ಭಾರತಕ್ಕೆ ಪರೀಕ್ಷೆ ಬರೆಯಲು ಬಂದ ಒಬಾಮಾ!
ಜೈಪುರ, ಜೂ,11: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಜ್ಯೂನಿಯರ್ ಇಂಜಿನಿಯರ್ ಹುದ್ದೆಗಾಗಿ ಪರೀಕ್ಷೆ ಬರೆಯಲು ಭಾರತಕ್ಕೆ ಬಂದಿದ್ದರೆ? ಲಾಲೂ ಕೈಗೆ ಸಿಕ್ಕ ಅಡ್ಮಿಟ್ ಕಾರ್ಡ್ ಯಾರದು? ಎಲ್ಲವೂ ಗೊಂದಲದ ಗೂಡಾಗಿತ್ತು. ಒಬಾಮಾ ಭಾವಚಿತ್ರವಿರುವ ಐಡಿ ಕಾರ್ಡ್ ಲಾಲೂ ಕೈಗೆ ತಲುಪಿದ್ದೆ ಇಷ್ಟೆಲ್ಲ ಅಚ್ಚರಿಗೆ ಕಾರಣ.
ಜ್ಯೂನಿಯರ್ ಇಂಜಿನಿಯರ್ ಹುದ್ದೆ ನಡೆಸುವ ಪರೀಕ್ಷೆಗೆ ಪ್ರವೇಶ ಪತ್ರವೊಂದು ಮಾಮೂಲಿ ಅಂಚೆ ಮೂಲಕ ಲಾಲೂ ರಾಮ್ ಮೀನಾ ಕೈ ತಲುಪಿತು. 40 ವರ್ಷ ವಯಸ್ಸಿನ ಲಾಲೂ ರಾಮ್ ಅವರ ಕೈಗೆ ಜೂ.8ಕ್ಕೆ ಈ ಪತ್ರ ತಲುಪಿದ್ದು, ಮಾರನೇ ದಿನ ಪರೀಕ್ಷೆ ಬರೆಯಬೇಕು ಎಂದು ಪ್ರವೇಶ ಪತ್ರದಲ್ಲಿ ನಮೂದಿಸಲಾಗಿತ್ತು.

ಪ್ರವೇಶ ಪತ್ರ ಸಂಖ್ಯೆ 2201000509, ಪರೀಕ್ಷಾ ಕೇಂದ್ರ, ಬದರ್ ಪುರ್ ನ ತುಗ್ಲಕಾಬಾದ್ ಮೆಟ್ರೋ ರೈಲ್ವೆ ನಿಲ್ದಾಣ ಬಳಿಯ ಕೇಂದ್ರಕ್ಕೆ ಹಾಜರಾಗಬೇಕು ಎಂದು ಹೇಳಲಾಗಿತ್ತು. ಜೊತೆಗೆ ಪ್ರವೇಶ ಪತ್ರಕ್ಕೆ ಅಧಿಕೃತ ಅಧಿಕಾರಿಗಳ ಸಹಿ ಕೂಡಾ ಇತ್ತು. ಆದರೆ, ಫೋಟೊ ಮಾತ್ರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರದ್ದಾಗಿತ್ತು.
ಇನ್ನೂ ತಮಾಷೆ ಸಂಗತಿಯೆಂದರೆ ಶಾಲೆ ಮಾಲೀಕರಾಗಿರುವ ಲಾಲೂ ರಾಮ್ ಅವರು ಜ್ಯೂನಿಯರ್ ಇಂಜಿನಿಯರ್ ಹುದ್ದೆಗಾಗಿ ಎಂದೂ ಅರ್ಜಿ ಹಾಕಿಲ್ಲವಂತೆ. ಆದರೂ ಪ್ರವೇಶ ಪತ್ರ ಕೈ ಸೇರಿದೆ.
ಎಲೆಕ್ಟ್ರಿಕಲ್, ಜನರಲ್ ಇಂಜಿನಿಯರಿಂಗ್ ಹುದ್ದೆಗಳಿಗಾಗಿ ಕೇಂದ್ರ ಸರ್ಕಾರ ನಡೆಸುವ ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ಪರೀಕ್ಷೆಯ ಪ್ರವೇಶ ಪತ್ರ ಇದಾಗಿತ್ತು.
ನನಗೆ ಈ ಪತ್ರ ಸಿಕ್ಕ ಕೂಡಲೇ ಶಾಕ್ ಆಯಿತು. ನಾನು ಯಾವತ್ತು ಪರೀಕ್ಷೆಗೆ ಅರ್ಜಿ ಹಾಕಿಲ್ಲ. ಅದಕ್ಕಿಂತ ಹೆಚ್ಚಾಗಿ ಪ್ರವೇಶ ಪತ್ರದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾವಚಿತ್ರ ಕಂಡು ಅಚ್ಚರಿ ಭಯ ಎಲ್ಲವೂ ಉಂಟಾಯಿತು ಎಂದು ಲಾಲೂ ರಾಮ್ ಹೇಳಿದ್ದಾರೆ.
ಬರಾಕ್ ಒಬಾಮಾ ಚಿತ್ರ್ರದ ಕೆಳಗಿರುವ ಸಹಿ ನನ್ನದಂತೂ ಅಲ್ಲ, ಹುಟ್ಟಿದ ದಿನಾಂಕ 05-10-1987 ಎಂದಿದೆ ನನ್ನ ಹುಟ್ಟಿದ ದಿನಾಂಕ 01-01-1973 ಎಂದು ಲಾಲೂ ನಾನು ಕಲಾ ವಿಭಾಗದಲ್ಲಿ ಪದವಿ ಪಡೆದು ಬಿಇಡ್ ಮಾಡಿದ್ದೇನೆ. ದೌಸಾದ ರಾಮ್ ಬಾಸ್ ಗ್ರಾಮದಲ್ಲಿ ಶಾಲೆ ನಡೆಸುತ್ತಿದ್ದೇನೆ ಎನ್ನುತ್ತಾರೆ.
ದೌಸಾ ಜಿಲ್ಲಾಧಿಕಾರಿ ಮುಕ್ತಾನಂದ್ ಅಗರವಾಲ್ ಹಾಗೂ ಸೈನ್ ಥಾಲ್ ಪೊಲೀಸ್ ಠಾಣೆಗಾಗಲಿ ಈ ರೀತಿ ಅಡ್ಮಿಟ್ ಕಾರ್ಡ್ ಬದಲಾವಣೆ ವಿಷಯ ಗೊತ್ತಿಲ್ಲವಂತೆ. ಒಬಾಮಾ ಫೋಟೊ ಇರೋ ಅಡ್ಮಿಟ್ ಕಾರ್ಡ್ ಹಿಡಿದು ಲಾಲೂ ಸಂಭ್ರಮಿಸಿದ್ದಷ್ಟೇ ಬಂತು. ಅಸಲಿ ಕಾರ್ಡ್ ದಾರನ ಪಾಡು ಏನಾಯ್ತೋ ಗೊತ್ತಿಲ್ಲ












Click it and Unblock the Notifications