ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂತ್ರಾಲಯ ರಾಯರ ಮಠ ಹೊಸ ಉತ್ತರಾಧಿಕಾರಿ

By Mahesh
|
Google Oneindia Kannada News

ರಾಯಚೂರು, ಮೇ.26: ಮಂತ್ರಾಲಯ ಶೀರಾಘವೇಂದ್ರ ಮಠದ ಉತ್ತರಾಧಿಕಾರಿಯಾಗಿ ಸುಬುಧೇಂದ್ರ ತೀರ್ಥರನ್ನು ನೇಮಕ ಮಾಡಲಾಗಿದೆ. ಹಾವೇರಿ ಜಿಲ್ಲೆ ಹೊಸರಿತ್ತಿಯ ಶಾಖಾಮಠದಲ್ಲಿ ಶನಿವಾರ ಧಾರ್ಮಿಕ ವಿಧಿ-ವಿಧಾನಗಳ ಉತ್ತರಾಧಿಕಾರಿಗೆ ಸುಯತೀಂದ್ರತೀರ್ಥರು ಅಧಿಕಾರ ಹಸ್ತಾಂತರಿಸಿದರು.

ವರದಾ ನದಿಯಲ್ಲಿ ಪವಮಾನಾಚಾರ್ಯರು ಸ್ನಾನ, ಸಂಧ್ಯಾ ವಂದನೆ ಮುಗಿಸಿ ಕಾಷಾಯ ವಸ್ತ್ರ ಸಂಸ್ಕಾರದೊಂದಿಗೆ ಮಠಕ್ಕೆ ಆಗಮಿಸಿದರು.

ಮಂತ್ರಾಲಯ ರಾಘವೇಂದ್ರ ಮಠದ ಹಿರಿಯ ಮಠಾಧಿಪತಿ ಸುಯತೀಂದ್ರ ತೀರ್ಥರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿ, ಬಳಿಕ ನೂತನ ಉತ್ತರಾಧಿಕಾರಿ ರಾಜ್ ಎಸ್. ಪವಮಾನಾಚಾರ್ಯರಿಗೆ ತೆಂಗಿನಕಾಯಿ ಹಸ್ತಾಂತರಿಸುವ ಮೂಲಕ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದರು. ಇದೇ ವೇಳೆ ಉತ್ತರಾಧಿಕಾರಿಯಾಗಿ ನೇಮಕಗೊಂಡ ಪವಮಾನಾಚಾರ್ಯರಿಗೆ ಸುಬುದೇಂದ್ರತೀರ್ಥ ಪಾದಂಗಳು ಎಂದು ಮರು ನಾಮಕರಣ ಮಾಡಲಾಯಿತು.

Sri Subudhendra Teertha

ಉತ್ತರಾಧಿಕಾರಿ ನೇಮಕ ಮಾಡುವ ವಿಷಯದಲ್ಲಿ ಮೂವರ ಹೆಸರು ಚಾಲ್ತಿಯಲ್ಲಿತ್ತಾದರೂ ಇದೀಗ ನೇಮಕಗೊಂಡಿರುವ ಸುಬುದೇಂದ್ರ ತೀರ್ಥರ ಹೆಸರೇ ಪ್ರಮುಖವಾಗಿ ಕೇಳಿ ಬಂದಿತ್ತು. ವಯೋ ಸಹಜದಿಂದಾಗಿ ಸುಯತೀಂದ್ರ ತೀರ್ಥರ ಆರೋಗ್ಯ ಸ್ಥಿತಿಯೂ ಮೊದಲಿನಂತೆ ಉಳಿದಿಲ್ಲ ಎಂಬ ಕಾರಣಕ್ಕೂ ಅಬ್ಬರ, ಪ್ರಚಾರವಿಲ್ಲದೇ ಉತ್ತರಾಧಿಕಾರಿ ನೇಮಕ ಪ್ರಕ್ರಿಯ ಸರಳ, ಸುಂದರವಾಗಿ ನೆರವೇರಿಸಲಾಗಿದೆ.

ಸುಬುದೇಂದ್ರ ತೀರ್ಥರ ಪರಿಚಯ: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ನೂತನ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸುಬುಧೇಂದ್ರ ತೀರ್ಥ(42)ರ ಮೂಲ ನಾಮ: ರಾಜ ಪವಮಾನಾಚಾರ್ಯ. ಪೂರ್ವಾಶ್ರಮದ ತಂದೆ ರಾಜ ಗಿರಿಯಾಚಾರ್ಯ. ಪೂರ್ವಾಶ್ರಮದ ಪತ್ನಿ ಭಾರತಿ ಹಾಗೂ ಮಕ್ಕಳು: ಅಪ್ರಮೇಯ.ಅಪರ್ಣಾ, ಅಭಿಘ್ನಾ, ಅನಘಾ

ಸುಬುಧೇಂದ್ರ ತೀರ್ಥರು ವೇದ ವೇದಾಂತ ಅಧ್ಯಯನ, ಶಾಸ್ತ್ರಾಧ್ಯಯನ, ಶ್ರೀಮನ್ನ್ಯಾಯ ಸುಧಾ ಮಂಗಳ ಪದವಿ ಪಡೆದಿದ್ದಾರೆ. ಮಂತ್ರಾಲಯದಲ್ಲಿ ವ್ಯಾಸದಾಸ ಸಾಹಿತ್ಯ ಸಮನ್ವಯ ಪೀಠ ಸ್ಥಾಪಿಸಿ ಅದರ ಮೂಲಕ ಅನೇಕ ಗ್ರಂಥಗಳ ಮುದ್ರಣ ಹಾಗೂ ಪ್ರಸಾರ ಕಾರ್ಯ ಮಾಡಿದ್ದಾರೆ. ಶ್ರೀಮಠದೊಂದಿಗೆ ಕಳೆದ ಅನೇಕ ದಶಕಗಳ ಸಂಬಂಧ ಹೊಂದಿದ್ದು, ತಾತ ಶ್ರೀಸುಜಯೀಂದ್ರತೀರ್ಥರ ಕಾಲದಿಂದಲೂ ಶ್ರೀಮಠದೊಂದಿಗೆ ಒಡನಾಟ ಹೊಂದಿದ್ದಾರೆ. ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠದ ದಿವಾನರಾಗಿ ಕಾರ್ಯನಿರ್ವಹಿಸಿದ್ದರು.

English summary
Coronation ceremony of Subudhendra Teertharu (Formerly Raja Pavamanacharya) held at Hosaritti, Haveri. Shri H.H. 1008 Shri Suyateendra Teertha Swamiji blessed his successor to Sri Raghavendra Swamy Mutt, Mantralaya,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X