ಪಿರಿಯಾಪಟ್ಟಣ: ಠೇವಣಿ ನಷ್ಟದತ್ತ ಮುಖಮಾಡಿದ ಬಿಜೆಪಿ

ಹಿಂದಿನ ಸುದ್ದಿ: ದಾಖಲೆಯ ಪ್ರಮಾಣದಲ್ಲಿ ಮತಚಲಾಯಿಸಿದ ಪಿರಿಯಾಪಟ್ಟಣದ ಮತದಾರರು ಬಿಜೆಪಿಗೆ ಹೀನಾಯಸೋಲುಣಿಸುತ್ತಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿ ಸಣ್ಣಮೊಗೇಗೌಡ ಅವರ ಸಾವಿನಿಂದಾಗಿ ಮತದಾನ ಮುಂದೂಡಲಾಗಿತ್ತು. ಅವರ ಸಾವಿನಿಂದಾಗಿ ಪಕ್ಷಕ್ಕೆ ಅನುಕಂಪದ ಮತ ಬೀಳುತ್ತದೆ ಎಂದು ಎಣಿಸಲಾಗಿತ್ತು. ಆದರೆ ಬುದ್ಧಿವಂತ ಮತದಾರ ಬೇರೆಯದೇ ಉತ್ತರ ನೀಡುತ್ತಿದ್ದಾನೆ.
5 ಸುತ್ತಿನ ಮತಗಳ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಇದುವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಜೆಡಿಎಸ್ ಈಗ ಹಿನ್ನಡೆಯಲ್ಲಿದೆ. ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ.
ಈ ಮಧ್ಯೆ ಬಿಜೆಪಿಯನ್ನು ಕೇಳುವವರೇ ಇಲ್ಲವಾಗಿದೆ. ಬಿಜೆಪಿ ಠೇವಣಿ ನಷ್ಠ ಅನುಭವಿಸಿದರೂ ಆಶ್ಚರ್ಯವಿಲ್ಲ. ಇದರಿಂದ ಅಧಿಕೃತವಾಗಿ ಪ್ರತಿಪಕ್ಷವಾಗಿ ಹೊರಹೊಮ್ಮಬಹುದಾಗಿದ್ದ ಅವಕಾಶವನ್ನು ಬಿಜೆಪಿ ಕಳೆದುಕೊಂಡಿದೆ.
ಜೆಡಿಎಸ್ ಕಾಂಗ್ರೆಸ್ ತಲಾ 18ಸಾವಿರ ಮತಗಳ ಗಡಿ ದಾಟಿದ್ದರೆ ಬಿಜೆಪಿ ಏದುಸಿರುಬಿಡುತ್ತಾ 1 ಸಾವಿರದ ಗಡಿ ದಾಟಿದೆ. ಬಿಎಸ್ಸಾರ್ ಅಭ್ಯರ್ಥಿಯೇ ಬಿಜೆಪಿಗಿಂತ ತುಸು ಮುಂದಿದ್ದಾರೆ.
ಅಭ್ಯರ್ಥಿಗಳು
ಜೆಡಿಎಸ್ - ಕೆ.ಮಹದೇವ್
ಕಾಂಗ್ರೆಸ್ - ಕೆ.ವೆಂಕಟೇಶ್
ಬಿಜೆಪಿ - ಆರ್.ಟಿ. ಸತೀಶ್ -
ಬಿಎಸ್‌ಆರ್ ಕಾಂಗ್ರೆಸ್ - ಎಚ್.ಡಿ. ಗಣೇಶ್
ಕೆಜೆಪಿ - ಎಸ್.ಸಿ.ಬಸವರಾಜು
ಪಕ್ಷೇತರ ಅಭ್ಯರ್ಥಿ - ಕೆ.ಎಸ್. ಶಿವಕುಮಾರ್












Click it and Unblock the Notifications