ಚಿತ್ರಗಳಲ್ಲಿ : ಧರ್ಮಸ್ಥಳ, ಮುಂಬೈ, ಚೆನ್ನೈ, ಕೇರಳದಲ್ಲಿ ಮಳೆ ಹಾಡು
ಮುಂಬೈ, ಜೂ.12: ಮುಂಬೈ ಸೇರಿದಂತೆ ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ನೈರುತ್ಯ ಮುಂಗಾರು ನಿರೀಕ್ಷೆಗೂ ಮುನ್ನ ಆಗಮಿಸಿ ಆರ್ಭಟಿಸುತ್ತಲೇ ಇದೆ. ಈಗ ಇದೇ ಮಾರುತಗಳು ದಕ್ಷಿಣ ಭಾಗದತ್ತ ತಿರುಗಿದೆ.
ಮಳೆ ಅರ್ಭಟದಿಂದ ಹಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಒಳನಾಡು ಹಾಗೂ ಮುಂಬೈನಲ್ಲಿ ಮುಂದಿನ 24 ಗಂಟೆಯೊಳಗೆ ಮುಂಬೈ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದೂ ಮುನ್ಸೂಚನೆ ನೀಡಿವೆ.
ಆದರೆ, ಕರ್ನಾಟಕದಲ್ಲಿ ಮುಂಗಾರು ಮಾರುತಗಳ ಪ್ರವೇಶ ಆರ್ಭಟ ಅಷ್ಟಾಗಿ ಕಂಡು ಬಂದಿಲ್ಲ. ಚೆನ್ನೈ, ಕೇರಳ, ಮುಂಬೈ ಸೇರಿದಂತೆ ಮಳೆಯ ಹಾಡು ಹಾಡುತ್ತಿರುವ ಜನತೆಯ ಚಿತ್ರಣ ಇಲ್ಲಿದೆ.
ಕರ್ನಾಟಕದಲ್ಲಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಇದು ನಿರೀಕ್ಷಿತ ಕೂಡಾ ಆದರೆ, ಇತರೆಡೆಗಳಲ್ಲಿ ಮಳೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಧರ್ಮಸ್ಥಳದಲ್ಲಿ ಮಂಗಳವಾರ ಕಂಡ ಮಳೆ ಚಿತ್ರಗಳು ಸಿಕ್ಕಿವೆ. ನಿಮ್ಮ ಊರಿನಲ್ಲೂ ಮಳೆ ಸುರಿಯುತ್ತಿದ್ದರೆ ತಪ್ಪದೆ ನಮಗೆ ಸಾಧ್ಯವಾದಷ್ಟು ಚಿತ್ರಗಳನ್ನು ನಿಮ್ಮ ವಿವರಗಳೊಂದಿಗೆ ಇ ಮೇಲ್ ಮಾಡಿ
ಹವಾಮಾನ ಮುನ್ಸೂಚನೆ ಪ್ರಕಾರ 48 ಗಂಟೆಗಳಲ್ಲಿ ಕರಾವಳಿ, ಮಲೆನಾಡು ಭಾಗಗಳಲ್ಲಿ ಜೋರಾಗಿ ಗಾಳಿ ಸಹಿತ ಮಳೆ ಸುರಿಯುವ ಸಾಧ್ಯತೆಗಳಿವೆ. ದಕ್ಷಿಣ- ನೈಋತ್ಯದಿಂದ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಕರಾವಳಿ ಪ್ರದೇಶದ ಜನರು ಮೀನುಗಾರಿಕೆಗೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

ಧರ್ಮಸ್ಥಳದಲ್ಲಿ ಮಳೆ
ಧರ್ಮಸ್ಥಳದ ಬಿಸಿಲಿನ ಬೇಗೆ ತಣಿಸಿದ ಮಳೆ. ಚಿತ್ರ ಕೃಪೆ: ಪಾರ್ಥಿಬನ್

ಕೇರಳದಲ್ಲಿ ಮಳೆ
ಮಳೆಯಲ್ಲಿ ಕೊಡೆ ಜೊತೆಯಲ್ಲಿ.. ಕೇರಳದಲ್ಲಿ ಮಳೆ

ಇದು ಮುಂಬೈ 'ಮಹಾ' ಮಳೆ
ಮುಂಬೈ; ಕಡಲ ತೀರದಲ್ಲಿ ಜೋಡಿ ಜೀವಗಳು ಮಳೆಯ ಸಂಭ್ರಮವನ್ನು ಆನಂದಿಸುತ್ತಿದ್ದಾರೆ.

ಚೆನ್ನೈನ ಮಳೆ ಚಿತ್ರ
ಮಳೆಯಲ್ಲಿ ಸಾಗುತ್ತಿದೆ ಸಂಸಾರದ ಬಂಡಿ

ಶಾಲೆ ಮಕ್ಕಳು
ಚೆನ್ನೈ: ಮಳೆಯಲ್ಲೇ ಶಾಲೆಗೆ ಸಾಗಿರುವ ವಿದ್ಯಾರ್ಥಿಗಳು.. PTI Photo by R Senthil Kumar

ಎಲ್ಲಿದೆ ಮಳೆ ಮಾರುತ
ನೈರುತ್ಯ ಮುಂಗಾರು ಮಾರುತ ಸದ್ಯಕ್ಕೆ ಎಲ್ಲಿಂದ ಎಲ್ಲಿಗೆ ಬೀಸುತ್ತಿದೆ ನೋಡಿ.. ಪಿಟಿಐ ಗ್ರಾಫಿಕ್ಸ್

ಚೆನ್ನೈನ ಮಳೆ ಚಿತ್ರ
ಮಳೆಯಲ್ಲಿ ಸಾಗುತ್ತಿದೆ ಟಿವಿಎಸ್ ವಾಹನದ ಮೂಲಕ ಸಂಸಾರದ ಬಂಡಿ

ಕವಿದ ಕಾರ್ಮೋಡ
ಧರ್ಮಸ್ಥಳದ ಗೊಮ್ಮಟನ ಸನ್ನಿಧಿಯ ಮೇಲೆ ಕವಿದಿರುವ ಕಾರ್ಮೋಡಗಳು

ಬಿತ್ತು ಜೋರು ಮಳೆ
ಮಳೆಯಲ್ಲೂ ಜನಗಳ ಓಡಾಟ.. ಛತ್ರಿ ಜೊತೆ ದೇಗುಲದ ಮುಂದೆ ನಡೆದಾಟ

ಮಳೆ ಬೀಳುವಾಗ
ಮಳೆ ಬೀಳುವಾಗ.. ಧರ್ಮಸ್ಥಳ ದೇಗುಲದ ಮುಂದಿನ ನೋಟ

ಶ್ರೀನಗರದಿಂದ ಬಂದ ಚಿತ್ರ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಮುಂಗಾರು ಮಳೆ ಪ್ರವೇಶ ಪಡೆದಿದೆ.ಕಾಶ್ಮೀರಿ ಯುವತಿಯರು ಮಳೆಯಲ್ಲಿ ನಡೆದಾಡುತ್ತಿರುವ ಚಿತ್ರ












Click it and Unblock the Notifications