ಟಿವಿ ಜಾಹೀರಾತುಗಳಿಗೆ ಕತ್ತರಿ ಹಾಕಿದ ಟ್ರಾಯ್

ಭಾರತೀಯ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ಟಿವಿ ಜಾಹೀರಾತುಗಳ ಸಮಯಗಳಿಗೆ ಕತ್ತರಿ ಹಾಕಿದೆ. ಗಂಟೆಗೆ 12 ನಿಮಿಷಗಳ ಕಾಲ ಮಾತ್ರ ಜಾಹೀರಾತು ಪ್ರಸಾರ ಮಾಡಬೇಕೆಂದೆ ಆದೇಶ ಹೊರಡಿಸಿದೆ. ಆದರೆ, ಈ ಆದೇಶ ಜಾರಿಗೆ ಬರುವುದು ಅಕ್ಟೋಬರ್ ನಿಂದ.
ಕೇಬಲ್ ಟೆಲಿವಿಷನ್ ಕಾಯಿದೆಗಳ ಪ್ರಕಾರ ಈ ಕಾನೂನು ಎಂಟು ವರ್ಷಗಳಿಂದ ಜಾರಿಯಲ್ಲಿತ್ತು. ಆದರೆ, ಅದನ್ನು ಯಾರು ಸಮರ್ಪಕವಾಗಿ ಅನುಷ್ಠಾನಗೊಳಿಸಿರಲಿಲ್ಲ. ಸದ್ಯ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ. ಆದ್ದರಿಂದ ಜಾಹೀರಾತು ಸಮಯಕ್ಕೆ ಕತ್ತರಿ ಬಿದ್ದಿದೆ.
ಟ್ರಾಯ್ ಆದೇಶದಿಂದಾಗಿ ವೀಕ್ಷಕರಿಗೆ ಕೊಂಚ ನೆಮ್ಮದಿ ಉಂಟಾಗಿದೆ. ಆದರೆ, ಈ ಆದೇಶ ಪ್ರಸಾರಕ ಸಂಸ್ಥೆಗಳು ಹಾಗೂ ಜಾಹೀರಾತು ಕಂಪನಿಗಳಿಗೆ ನಷ್ಟ ಉಂಟು ಮಾಡಲಿದೆ ಎಂಬುದು ಕಂಪನಿಗಳ ಲೆಕ್ಕಾಚಾರ. ಆದ್ದರಿಂದ ಅಕ್ಟೋಬರ್ ನಿಂದ ಜಾರಿಗೆ ತರುವಂತೆ ಕೇಂದ್ರದ ಮನವೊಲಿಸಿವೆ.
ಯಾವುದೇ ಪ್ರಸಾರಕರು ಈ ಕಾಯ್ದೆಯನ್ನು ತಕ್ಷಣ ಜಾರಿಗೊಳಿಸುವುದು ಸಾಧ್ಯವಿಲ್ಲ. ಹಂತ ಹಂತವಾಗಿ ಜಾರಿಗೊಳಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿವೆ. ಆದ್ದರಿಂದ ನಿಧಾನವಾಗಿಯಾದರೂ ಈ ನಿಯಮ ಅನುಷ್ಠಾನವಾಗಲಿದೆ.(ನಿಯಮ ಹೇಳುವುದೇನು?)
ಟ್ರಾಯ್ ಕಟ್ಟುನಿಟ್ಟಿನ ನಿಯಮ ರೂಪಿಸುವ ಮೂಲಕ ಜನರಿಗೆ ಕೊಂಚ ಸಮಾಧಾನ ನೀಡಿದೆ. ಜಾಹೀರಾತು ಬಂದ ತಕ್ಷಣ ಚಾನಲ್ ಬದಲಾವಣೆ ಮಾಡುವ ಕಿರಿಕಿರಿಯಿಂದ ಜನರು ಪಾರಾಗಿ, ಸಂತೋಷದಿಂದ ಸಿನಿಮಾ ಮತ್ತು ಧಾರವಾಹಿಗಳನ್ನು ವೀಕ್ಷಿಸಬಹುದು.












Click it and Unblock the Notifications