ಮೂರ್ತಿ ಮರುಪ್ರತಿಷ್ಠಾಪನೆ: ಇನ್ಫಿ ಷೇರಿಗೆ ಅಗ್ನಿಪರೀಕ್ಷೆ

ಹಾಗಾಗಿಯೇ ಬೆಳೆದುನಿಂತ 32 ವರ್ಷದ ಕೂಸನ್ನು ಆರೈಕೆ ಮಾಡಲು ಕಂಪನಿಯ ಪಿತಾಮಹ ಎನ್ಆರ್ ನಾರಾಯಣ ಮೂರ್ತಿ ಅವರೇ ಆತಂಕದಿಂದ ಧಾವಿಸಿದ್ದಾರೆ.
ಅವರೇ ಹೇಳಿದಂತೆ ಇದು ನಿಜಕ್ಕೂ ಇನ್ಫಿಗೆ ಅನಪೇಕ್ಷಿತ ಆದರೆ ಅನಿರೀಕ್ಷಿತವಂತೂ ಅಲ್ಲ. ಇತ್ತೀಚೆಗೆ ಇನ್ಫಿ ಆರ್ಥಿಕ ಸಾಧನೆ ಜತೆಜತೆಗೆ ಐಟಿ ವಲಯದಲ್ಲಿ ಆಗುತ್ತಿರುವ ತಲ್ಲಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅನಿರೀಕ್ಷಿತವೇನೂ ಅಲ್ಲ.
ಜೂನ್ 1, 2013ರಿಂದ ಜಾರಿಗೆ ಬರುವಂತೆ ಬೋರ್ಡ್ ಚೇರ್ಮನ್ ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ನಾರಾಯಣಮೂರ್ತಿ ಇನ್ಫಿಗೆ ಮರಳಿದ್ದಾರೆ. 2011ರಲ್ಲಿ ಇನ್ಫಿಗೆ ರಾಜೀನಾಮೆ ನೀಡಿ ಹೊರ ನಡೆದಾಗ ಕಂಪನಿ ಚೆನ್ನಾಗಿಯೇ ಇತ್ತು. ಆ ನಂತರವೇ ಕಂಪನಿ ಸಾಧನೆ ಇಳಿಜಾರುತ್ತಾ ಸಾಗಿದ್ದು.
BSE 2,407.6065.45 (2.79%) NSE 2,411.7070.25 (3.00%)
ಕಂಪನಿ ಇಂದು ಮತ್ತೊಂದು ಮಜಲಿಗೆ ಬಂದು ನಿಂತಿದೆ. 32 ವರ್ಷದ ಕಂಪನಿಗೆ ಇಂದು ಅಗ್ನಿಪರೀಕ್ಷೆ. ಜತೆಗೆ ನಾರಾಯಣ ಮೂರ್ತಿ ನೇಮಕಕ್ಕೆ ಉದ್ಯಮ ಅದರಲ್ಲೂ ಷೇರು ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸುತ್ತದೆ ಮತ್ತು ಪ್ರತಿಸ್ಪಂದಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಹಾಗೆ ನೋಡಿದರೆ ಮೂರ್ತಿ ಪ್ರತಿಷ್ಠಾಪನೆ ಕಂಪನಿಗೆ ಅತ್ಯಗತ್ಯವಾಗಿತ್ತು. ಮಾಗಿದ ಮೂರ್ತಿ ಇನ್ಫಿಗೆ ಮರುಜೀವ ನೀಡಬೇಕಿದೆ. ಆದರೆ ಮೂರು ದಶಕಗಳ ಹಿಂದೆ ಐಟಿ ಉದ್ಯಮಕ್ಕೆ ಪೂರಕವಾಗಿತ್ತು. ಆದರೆ ಇಂದು ಉದ್ಯಮದ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ. ಹಾಗಾಗಿ ಡಾ. ನಾರಾಯಣ ಮೂರ್ತಿ ತಮ್ಮ ಇನ್ಫೋಸಿಸ್ ಕಂಪನಿಗೆ ಹೇಗೆ ಚಿಕಿತ್ಸೆ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಅದಕ್ಕೂ ಮುನ್ನ ಮಾರುಕಟ್ಟೆಯಲ್ಲಿ ಜನ ಮೂರ್ತಿ ಪ್ರತಿಷ್ಠಾಪನೆಗೆ ಹೇಗೆ ಮಣೆ ಹಾಕುತ್ತಾರೆ ಎಂಬುದನ್ನು ಇಡೀ ಉದ್ಯಮ ಎಚ್ಚರಿಕೆ/ ಆತಂಕದಿಂದ ಎದುರು ನೋಡುತ್ತಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ trading session ಎಂದಿನಂತೆ ವಾರದ ಆರಂಭ ಪಡೆಯುತ್ತಿದ್ದಂತೆ ಇನ್ಫಿಗೆ ಏನು ಕಾದಿದೆಯೋ ಎಂಬುದನ್ನು ಸಾಮಾನ್ಯ ಜನ ಕುತೂಹಲದಿಂದ ನೋಡುವಂತಾಗಿದೆ.
ಸದ್ಯಕ್ಕಿಂದು ಮೂರ್ತಿ ಅವರ ಹಳೆಯ ರೆಕಾರ್ಡ್ ಅನ್ನು ನೋಡಿ BSE ಧನಾತ್ಮಕವಾಗಿ ಸ್ವಾಗತ ಕೋರುವ ಅಂದಾಜಿದೆಯಾದರೂ ವ್ಯವಹಾರದಲ್ಲಿ ಭಾವನಾತ್ಮಕತೆಗೆ ಜಾಗವಿರುವುದಿಲ್ಲ. ಕಂಪನಿ ಮುಂದಿನ ದಿನಗಳಲ್ಲಿ ಹೇಗೆ ಮತ್ತೆ ಪ್ರಗತಿಪಥದತ್ತ ಹೊರಳುತ್ತದೆ ಎಂಬುದನ್ನು ಆಧರಿಸಿ, BSE ಪ್ರತಿಸ್ಪಂದಿಸುತ್ತದೆ ಅನ್ನುವುದು ವಾಸ್ತವ.
All the Best Mr. Murthy & Infy!












Click it and Unblock the Notifications