Amway ಸಿಇಒಗೆ 14 ದಿನ ನ್ಯಾಯಾಂಗ ಬಂಧನ

ಹಿಂದಿನ ಸುದ್ದಿ: ಭಾರತದ ಆಮ್ ವೇ ಮುಖ್ಯಸ್ಥನನ್ನು ಹಣಕಾಸು ದುರ್ವ್ಯವಹಾರದ ಮೇಲೆ ಬಂಧಿಸಲಾಗಿದೆ. ಜತೆಗೆ, ಕಂಪನಿಯ ಇನ್ನೂ ಇಬ್ಬರು ನಿರ್ದೇಶಕರನ್ನೂ ಬಂಧಿಸಲಾಗಿದೆ.
ಕೇರಳ ಪೊಲೀಸರು ಈ ಮೂವರನ್ನೂ ಬಂಧಿಸಿದ್ದಾರೆ. ವಿಲಿಯಂ ಸ್ಕಾಟ್ ಪಿಂಕ್ನೆ (ಸಿಇಒ), ಸಂಜಯ್ ಮಲ್ಹೋತ್ರಾ ಮತ್ತು ಅಂಜು (ನಿರ್ದೇಶಕರು) ಬಂಧಿತರು. Amway ಅಂದರೆ American Way. ಇದು ಗ್ರಾಹಕ ಉತ್ಪನ್ನಗಳ ಪ್ರಮುಖ ಮಾರಾಟ ಕಂಪನಿ. ಕೇರಳದಲ್ಲಿ ಆಮ್ ವೇ ದುರ್ವ್ಯವಹಾರ ವಿಪರೀತವಾಗಿದ್ದು ಪೊಲೀಸರು ಕಂಪನಿಯ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದರು.
ಆರ್ಥಿಕ ಅಪರಾಧಗಳ ವಿಭಾಗದ ನೆರವಿನಿಂದ ಕೊಳಿಕ್ಕೋಡ್ ಪೊಲೀಸರು ಕಳೆದ ವರ್ಷವೂ ಹಣಕಾಸು ಅಕ್ರಮ ಆರೋಪದ ಮೇಲೆ ರಾಜ್ಯ ಮಟ್ಟದ ವಿತರಕರೊಬ್ಬರನ್ನು (ಚೆನ್ನೈನ ರಾಜಮೋಹನ್) ಬಂಧಿಸಿದ್ದರು. Prize Chits and Money Circulation Schemes (Banning) Act ಅನುಸಾರ ಅವರನ್ನು ಬಂಧಿಸಲಾಗಿತ್ತು.












Click it and Unblock the Notifications