ನಕಲಿ ಟೆಲಿ ಮಾರ್ಕೆಟಿಂಗ್ ಜಾಲ,ಇಬ್ಬರ ಬಂಧನ

arrest
ಬೆಂಗಳೂರು, ಜೂ. 3: ಪ್ರತಿಷ್ಠಿತ ಟೆಲಿ ಮಾರ್ಕೆಟಿಂಗ್ ಕಂಪನಿ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಬ್ಬರನ್ನು ಬಂಧಿಸಿರುವ ಪೊಲೀಸರು, ಕಂಪನಿಗಳ ನಕಲಿ ಆರೋಗ್ಯ ಉತ್ಪನ್ನಗಳನ್ನು ಇವರು ರಾಜ್ಯಾದ್ಯಂತ ಮಾರಾಟ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಬೆಂಗಳೂರಿನ ಕೆ.ಜಿ. ಹಳ್ಳಿ ನಿವಾಸಿ ಮೊಹಮದ್ ಖಮರುದ್ದೀನ್ (36) ಮತ್ತು ಹಳೇ ಗುಡ್ಡದಹಳ್ಳಿ ಮೊಹಮದ್ ಮೊಯಿನುದ್ದೀನ್ (36) ಬಂಧಿತರು. ಸಿಸಿಬಿ ಪೊಲೀಸರು ಇವರಿಂದ 5 ಲಕ್ಷ ರೂ. ಮೌಲ್ಯದ ನಕಲಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಸಿದ್ಧ ಟೆಲಿ ಮಾರ್ಕೆಟಿಂಗ್ ಕಂಪನಿಗಳು ಇವರ ಟಾರ್ಗೆಟ್ ಆಗಿತ್ತು. ಅಹಮದಾಬಾದ್ ಮೂಲದ ಫೇರ್ ಪ್ರೋ, ಸಂಧಿಸುಧಾ ಪ್ಲಸ್, ಮೆಟಾ ಸ್ಲಿಮ್, ಝೀರೋ ಅಡಿಕ್ಷನ್ ಉತ್ಪನ್ನಗಳನ್ನು ನಕಲು ಮಾಡಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಾರಾಟ ಮಾಡಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಟೆಲಿಮಾರ್ಟ್ ಕಂಪನಿಗಳು ಟಿವಿ ಜಾಹೀರಾತುಗಳ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಬಂಧಿತರು ಕಂಪನಿಯ ಹೆಸರನ್ನು ಬಳಸಿಕೊಂಡು, ಜನರನ್ನು ವಂಚಿಸುತ್ತಿದ್ದರು. ಬಂಧಿತ ಆರೋಪಿಗಳು ಕಳೆದ ಎರಡು ವರ್ಷಗಳಿಂದ 60 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ವಹಿವಾಟು ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಸಿಕ್ಕಿದ್ದು ಹೇಗೆ : ನಕಲಿ ಉತ್ಪನ್ನಗಳ ಮೇಲೆ ಅಸಲಿ ಕಂಪನಿಯ ವಿಳಾಸ ಮುದ್ರಿಸಿ ಇವರು ಮಾರಾಟ ಮಾಡುತ್ತಿದ್ದರು. ನಕಲಿ ಉತ್ಪನ್ನ ಬಳಸಿದ ಸಾರ್ವಜನಿಕರು ವಿಳಾಸಕ್ಕೆ ದೂರು ನೀಡುತ್ತಿದ್ದರು. ಹಲವಾರು ಕಂಪನಿಗಳು ಸಿಸಿಬಿ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದವು ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಸಾಮಾಜಿಕ ತಾಣಗಳ ಮೂಲಕ ಪ್ರಚಾರ : ನಕಲಿ ವಸ್ತುಗಳನ್ನು ತಯಾರಿಸಿದ ಇವರು ಸಾಮಾಜಿಕ ತಾಣಗಳು ಮತ್ತು ಪೋನ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ನಂತರ ಅವರಿಗೆ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ನಕಲಿ ಮೈಕ್ರೋಸಾಫ್ಟ್ : ಮೈಕ್ರೋಸಾಫ್ಟ್ ಕಂಪನಿಯ ಹೆಸರಿನಲ್ಲಿ ನಕಲಿ ಸಾಫ್ಟ್‌ವೇರ್ ಸಿಡಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕಲಾಸಿಪಾಳ್ಯ ಮೂಲದವರಾದ ಮುರುಳಿ (20), ಚಾಮರಾಜಪೇಟೆ ನಿವಾಸಿ ಭವಾನಿ (20) ಬಂಧಿತರು.

ಒಟ್ಟು 6 ಲಕ್ಷ ರೂ. ಮೌಲ್ಯದ 47 ನಕಲಿ ಸಾಫ್ಟ್‌ವೇರ್ ಸಿಡಿಗಳನ್ನು ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಕಂಪನಿ ಹೆಸರಿನಲ್ಲಿ ವಿಂಡೋಸ್ 7, 8, ಸಿಡಿಗಳನ್ನು ತಯಾರಿಸಿ ಇವರು ಮಾರಾಟ ಮಾಡುತ್ತಿದ್ದರು. ಪ್ರಿನ್ಸ್ ಇನ್‌ಫೋಟೆಕ್, ಹರಿ ಸಿಸ್ಟಮ್ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, ನಕಲಿ ಸಿಡಿಗಳನ್ನು ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+