ಚುನಾವಣೆ: ಪಿರಿಯಾಪಟ್ಟಣದಲ್ಲಿ ಏನಾಗುತ್ತಿದೆ?

ಇದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಲಕ್ಷಣಗಳು. ಆದರೆ ಚುನಾವಣೆಯ ಒಳಸುಳಿಗಳು ಬೇರೆಯೇ ಇವೆ. ಮತ್ತು ಸಾಕಷ್ಟು ಕುತೂಹಲಕಾರಿಯೂ ಆಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕಾಂಗ್ರೆಸ್ ಪಕ್ಷಕ್ಕೂ ಇದು ಪ್ರತಿಷ್ಠೆಯ ಕದನವಾಗಿದೆ. ಈ ಹಿಂದೆ ಸಿದ್ದರಾಮಯ್ಯನವರು ಸ್ಪರ್ಧಿಸಿದ್ದ ಚಾಮುಂಡಿ ಕ್ಷೇತ್ರದ ಚುನಾವಣೆಗೂ ಇದನ್ನು ಸಮೀಕರಣ ಮಾಡಲಾಗುತ್ತಿದೆ.
ಆದರೆ ಚುನಾವಣೆ ಮುಂದೂಡಿಕೆಯಾದ ಬಳಿಕ ತಮ್ಮ ಅಭ್ಯರ್ಥಿಯನ್ನು ಕೆಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಣದಿಂದ ಹಿಂದಕ್ಕೆ ತೆಗೆದುಕೊಂಡಿರುವುದು ಈಗ ಮತದಾರರೂ ಮರೆತುಹೋಗಿದ್ದಾರೆ. ಕಾಂಗ್ರೆಸ್/ಜೆಡಿಎಸ್ ಮಧ್ಯೆ ನೇರ ಹಣಾಹಣಿ ಇದ್ದರೂ ಬಿಜೆಪಿಯೂ ತನ್ನ ಸ್ಥಾನ ಉಳಿಸಿಕೊಳ್ಳಲು ಹರಸಾಹಪಡುತ್ತಿದೆ.
ಆದಾಗ್ಯೂ, ಕ್ಷೇತ್ರವನ್ನು ಚಾಮುಂಡಿ ಮತ ಕ್ಷೇತ್ರದಂತೆ ಪರಿವರ್ತಿಸಿರುವ ಜೆಡಿಎಸ್ ಇಲ್ಲಿಂದ ಒಂದು ಸ್ಥಾನ ಗೆದ್ದುಕೊಂಡು ವಿಧಾನಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಸಂಪಾದಿಕೊಳ್ಳುವ ಹವಣಿಕೆಯಲ್ಲಿದೆ.
ಬೆಜೆಪಿಗೆ ಠೇವಣಿಯೂ ಬರೋಲ್ಲ: ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೆಜೆಪಿಗೆ ಠೇವಣಿಯೂ ಬಾರದಂತೆ ರಣತಂತ್ರ ರೂಪಿಸಲಾಗಿದೆ ಎಂದು ತಾಜಾ ಆಗಿ ಚುನಾವಣೆಗೆ ಮೂರು ದಿನ ಮುನ್ನ ಹೇಳಿರುವುದು ಇಂಟರೆಸ್ಟಿಂಗ್ ಆಗಿದೆ. ಅಂದಹಾಗೆ, ಶಿಕಾರಿಪುರದಲ್ಲಿ ಚುನಾವಣೆ ಗೆದ್ದ ಮೇಲೆ ನಿನ್ನೆ ಮೊದಲಮ ಬಾರಿಗೆ ಅವರು ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಈ ಮಾತು ಹೇಳೀದ್ದಾರೆ.












Click it and Unblock the Notifications