ಎನ್ನಾರೈ: ನ್ಯೂಜೆರ್ಸಿಯಲ್ಲಿ 'ಅಮೂಲ್' ಘಟಕ ಸ್ಥಾಪನೆ

ವಡೋದರಾ, ಜೂನ್ 8: ಅಮೆರಿಕದ ಪೂರ್ವ ಕರಾವಳಿಯಲ್ಲಿ ಬಹುಸಂಖ್ಯೆಯಲ್ಲಿ ನೆಲೆಸಿರುವ ಗುಜರಾತ್ ಮತ್ತು ದಕ್ಷಿಣ ಏಷ್ಯಾ ಮೂಲದವರು 'ಭಾರತದ ಶ್ರೇಷ್ಠ ರುಚಿ'ಯನ್ನು ಸವಿಯಬಹುದಾಗಿದೆ.

ಹೌದು, ನ್ಯೂಯಾರ್ಕ್ ಸಮೀಪ ವಾಟರ್ ಲೂ ಗ್ರಾಮದಲ್ಲಿ ಡೈರಿ ಘಟಕವೊಂದನ್ನು ಸ್ಥಾಪಿಸಲು ಅಮೂಲ್ ಸಂಸ್ಥೆ ನಿರ್ಧರಿಸಿದೆ. ಈ ಸಂಬಂಧ Kaira District Cooperative Milk Producers Union Limited ಅಂದರೆ ಅಮೂಲ್ ಡೈರಿ ಸಂಸ್ಥೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.

amul-dairy-plant-new-jersey-to-make-paneer-ghee
ಪನ್ನೀರ್ ಮತ್ತು ತುಪ್ಪವನ್ನು ಈ ಘಟಕದಲ್ಲಿ ಅಮೂಲ್ ತಯಾರಿಸಲಿದೆ. ನ್ಯೂಜೆರ್ಸಿಯ ಎನ್ನಾರೈ ಪಿಯೂಶ್ ಪಟೇಲ್ ಅವರ ಡೈರಿ ಘಟಕವೊಂದು ಈಗಾಗಲೇ ಇಲ್ಲಿ ನೆಲೆಗೊಂಡಿದೆ. ಅದನ್ನು ಉಪಯೋಗಿಸಿಕೊಂಡು ಅಮೂಲ್ ತನ್ನ ಹೊಸ ಘಟಕವನ್ನು ಇಲ್ಲಿ ವಿಸ್ತರಿಸಲಿದೆ.

ನ್ಯೂಜೆರ್ಸಿಗೂ ಈ ಘಟಕ ಸಮೀಪದಲ್ಲಿದೆ. ಹಾಲು ಪೂರೈಕೆದಾರರು ಇಲ್ಲ ಹೇರಳವಾಗಿದ್ದಾರೆ. ಭಾರತೀಯರ ಸಂಖ್ಯೆಯೂ ಇಲ್ಲಿ ಹೆಚ್ಚಾಗಿದೆ. ಹಾಗಾಗಿ ನಮಗೆ ಇದು ಆಯಕಟ್ಟಿನ ಸ್ಥಳವಾಗಿದೆ. ಅಮೆರಿಕದಲ್ಲಿರುವ ಭಾರತೀಯ ರೆಸ್ಟೋರೆಂಟುಗಳಿಂದಲೂ ನಮ್ಮ ಉತ್ಪನ್ನಕ್ಕೆ ಭಾರಿ ಬೇಡಿಕೆಯಿದೆ. ಇದರಿಂದ ನಮ್ಮ ಹೊಸ ಯೋಜನೆ ಯಶಸ್ವಿಯಾಗಲಿದೆ ಎಂದು ಅಮೂಲ್ ಡೈರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಕುಮಾರ್ ತಿಳಿಸಿದ್ದಾರೆ.

ಅಮೂಲ್ ಡೈರಿ ಆರಂಭದಲ್ಲಿ ಇಲ್ಲಿ 3 ಟನ್ ಪನ್ನೀರನ್ನು ಮತ್ತು 5 ಟನ್ ತುಪ್ಪವನ್ನು ತಯಾರಿಸಲಿದೆ. ಆನಂತರ ಮತ್ತೊಂದು ಘಟಕವನ್ನು ಸ್ಥಾಪಿಸಲಿದೆ. ನ್ಯೂಯಾರ್ಕ್ ನಲ್ಲಿ ಹಾಲು ಸರಬರಾಜು ಭಾರಿ ಪ್ರಮಾಣದಲ್ಲಿದೆ. ಇದನ್ನು ಆಧಾರವಾಗಿಸಿಕೊಂಡು ಅಮೆರಿಕ, ಕೆನಡಾ ಸೇರಿದಂತೆ ಯುರೋಪ್ ರಾಷ್ಟ್ರಗಳಿಗೂ ನಮ್ಮ ಉತ್ಪನ್ನಗಳನ್ನು ರಫ್ತು ಮಾಡಲಿದ್ದೇವೆ ಎಂದು ಸಮಿಟ್ ಮಿಲ್ಕ್ ಪ್ರಾಡಕ್ಟ್ಸ್ ಮಾಲೀಕರಾದ ಪಿಯೂಶ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+