ರಿಲೆಯನ್ಸ್: ಬೇಕಾಗಿದ್ದಾರೆ 7000 ಟೆಲಿಕಾಂ ಇಂಜಿನಿಯರ್ಸ್

ಇನ್ನೊಂದು ವರ್ಷದಲ್ಲಿ RIL 4G ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಆ ನಿಟ್ಟಿನಲ್ಲಿ ತಯಾರಿಗಳು ನಡೆದಿವೆ ಎಂದು RIL Chairman- Managing Director Mukesh Ambani ಕಂಪನಿಯ ಷೇರುದಾರರಿಗೆ ತಿಳಿಸಿದ್ದಾರೆ.
ತಮ್ಮ ಕಂಪನಿಯು ಟೆಲಿಕಾಂ ಉದ್ಯಮದಲ್ಲಿ ಇದುವರೆಗೂ 18,000 ಕೋಟಿ ರೂ. ಹೂಡಿಕೆ ಮಾಡಿದೆ. ಸ್ಪೆಕ್ಟ್ರಂ ಖರೀದಿಗಾಗಿ ಹೆಚ್ಚು ಹಣ ವಿನಿಯೋಗವಾಗಿದೆ. ವರ್ಷದ ಹಿಂದೆ 700ಕ್ಕೂ ಕಡಿಮೆ ವೃತ್ತಿಪರರು ನಮ್ಮ ಕಂಪನಿಯಲ್ಲಿದ್ದರು. Reliance Jio Infocomm ತಂಡ ಈಗ ಒಟ್ಟು 3,000 ಉದ್ಯೋಗಿಗಳನ್ನು ಹೊಂದಿದೆ. ಸದ್ಯದಲ್ಲೇ ಈ ಸಂಖ್ಯೆ 10,000 ಕ್ಕೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮುಕೇಶ್ ಭರವಸೆಯ ಮಾತುಗಳನ್ನು ಹೇಳಿದ್ದಾರೆ.
ಪ್ರಧಾನ ವೆಂಡರುಗಳು ಮತ್ತು ಸರಬರಾಜುದಾರರನ್ನು ಈಗಾಗಲೇ ಗುರುತಿಸಲಾಗಿದೆ. ಮುಂದಿನ 12 ತಿಂಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಲು ನಾವು ಸರ್ವ ಸಜ್ಜಾಗಿದ್ದೇವೆ. ಇದರಿಂದ ವಿಶ್ವಮಟ್ಟದ high-speed broadband ಸೇವೆ ವೇಗೋತ್ಕರ್ಷ ಪಡೆಯಲಿದೆ. ಇದು ದೇಶದ ಪ್ರತಿಯೊಂದು ಸಾಮಾಜಿಕ-ಆರ್ಥಿಕ ಕ್ಷೇತ್ರಗಳನ್ನು ತಲುಪಲಿದ್ದು, ದೇಶವು ಡಿಜಿಟಲ್ ವಲಯದಲ್ಲಿ ತೀವ್ರ ಪ್ರಗತಿ ಕಾಣಲಿದೆ ಎಂದು ಅವರು ಆಶಿಸಿದ್ದಾರೆ.
ಬ್ರಾಡ್ ಬ್ಯಾಂಡ್ ಲಕ್ಷರಿಯೂ ಅಲ್ಲ ಕೈಗೆಟುಕದ ಸೇವೆಯೂ ಅಲ್ಲ ಎಂಬುದನ್ನು ತಮ್ಮ ಕಂಪನಿ ಸಾಧಿಸಿ ತೋರಲಿದೆ ಎಂದು ಅವರು ತುಂಬು ಭರವಸೆಯ ಮಾತುಗಳನ್ನಾಡಿದ್ದಾರೆ. ಇದಕ್ಕೆ ತಮ್ಮ ಅನಿಲ್ ಅಂಬಾನಿ ಸಹ ಕೈಜೋಡಿಸಿದ್ದಾರೆ.












Click it and Unblock the Notifications