ಚಿತ್ರದುರ್ಗ : ಸೇವಾಲಾಲ್ ಸ್ವಾಮಿಯ ಕಾಮಪುರಾಣ

ಮಂಗಳವಾರ ಮಾಧ್ಯಮಗಳ ಮುಂದೆ ತನ್ನ ಅಳಲು ತೋರಿಕೊಂಡಿರುವ ಮಹಿಳೆ ಸ್ವಾಮೀಜಿಯ ವಿರುದ್ದ ಲೈಗಿಂಕ ಕಿರುಕುಳ, ವಂಚನೆ ಸೇರಿದಂತೆ ಹಲವಾರು ಆರೋಪಗಳನ್ನು ಮಾಡಿದ್ದಾಳೆ. ನನ್ನೊಂದಿಗೆ ದೈಹಿಕ ಸಂಬಂಧವಿಟ್ಟುಕೊಂಡಿರುವ ಸ್ವಾಮೀಜಿ ಮದುವೆಯಾಗಲು ನಿರಾಕರಿಸುತ್ತಿದ್ದಾಳೆ ಎಂದು ಮಹಿಳೆ ದೂರಿದ್ದಾಳೆ.
ಮಹಿಳೆ ದಾವಣಗೆರೆಯವಳಾಗಿದ್ದು ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಕೆ ಎಸ್ಎಸ್ಎಲ್ ಸಿ ಓದುತ್ತಿರುವಾಗಲೇ ಪ್ರೀತಿಸುತ್ತಿದ್ದೇನೆ ಎಂದು ಸ್ವಾಮೀ ಆಕೆಯ ಹಿಂದೆ ಸುತ್ತುತ್ತಿದ್ದ. ನಂತರ ಸ್ವಾಮೀಜಿ ಪಟ್ಟ ಏರಿದರೂ ಮಠಕ್ಕೆ ನನ್ನನ್ನು ಕರೆಸಿಕೊಂಡು ಲೈಂಗಿಕ ಸಂಪರ್ಕವಿಟ್ಟುಕೊಂಡಿದ್ದ ಎಂಬುವುದು ಮಹಿಳೆಯ ಆರೋಪ.
ದಾವಣಗೆರೆಯ ತನ್ನ ಮನೆಗೂ ಅನೇಕ ಸಲ ಸ್ವಾಮಿ ಆಗಮಿಸಿದ್ದು, ಕಾರಿನಲ್ಲಿ ನನ್ನ ಜೊತೆ ಸುತ್ತಾಡಿ, ಐಸ್ ಕ್ರೀಂ ಕೊಡಿಸುತ್ತಿದ್ದ. ವಿವಾಹವಾಗುವ ಬಗ್ಗೆ ಕೇಳಿದರೆ, ಮಾನಸಿಕವಾಗಿ ಮದುವೆಯಾಗಿದ್ದೇವೆ. ತಾಳಿ ಕಟ್ಟಬೇಕೆಂದು ನಿಯಮವಿಲ್ಲ ಎಂದು ಸ್ವಾಮೀಜಿ ಉತ್ತರಿಸುತ್ತಾರೆ ಎಂದು ಮಹಿಳೆ ಕಣ್ಣೀರಿಡುತ್ತಾಳೆ.
ಸ್ವಾಮೀಜಿಯೊಂದಿಗಿನ ಸಂಬಂಧ ತಿಳಿದು ಕುಟುಂಬ ಸದ್ಯಸ್ಯರು ನನ್ನಿಂದ ದೂರವಾಗಿದ್ದಾರೆ. ಸ್ವಾಮೀಜಿ ವಿವಾಹವಾಗದಿದ್ದರೆ, ನನಗೆ ಸಾವೇ ಗತಿ ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ. ಮುಂದಿನ ವರ್ಷ ಮದುವೆ ಆಗೋಣ ಎಂದು ಪ್ರತಿ ಬಾರಿಯು ಸ್ವಾಮೀಜಿ ಹೇಳುತ್ತಿದ್ದರು.
ಆದರೆ, ಈಗ ವಿವಾಹವಾಗುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ನನ್ನೊಂದಿಗೆ 16 ವರ್ಷಗಳಿಂದ ದೈಹಿಕ ಸಂಪರ್ಕವಿಟ್ಟುಕೊಂಡಿರುವ ಸ್ವಾಮೀಜಿ ನನಗೆ ವಂಚನೆ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ ಮಹಿಳೆಯ ನೆಡೆತಯೇ ಸರಿ ಇಲ್ಲ ಎಂದು ಆಕೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ.
ಪಿಯುಸಿ ಫೇಲ್ ಸ್ವಾಮಿ : ಸರ್ದಾರ್ ಸೇವಾಲಾಲ್ ಸ್ವಾಮಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಆದರೆ, ಪಿಯುಸಿಯಲ್ಲಿ ಸಹ ಪಾಸ್ ಆಗಿಲ್ಲ. ಆದರೆ ಕರಾಟೆ ಮತ್ತಿತರ ಚಟುವಟಿಕೆಯಲ್ಲಿ ಸಕ್ರಿಯಾಗಿದ್ದಾನೆ. ತನ್ನ ಕರಾಟೆ ಮೂಲಕವೇ ಚಿತ್ರದುರ್ಗದ ಬಂಜಾರ ಪೀಠದ ಸ್ವಾಮೀಜಿಗೆ ಮೋಡಿ ಮಾಡಿದ ಈತ ಅವರಿಂದ ದೀಕ್ಷೆ ಪಡೆದು ಆಶ್ರಮಕ್ಕೆ ಸ್ವಾಮೀಜಿಯಾಗಿ ಸೇರಿಕೊಂಡಿದ್ದಾನೆ.












Click it and Unblock the Notifications