ಚೀನಾ : ಶೌಚದ ಕೊಳವೆಯೊಳಗಿದ್ದ ಮಗು ಸೇಫ್

baby
ಬೀಜಿಂಗ್, ಮೇ 29 : ಅಪಾರ್ಟ್‌ಮೆಂಟ್ ನ ಶೌಚ ಕೊಳವೆಯಲ್ಲಿ ಸಿಲುಕಿದ್ದ ನವಜಾತ ಶಿಶುವನ್ನು ಸುರಕ್ಷಿತವಾಗಿ ಹೊರತೆಗೆದ ಘಟನೆ ಚೀನಾದಲ್ಲಿ ನಡೆದಿದೆ. ಆದರೆ, ಕಂದಮ್ಮನನ್ನು ಟಾಯ್ಲೆಟ್ ಪೈಪ್‌ನೊಳಕ್ಕೆ ಹಾಕಿದವರಿಗಾಗಿ ಪೊಲೀಸರು ಹುಟುಕಾಟ ಪ್ರಾರಂಭಿಸಿದ್ದಾರೆ.

ಚೀನಾದ ಜಿನ್‌ಹುವಾ ಪ್ರಾಂತ್ಯದಲ್ಲಿ ಮಂಗಳವಾರ ಬೆಳಗ್ಗೆ ನವಜಾತ ಶಿಶುವನ್ನು ಟಾಯ್ಲೆಟ್‌ಗೆ ಹಾಕಿ ಫ್ಲಷ್ ಮಾಡಲಾಗಿತ್ತು. ನೀರಿನ ರಭಸಕ್ಕೆ ಕೊಳವೆಯೊಳಗೆ ಸಿಲುಕಿಕೊಂಡರು ಮಗು ಜೀವಂತವಾಗಿತ್ತು. ಕೊಳೆಯೊಳಗಿನಿಂದ ಮಗುವಿನ ಅಳುವಿನ ಶಬ್ದ ಕೇಳಿ ಆಶ್ಚರ್ಯಗೊಂಡ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ವೈದ್ಯರ ಸಹಾಯದಿಂದ 10 ಸೆಂ.ಮೀ. ಕೊಳೆವೆಯೊಳಗೆ ಸಿಲುಕಿದ್ದ ಎರಡು ದಿನಗಳ ಗಂಡು ಮಗುವನ್ನು ಸುಮಾರು ಒಂದೂವರೆ ತಾಸಿನ ಕಾರ್ಯಚರಣೆ ಬಳಿಕ ಹೊರತೆಗೆದಿದ್ದಾರೆ. ಸಮೀಪದ ಆಸ್ಪತ್ರಗೆ ದಾಖಲಿಸಿ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಮಗುವಿನ ಎದೆ ಮತ್ತು ಮಖದ ಭಾಗಕ್ಕೆ ಗಾಯಗಳಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಗುವನ್ನು ಕೊಳವೆಯೊಳಗೆ ಯಾರು ಹಾಕಿಬಹುದು ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಂಡು ಮಗುವಿಗೆ ಸಾಂಪ್ರದಾಯಿಕ ಚೀನಾದ ಕುಟುಂಬಗಳಲ್ಲಿ ಗಂಡು ಮಗುವಿಗೆ ಬಹಳ ಪ್ರಾದನ್ಯತೆ ನೀಡಲಾಗುತ್ತದೆ. ಆದ್ದರಿಂದ ಈ ಘಟನೆ ಜನರಿಗೆ ಅಚ್ಚರಿ ಉಂಟು ಮಾಡಿದೆ.

ಸರ್ಕಾರ ನೀತಿಯೇ ಕಾರಣ : ವಿಶ್ವದಲ್ಲೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಸರ್ಕಾರ, ಜನಸಂಖ್ಯೆ ನಿಯಂತ್ರಣಕ್ಕಾಗಿ ಕಠಿಣ ಕಾನೂನು ಜಾರಿಗೊಳಿಸಿದೆ. ಒಂದಕ್ಕಿಂತ ಹೆಚ್ಚು ಮಗು ಹೊಂದಿರುವ ಕುಟುಂಬಗಳಿಗೆ ಅಲ್ಲಿನ ಸರ್ಕಾರ ಭಾರೀ ದಂಡ ವಿಧಿಸುತ್ತಿದೆ.

ಆದ್ದರಿಂದ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತವರು ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳಿಂದಾಗಿ ಇಂತಹ ಕೃತ್ಯಗಳನ್ನು ಮಾಡುತ್ತಾರೆ ಎಂದು ಚೀನಾದ ಮಾಧ್ಯಮಗಳು ವಿಶ್ಲೇಷಿಸಿವೆ. ತಂದೆ-ತಾಯಿಗಳಿಗೆ ಬೇಡವಾಗಿದ್ದ ಮಗುವಿನ ಅದೃಷ್ಟ ಚೆನ್ನಾಗಿತ್ತು ಬದುಕಿ ಬಂದಿದೆ. (ಪಿಟಿಐ ಚಿತ್ರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+