ಉದ್ಯೋಗದ ನೆಪದಲ್ಲಿ ಅತ್ಯಾಚಾರವೆಸಗಿದ ಉದ್ಯಮಿ

ಸುಶೀಲ್ ಅಗರವಾಲ್ ಎಂಬ ಉದ್ಯಮಿ 26 ವರ್ಷದ ಯುವತಿಗೆ ಉದ್ಯೋಗ ಕೊಡಿಸುವುದಾಗಿ ಆಸೆ ತೋರಿಸಿ, ಆಕೆಯನ್ನು ತನ್ನ ಕಾರಿನಲ್ಲಿ ಹಲವು ಬಾರಿ ರೇಪ್ ಮಾಡಿದ್ದಾನೆ ಎಂದು ಆಪಾದಿಸಲಾಗಿದೆ. ಸುಶೀಲ್ ಅಗರವಾಲ್ ಸದ್ಯ ಒಂದು ವಾರ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಈ ಹಿಂದೆಯೂ ಸದರಿ ಉದ್ಯಮಿ ಮೇಲೆ ಪೊಲೀಸರು ಇಂತಹುದೇ ಕೇಸುಗಳನ್ನು ದಾಖಲಿಸಿದ್ದರು. ಆದರೆ ಆ ಆರೋಪಗಳಿಂದ ಮುಕ್ತನಾಗುವಲ್ಲಿ ಆತ ಯಶಸ್ವಿಯಾಗಿದ್ದ. ಹಾಗಾಗಿ ಈ ಪ್ರಸಂಗದಲ್ಲೂ ಪೊಲೀಸರು ಎಚ್ಚರಿಕೆಯ ನಡೆ ಹಾಕಿದ್ದಾರೆ. ಉದ್ಯಮಿ ಸುಶೀಲ್ ಅಗರವಾಲ್ ವಿರೋಧಿಗಳು ಇಂತಹ ಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ ಎನ್ನಲಾಗಿದೆ.
ಸದರಿ ಪ್ರಕರಣದಲ್ಲೂ ಬಾಧಿತ ಯುವತಿ ನಮಿತಾ (ಹೆಸರು ಬದಲಾಯಿಸಲಾಗಿದೆ) ಘಟನೆಯ ವಿವರ ನೀಡಲು ವಿಫಲರಾಗಿದ್ದಾರೆ. ತಾನು ಯಾವ ಕಾರಿನಲ್ಲಿ ಅತ್ಯಾಚಾರಕ್ಕೊಳಗಾದೆ ಎಂಬುದನ್ನು ಗುರುತಿಸಲು ಆಕೆ ವಿಫಲರಾಗಿದ್ದಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣ ದೂರುಗಳು ಗಂಭೀರತೆ ಪಡೆಯುತ್ತಿರುವುದರಿಂದ ಈಗಲೂ ನಮಿತಾ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೇಸು ದಾಖಲಿಸಿಕೊಂಡಿದ್ದೇವೆ. ಸೀತಾಬುಲ್ದಿ ನಿವಾಸಿ ನಮಿತಾ ದೂರಿನನ್ವಯ ಉದ್ಯೋಗ ಆಮಿಷವೊಡ್ಡಿ ಆಕೆಯ ಮೇಲೆ ರೇಪ್ ನಡೆದಿರುವ ಪ್ರಕರಣದ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊದಲು ಸಮಾಜಕ್ಕೆ ಅಂಜಿ ಪ್ರಕರಣವನ್ನು ಬಹಿರಂಗಪಡಿಸದ ಬಾಧಿತ ನಮಿತಾ ನಂತರ ಆಕೆಯ ಅಕ್ಕ ಮತ್ತು ಅಮ್ಮ ಧೈರ್ಯ ತುಂಬಿದಾಗ ಪೊಲೀಸರಿಗೆ ದೂರನ್ನು ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications