ಕ್ಯಾನೆ ಚಿತ್ರೋತ್ಸವ: 22 ಕೋಟಿ ರೂ ಆಭರಣ ಕಳವು

second-theft-at-cannes-rs-22-cr-necklace-stolen
ಕ್ಯಾನೆ (ಫ್ರಾನ್ಸ್), ಮೇ 25: ಹೇಳಿ ಕೇಳಿ ಇಡೀ ಜಗತ್ತಿನ ಕಣ್ಣುಗಳು ಅಲ್ಲಿರುವ ತಾರಾಮಣಿಗಳ ಮೇಲೆ ನೆಟ್ಟಿರುತ್ತವೆ. ಅದರಲ್ಲೂ ಬಯ್ಯಾರದಿಂದ ಬಳಕುವ ಆ ನಟೀಮಣಿಯರ ಆಭರಣ, ಉಡುಪುಗಳತ್ತಲೇ ನೂರಾರು ಕ್ಯತಾಮರಾಗಳು ಕಣ್ಣು ನೆಟ್ಟಿರುತ್ತವೆ. ಅಂತಹುದರಲ್ಲಿ ಅವರನ್ನೆಲ್ಲ ಯಾಮಾರಿಸಿದ ಕಳ್ಳಲು ಎರಡನೆಯ ಬಾರಿಗೆ ತಮ್ಮ ಕರಾಮತ್ತು ತೋರಿ ಆಭರಣಗಳನ್ನು ಎಗರಿಸಿದ್ದಾರೆ.

ಅದೂ ಶರೋನ್ ಸ್ಟೋನ್, ಪ್ಯಾರಿಸ್ ಹಿಲ್ಟನ್ ಅಂತಹ ಮೇರು ನಟಿಯರು ಉಳಿದುಕೊಳ್ಳುವ ಹೋಟೆಲಿನಲ್ಲಿ (du Cap-Eden-Roc) ಬರೋಬ್ಬರು ನೂರು ಮಂದು ಸೆಕ್ಯುರಿಟಿ ಗಾರ್ಡುಗಳು ಇರುತ್ತಾರೆ. ಅವರನ್ನೆಲ್ಲ ಯಾಮಾರಿಸಿದ ಕಳ್ಳ/ರು ಬರೋಬ್ಬರಿ 14 ಕೋಟಿ ರೂ. (£ 1.7 ದಶಲಕ್ಷ) ಮೌಲ್ಯದ ನೆಕ್ಲೇಸನ್ನು ಜೇಬಿಗೆ ಹಾಕಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ 8.4 ಕೋಟಿ ರೂ (£ 1 ದಶಲಕ್ಷ) ಮೌಲ್ಯದ ಚಿನ್ನದ ಹಾರ ಕಳುವಾಗಿದೆ.

ಅಂದಹಾಗೆ ಕಳೆದೊಂದು ವಾರದಲ್ಲಿ ಇಲ್ಲಿ ನಡೆದಿರುವ ಎರಡನೆಯ ಕಳ್ಳತನ ಪ್ರಕರಣ ಇದಾಗಿದೆ. ಮಂಗಳವಾರ ರಾತ್ರಿ ಮತ್ತು ಶುಕ್ರವಾರ ಈ ಪ್ರಕರಣಗಳು ನಡೆದಿವೆ. ಈ ಅಭರಣಗಳನ್ನು ಕೆಮರೂನ್ ಡಯಾಜ್ ಅಂತಹ ಬಾಲಿವುಡ್ ಬೆಡಗಿಯರು ಪ್ರದರ್ಶನದ ವೇಳೆ ಧರಿಸಲು ಆಯೋಜಕರು (ಭದ್ರವಾಗಿ) ಎತ್ತಿಟ್ಟಿದ್ದರಂತೆ. ಖ್ಯಾತ ನಾಮರು ರಾತ್ರಿ ಮಬ್ಬಿನಲ್ಲಿ ಶಾಂಪೇನ್ ಕುಡಿದು ಓಲಾಡುತ್ತಿದ್ದಾಗ ಕಳ್ಳರು ಕರಾಮತ್ತು ತೋರಿದ್ದಾರೆ.

ನಮ್ಮ ಐಶ್ವರ್ಯಾ ರೈ ಸಹ ಇಂತಹುದೇ ಹೋಟೆಲಿನಲ್ಲಿ ಉಳಿದುಕೊಂಡಿದ್ದರು. ಆದರೆ ಅವರದು ಯಾವುದೇ ಆಭರಣ ಕಳುವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+