ಬರ್ತ್ ಡೇ ದಿನ ಯುವತಿಯ ರೇಪ್; ಬಂಧನ

ಜೈಲಿಗೆ ಕರೆದುಕೊಂಡು ಹೋಗುವುದಾಗಿ ಬೆದರಿಸಿ, ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ರೇಪ್ ಮಾಡಿದ ಪೊಲೀಸ್ ಅಧಿಕಾರಿ, ನಂತರ ಆಕೆಯನ್ನು ವೈದ್ಯಕೀಯ ಕಾಲೇಜು ಎದುರು ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಮಧ್ಯೆ, ಆರೋಪಿ ಅಧಿಕಾರಿಯನ್ನು ಬಂಧಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಕೋಲ್ಕೊತ್ತಾ ವರದಿ: ಐರ್ಲೆಂಡಿನ 21 ವರ್ಷದ ಯುವತಿಯ ಮೇಲೆ ಕಾಳಿಘಾಟ್ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಅತ್ಯಾಚಾರವೆಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಈ ಸಂಬಂಧ ದೂರು ನೀಡಿದ ಬಾಧಿತ ಯುವತಿಯು 'ಮೇ 31ರಂದು ಒಂದು ಪಬ್ ನಲ್ಲಿ ನಾನು ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದೆ. ಆ ಸಂದರ್ಭದಲ್ಲಿ ಆರೋಪಿ ಸುಜಯ್ ಮಿತ್ರಾನನ್ನು ಭೇಟಿಯಾದೆ. ಆ ನಂತರ ಸ್ನೇಹದ ಮೇಲೆ ಆತ ನನ್ನನ್ನು ಆತನ ಮನೆಗೆ ಕರೆದೊಯ್ದ. ಅಲ್ಲಿ ನನ್ನ ಮೇಲೆ ಅತ್ಯಚಾರವೆಸಗಿಬಿಟ್ಟ' ಎಂದು ಅಲವತ್ತುಕೊಂಡಿದ್ದಾಳೆ.
ಯುವತಿಯ ದೂರನ್ನು ಆಧರಿಸಿ ನಿನ್ನೆ ಭಾನುವಾರ ನಾವು ಆರೋಪಿಯನ್ನು ಬಂಧಿಸಿದ್ದೇವೆ. ಮುಂದಿನ ವಿಚಾರಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿನಿ ರೇಪ್; ಶಿಕ್ಷಕನ ಬಂಧನ
ಅಪ್ರಾಪ್ತ ಬಯದ್ದಿನ ಹುಡುಗಿಯ ಮೇಲೆ ರೇಪ್ ಮಾಡಿದ ಆಪಾದನೆ ಮೇಲೆ ಉತ್ತರಪ್ರದೇಶದ ಗೋಂಡಾದಲ್ಲಿ ಶಿಕ್ಷಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಶಾಲೆಯ ಶಿಕ್ಷಕನೊಬ್ಬ ಅಪ್ರಾಪ್ತ ವಯಸ್ಸಿನ ತನ್ನ ವಿದ್ಯಾರ್ಥಿನಿ ಮೇಲೆ ಅತ್ಯಚಾರಾವೆಸಗಿದ್ದು, ತತ್ಸಂಬಂಧ ಪೊಲೀಸರು ಆತನನ್ನು ನಿನ್ನೆ ಬಂಧಿಸಿದ್ದಾರೆ. ದಿಲೀಪ್ ಎಂ
ಮೇ 25 ಬಾಲಕಿಯು ತನ್ನ ಶಿಕ್ಷಕ ದಿಲೀಪನ ಮನೆಗೆ ಟ್ಯೂಶನ್ ಹೇಳಿಸಿಕೊಳ್ಳಲು ಹೋಗಿದ್ದಾಳೆ. ಆ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಬಾಲಕಿಯು ಶನಿವಾರ ತನ್ನ ಅವಸ್ಥೆಯನ್ನು ಮನೆಯವರೊಂದಿಗೆ ಹೇಳಿಕೊಂಡಾಗ ವಿಷಯ ಬಹಿರಂಗವಾಗಿದೆ. ಪೋಷಕರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದಾಗ ಆರೋಪಿ ದಿಲೀಪನನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications