ನೂತನ ಸಾರಥಿಯ ಹುಡುಕಾಟದಲ್ಲಿ ಇನ್ಫೋಸಿಸ್

ಅಂದರೆ ಮಾನವ ಸಂಪನ್ಮೂಲ ಸಂಸ್ಥೆಯೊಂದನ್ನು ಗುರುತಿಸಿ, ಆ ಕಂಪನಿ ಸೂಚಿಸುವ ವ್ಯಕ್ತಿಯನ್ನು ಇನ್ಫಿ ತನ್ನ ಮುಂದಿನ ಸಿಇಒ ಆಗಿ ನೇಮಿಸಿಕೊಳ್ಳಲಿದೆ. ಗಮನಾರ್ಹ ಸಂಗತಿಯೆಂದರೆ ಇನ್ಫಿ ಈ ಬಾರಿ ಅರ್ಹ ಬಾಹ್ಯ ವ್ಯಕ್ತಿಯನ್ನು ಅಂದರೆ ಕಂಪನಿಯ ಹೊರಗಿನವರನ್ನು CEO ಆಗಿ ನೇಮಿಸಿಕೊಳ್ಳಲು ಸಹ ಆಲೋಚಿಸಿದೆ.
ಇತ್ತೀಚಿನ ಆರ್ಥಿಕ ವರ್ಷಗಳಲ್ಲಿ ಇನ್ಫಿ ಆರ್ಥಿಕ ಸಾಧನೆ ಕಳಪೆಯಾಗಿದೆ. ಕಂಪನಿ ದುರ್ಭರ ಸ್ಥಿತಿಯಲ್ಲಿರುವಾಗ ಮುಂದಿನ CEO ನೇಮಕಕ್ಕೆ ಚಾಲನೆ ನೀಡಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಕಂಪನಿಯ ಒಳಗೇ ಇರುವ ಅರ್ಹ CEO ಅಭ್ಯರ್ಥಿಗಳು ಅಂದರೆ ಬಿಜಿ ಶ್ರೀನಿವಾಸ್, ಅಶೋಕ್ ವೇಮೂರಿ ಮತ್ತು ವಿ ಬಾಲಕೃಷ್ಣನ್. ಇವರೆಲ್ಲ ಈಗಾಗಲೇ ಕಂಪನಿಯ ಆಡಳಿತ ಮಂಡಳಿಯಲ್ಲಿದ್ದಾರೆ.
ಹಾಗಂತ ಹಾಲಿ ಸಿಇಒ ಎಸ್ ಡಿ ಶಿಬುಲಾಲ್ ಅವರು ನಾಳೆಯೇ ಸಿಇಒ ಪಟ್ಟದಿಂದ ಇಳಿಯುತ್ತಾರೆ ಅಂತ ಅಲ್ಲ. ತಮಗೆ 60 ವರ್ಷ ತುಂಬಿದಾಗ ಶಿಬುಲಾಲ್ ಅವರ ಅಧಿಕಾರಾವಧಿ 2015ರ ಮಾರ್ಚ್ ತಿಂಗಳಿಗೆ ಕೊನೆಗೊಳ್ಳುತ್ತದೆ. ಆದರೆ ಅವರು ಸುಲಲಿತವಾಗಿ ಅಧಿಕಾರವನ್ನು ಹಸ್ತಾಂತರಿಸಬೇಕು ಅಂದರೆ 12 ತಿಂಗಳ ಮುಂಚೆಯೇ ಉತ್ತರಾಧಿಕಾರಿ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗುತ್ತದೆ.
ಅಂದಹಾಗೆ, ಕಂಪನಿಗೆ ಅರ್ಹ CEO ಅವರನ್ನು ತಂದುಕೊಡುವ ಹೊಣೆಗಾರಿಕೆ ತ್ರಿ ಸದಸ್ಯ ಸಮಿತಿಯ ಮೇಲಿರುತ್ತದೆ. ಪ್ರೊ. ಜೆಫ್ರಿ ಲೆಹಮಾನ್ ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಈ ಹಿಂದೆ ಎನ್ ಆರ್ ನಾರಾಯಣ ಮೂರ್ತಿ ಮತ್ತು ಅವರ ನಂತರ ಕ್ರಿಸ್ ಗೋಪಾಲಕೃಷ್ಣ ಅವರು CEO ಪಟ್ಟದಿಂದ ಇಳಿದಾಗ ನೂತನ ಸಿಇಒ ಅವರನ್ನು ಆಯ್ಕೆ ಮಾಡಿದ್ದು ಇದೇ ಪ್ರೊ. ಜೆಫ್ರಿ!












Click it and Unblock the Notifications