ವಿಶ್ವದ ಅತಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿ
ನ್ಯೂಯಾರ್ಕ್, ಜೂ.7: ವಿಶ್ವ ಕ್ರೀಡಾ ಲೋಕದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದರ್ ಸಿಂಗ್ ಧೋನಿ ಇದೇ ಮೊದಲ ಬಾರಿಗೆ 16ನೇ ಸ್ಥಾನಕ್ಕೇರಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಗಾಲ್ಫ್ ಪಟು ಟೈಗರ್ ವುಡ್ಸ್ ಮತ್ತೆ ನಂಬರ್ 1 ಸ್ಥಾನಕ್ಕೇರಿ ಅಚ್ಚರಿ ಮೂಡಿಸಿದ್ದಾರೆ.
ಕಳೆದ ವರ್ಷ 31ನೇ ಸ್ಥಾನದಲ್ಲಿದ್ದ ಧೋನಿ ಪ್ರಸಕ್ತ ಸಾಲಿನಲ್ಲಿ ತನ್ನ ಆದಾಯ ಗಳಿಕೆಯನ್ನು ವಾರ್ಷಿಕ 180 ಕೋಟಿ ರೂ.ಗಳಷ್ಟು ವೃದ್ಧಿಸಿಕೊಳ್ಳುವ ಮೂಲಕ 15 ಸ್ಥಾನ ಮೇಲಕ್ಕೇರಿ ಒಟ್ಟಾರೆ 100 ಜನರ ಪೈಕಿ 16ನೇ ಸ್ಥಾನ ತಲುಪಿದ್ದಾರೆ.
ಅತ್ಯಂತ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ಗಾಲ್ಫ್ ಆಟಗಾರ ಟೈಗರ್ ವುಡ್ ಪ್ರಥಮ ಸ್ಥಾನ ಕಾಪಾಡಿಕೊಂಡಿದ್ದರೆ, ಕಳೆದ ಬಾರಿ ಉತ್ತುಂಗದಲ್ಲಿದ್ದ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರಲ್ ಈ ಬಾರಿ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಬ್ಯಾಸ್ಕೆಟ್ ಬಾಲ್ ಆಟಗಾರ ಅಮೆರಿಕದ ಕೋಬೆ ಬ್ರಿಯಾಂಟ್ 3ನೇ ಸ್ಥಾನದಲ್ಲಿದ್ದು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ಕೇವಲ ಮೂವರು ಮಹಿಳೆಯರು ಮಾತ್ರ ಸ್ಥಾನಪಡೆದುಕೊಂಡಿದ್ದು, ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ 22ನೇ ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್ 10 ಶ್ರೀಮಂತ ಕ್ರೀಡಾಪಟುಗಳು ಹಾಗೂ ಕೆಲವು ಪ್ರಮುಖ ಆಟಗಾರರ ಪಟ್ಟಿ ಚಿತ್ರ ಸರಣಿಯಲ್ಲಿ ನೋಡಿ

ಟೈಗರ್ ವುಡ್ಸ್
ಒಟ್ಟು ಸಂಪಾದನೆ: $78.1 million
ಸಂಬಳ/ ಗೆದ್ದ ಮೊತ್ತ: $13.1 million
ಜಾಹೀರಾತು, ಇತರೆ: $65 million

ರೋಜರ್ ಫೆಡರರ್
ಒಟ್ಟು ಸಂಪಾದನೆ: 71.5 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 6.5 ಮಿಲಿಯನ್ ಡಾಲರ್
ಜಾಹೀರಾತು ಇತರೆ: 65 ಮಿಲಿಯನ್ ಡಾಲರ್

ಕೊಬೆ ಬ್ರಯಾಂಟ್ (ಬಾಸ್ಕೆಟ್ ಬಾಲ್)
ಒಟ್ಟು ಸಂಪಾದನೆ:61.9 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ:27.9 ಮಿಲಿಯನ್ ಡಾಲರ್
ಜಾಹೀರಾತು, ಇತರೆ:34ಮಿಲಿಯನ್ ಡಾಲರ್

ಲೆಬ್ರಾನ್ ಜೇಮ್ಸ್ (ಬಾಸ್ಕೆಟ್ ಬಾಲ್)
ಒಟ್ಟು ಸಂಪಾದನೆ:59.8 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ:17.8 ಮಿಲಿಯನ್ ಡಾಲರ್
ಜಾಹೀರಾತು, ಇತರೆ:42 ಮಿಲಿಯನ್ ಡಾಲರ್

#5 ಡ್ರೂ ಬ್ರೀಸ್ (ಅಮೆರಿಕನ್ ಫುಟ್ಬಾಲ್)
ಒಟ್ಟು ಸಂಪಾದನೆ:51 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ:40 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 11 ಮಿಲಿಯನ್ ಡಾಲರ್

#6 ಆರೋನ್ ರೊಗ್ರೆಸ್(ಅಮೆರಿಕನ್ ಫುಟ್ಬಾಲ್)
ಒಟ್ಟು ಸಂಪಾದನೆ: 49 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 43 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 6 ಮಿಲಿಯನ್ ಡಾಲರ್

#7 ಫಿಲ್ ಮೆಕೆಲ್ಸನ್ (ಗಾಲ್ಫ್)
ಒಟ್ಟು ಸಂಪಾದನೆ: 48.7 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 4.7 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 44 ಮಿಲಿಯನ್ ಡಾಲರ್

#8 ಡೇವಿಡ್ ಬೆಕ್ ಹ್ಯಾಮ್ (ಫುಟ್ಬಾಲ್)
ಒಟ್ಟು ಸಂಪಾದನೆ: 47.2 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 5.2 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 42 ಮಿಲಿಯನ್ ಡಾಲರ್

#9 ಕ್ರಿಶ್ಚಿಯಾನೊ ರೊನಾಲ್ಡೊ (ಫುಟ್ಬಾಲ್)
ಒಟ್ಟು ಸಂಪಾದನೆ: 44 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 23 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 21 ಮಿಲಿಯನ್ ಡಾಲರ್

#10 ಲಿಯಾನೆಲ್ ಮೆಸ್ಸಿ (ಫುಟ್ಬಾಲ್)
ಒಟ್ಟು ಸಂಪಾದನೆ: 41.3 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 20.3 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 21 ಮಿಲಿಯನ್ ಡಾಲರ್

#16 ಎಂಸ್ ಧೋನಿ (ಕ್ರಿಕೆಟ್)
ಒಟ್ಟು ಸಂಪಾದನೆ: 31.5 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 3.5 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 28 ಮಿಲಿಯನ್ ಡಾಲರ್

#19 ಫರ್ನಾಂಡೋ ಅಲಾನ್ಸೋ (ಎಫ್ 1)
ಒಟ್ಟು ಸಂಪಾದನೆ: 30 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 28 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 2 ಮಿಲಿಯನ್ ಡಾಲರ್

#22 ಮರಿಯಾ ಶೆರಪೋವಾ (ಟೆನಿಸ್)
ಒಟ್ಟು ಸಂಪಾದನೆ: 29 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 6 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 23 ಮಿಲಿಯನ್ ಡಾಲರ್

#26 ಲೂಯಿಸ್ ಹ್ಯಾಮಿಲ್ಟನ್ (ಎಫ್ 1)
ಒಟ್ಟು ಸಂಪಾದನೆ: 27.5 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 26 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 1.5 ಮಿಲಿಯನ್ ಡಾಲರ್

#28 ನೋವಾಕ್ ಜೋಕೊವಿಕ್ (ಟೆನಿಸ್)
ಒಟ್ಟು ಸಂಪಾದನೆ: 26.9 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 12.9 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 14 ಮಿಲಿಯನ್ ಡಾಲರ್

#30 ರಫೆಲ್ ನಡಾಲ್(ಟೆನಿಸ್)
ಒಟ್ಟು ಸಂಪಾದನೆ: 26.4 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 5.4 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 21 ಮಿಲಿಯನ್ ಡಾಲರ್

#40 ಉಸೇನ್ ಬೋಲ್ಟ್ (ಅಥ್ಲೆಟಿಕ್ಸ್)
ಒಟ್ಟು ಸಂಪಾದನೆ: 24.2 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 200,000 ಡಾಲರ್
ಜಾಹೀರಾತು, ಇತರೆ: 24 ಮಿಲಿಯನ್ ಡಾಲರ್

#51 ವಾಲೆಂಟಿನೋ ರೊಸ್ಸಿ (ಮೋಟರ್ ರೇಸಿಂಗ್)
ಒಟ್ಟು ಸಂಪಾದನೆ: 22 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 12 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 10 ಮಿಲಿಯನ್ ಡಾಲರ್

#51 ಸಚಿನ್ ತೆಂಡೂಲ್ಕರ್
ಒಟ್ಟು ಸಂಪಾದನೆ: 22 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 4 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 18 ಮಿಲಿಯನ್ ಡಾಲರ್

#61 ವೇಯ್ನ್ ರೂನಿ (ಫುಟ್ಬಾಲ್)
ಒಟ್ಟು ಸಂಪಾದನೆ: 21.1 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 18.1 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 3 ಮಿಲಿಯನ್ ಡಾಲರ್

#68 ಸೆರೆನಾ ವಿಲಿಯಮ್ಸ್ (ಟೆನಿಸ್)
ಒಟ್ಟು ಸಂಪಾದನೆ: 20.5 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 8.5 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 12 ಮಿಲಿಯನ್ ಡಾಲರ್

#72 ಫರ್ನಾಂಡೋ ಟೊರೆಸ್ (ಫುಟ್ಬಾಲ್)
ಒಟ್ಟು ಸಂಪಾದನೆ: 20 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 17 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 3 ಮಿಲಿಯನ್ ಡಾಲರ್












Click it and Unblock the Notifications