ತಿವೆ ಇಂಡಿಗೋ ಮತ್ತು ಜೆಟ್ ಏರ್ ವೇಸ್ ಸಂಸ್ಥೆಗಳು.

ಆದರೆ ಈ ಕಂತು ಪಾವತಿ ಮಾಡುವಾಗ ಪ್ರಯಾಣಿಕರು ಶೇ. 15ರಷ್ಟು ಹೆಚ್ಚು ಮೊತ್ತವನ್ನು ಪಾವತಿಸಬೇಕು. ಇಂಡಿಗೋ ಮತ್ತು ಜೆಟ್ ಏರ್ ವೇಸ್ ಸಂಸ್ಥೆಗಳು ಈ ಹೆಚ್ಚುವರಿ ಪಾವತಿಗೆ ಸಮ್ಮತಿ ಸೂಚಿಸಿಲ್ಲವಾದರೂ ಸದರಿ ಮೂರೂ ಬ್ಯಾಂಕುಗಳು ಈ ಒಪ್ಪಂದ ಸುಸೂತ್ರವಾಗಿ ಮುಂದುವರಿಯಬೇಕು ಅಂದರೆ ಕನಿಷ್ಠ ಶೇ. 15ರಷ್ಟನ್ನು ಪ್ರಯಾಣಿಕರು ಪಾವತಿಸಲೇ ಬೇಕು ಎಂದು ಸ್ಪಷ್ಟಪಡಿಸಿವೆ.

ನರೇಶ್ ಅಗರವಾಲ್ ಸ್ಥಾಪಿತ IndiGo 2006ರಿಂದ ದೇಶದಲ್ಲಿ ಸಂಚರಿಸುತ್ತಿವೆ. ಸದ್ಯಕ್ಕೆ ದೇಶೀಯ ಮಾರುಕಟ್ಟೆಯಲ್ಲಿ ಇದರ ಪಾಲು ಗರಿಷ್ಠವಾಗಿದೆ. ವಿಶ್ವದಲ್ಲಿ ಅತಿವೇಗದಲ್ಲಿ ಅಭಿವರ್ಧಿಸುತ್ತಿರುವ ಸಂಸ್ಥೆಯೂ ಇದೇ ಆಗಿದೆ. ಇನ್ನು ಮುಂಬೈ ಮೂಲದ Jet Airways ಎರಡನೆಯ ಅತಿ ದೊಡ್ಡ ಸಂಸ್ಥೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+