Get Updates
Get notified of breaking news, exclusive insights, and must-see stories!

ಬೆಂಗಳೂರು: ಇಬ್ಬರು ಟೆಕ್ಕಿಗಳ ನಿಗೂಢ ಆತ್ಮಹತ್ಯೆ

Bangalore two techies suicide
ಬೆಂಗಳೂರು, ಮೇ 31: ಇಬ್ಬರು ಯುವ ಟೆಕ್ಕಿಗಳು ನಿನ್ನೆ ನಗರದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಗರುಡಾಚಾರ್ ಪಾಳ್ಯದಲ್ಲಿ ಪುಷ್ಪರಾಜ್ ಎಂಬುವವರು ಸಾಲಕ್ಕೆ ಹೆದರಿ ನೇಣಿಗೆ ಶರಣಾಗಿದ್ದಾರೆ. ಇನ್ನು, ಕೋರಮಂಗಲದಲ್ಲಿ ಮಡಿಕೇರಿ ಮೂಲದ ನಿಶಿತಾ ಭೀಮಯ್ಯ ಸಹ ನೇಣು ಹಾಕಿಕೊಂಡು ಸಾವನ್ನಪಿದ್ದಾರೆ. ಆದರೆ ಎರಡೂ ಸಾವುಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ಪ್ರಕರಣಗಳು ನಿಗೂಢವಾಗಿವೆ.

ತಮಿಳುನಾಡಿನ ವೆಲ್ಲೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಪುಷ್ಪರಾಜ್ (27) ಕೇವಲ 70 ಸಾವಿರ ರೂಪಾಯಿ ಸಾಲಕ್ಕೆ ಹೆದರಿ ನೇಣು ಹಾಕಿಕೊಂಡಿದ್ದಾರೆ. ಇವರು ಸಾಫ್ಟ ವೇರ್ ದಿಗ್ಗಜ ಅಕ್ಸೆಂಚರ್ ಕಂಪನಿಯಲ್ಲಿ ಟೆಕ್ಕಿಯಾಗಿದ್ದರು.

ಮಹದೇವಪುರದ ಗರುಡಾಚಾರ್ ಪಾಳ್ಯದಲ್ಲಿ ಅಪಾರ್ಟ್ ಮೆಂಟಿನಲ್ಲಿ ದೊಡ್ಡಪ್ಪನ ಮಗ ಮತ್ತು ಇತರೆ 5 ಮಂದಿ ಸ್ನೇಹಿತರೊಟ್ಟಿಗೆ ಮೃತ ಪುಷ್ಪರಾಜ್ ವಾಸವಾಗಿದ್ದರು. ಬುಧವಾರ ರಾತ್ರಿ ಫ್ಯಾನಿಗೆ ನೇಣು ಹಾಕಿಕೊಂಡು ಗೋಣು ಚೆಲ್ಲಿದ್ದಾರೆ. ಪುಷ್ಪರಾಜ್ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಪೊಲೀಸರು ಪುಷ್ಪರಾಜ್ ಸಾವಿನ ಬಗ್ಗೆ ವಿವಿಧ ದಿಕ್ಕುಗಳಿಂದ ತನಿಖೆ ಆರಂಭಿಸಿದ್ದಾರೆ.

ಮಡಿಕೇರಿ ಟೆಕ್ಕಿ ನಿಗೂಢ ಆತ್ಮಹತ್ಯೆ:
ಬೆಳ್ಳಂದೂರು ಸಮೀಪದ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಸೇವೆ ಸಲ್ಲಿಸುತ್ತಿದ್ದ ನಿಶಿತಾ ಭೀಮಯ್ಯ ಮ,ಂಗಳವಾರ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಗುರುವಾರ ಮಧ್ಯಾಹ್ನ ಇವರ ಸಾವು ಬೆಳಕಿಗೆ ಬಂದಿದೆ.

ಮಡಿಕೇರಿಯ ನಿಶಿತಾ ಕೋರಮಂಗಲ 8ನೇ ಬ್ಲಾಕಿನಲ್ಲಿ ಬಾಡಿಕೆ ಮನೆಯಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದರು. ಪ್ರತಿದಿನ ರಾತ್ರಿ ಊರಿಗೆ ಕರೆ ಮಾಡುತ್ತಿದ್ದ ನಿಶಿತಾ, 2 ದಿನದಿಂದ ಕರೆ ಮಾಡಿರಲಿಲ್ಲ. ಇದರಿಂದ ಅನುಮಾನಗೊಂಡ ಅವರ ತಾಯಿ, ನಿಶಿತಾಳನ್ನು ನೋಡಿಕೊಂಡು ಬಾ ಎಂದು ಮಗನನ್ನು ಬೆಂಗಳೂರಿಗೆ ಕಳಿಸಿದ್ದರು.

ಮೊದಲು ನಿಶಿತಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ವಿಚಾರಿಸಿದಾಗ 2 ದಿನದಿಂದ ಕೆಲಸಕ್ಕೆ ಬಂದಿಲ್ಲ ಎಂದು ಜವಾಬು ನೀಡಿದ್ದಾರೆ. ನಂತರ, ಕೋರಮಂಗಲದಲ್ಲಿರುವ ಮನೆಗೆ ಬಂದು ನೋಡಿದಾಗ ಒಳಗಿನಿಂದ ಹೆಣದ ವಾಸನೆ ಬರುತ್ತಿತ್ತು. ಅಕ್ಕಪಕ್ಕದವರ ನೆರವಿಂದ ಮನೆ ಬಾಗಿಲು ಒಡೆದು ಒಳ ನೋಡಿದಾಗ ನಿಶಿತಾ ಶವ ಕಂಡಿದೆ. ನಿಶಿತಾ ಸಹ ಯಾವುದೇ ಡತ್ ನೋಟ್ ಬರೆದಿಟ್ಟಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು. ತನಿಖೆ ಕೈಗೆತ್ತಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+