ಆಧಾರ್ ಗಾಗಿ ಮೂರು ನೂತನ ಸೇವೆಗಳು

ಶುಕ್ರವಾರ ನವದೆಹಲಿಯಲ್ಲಿ ಯುಐಡಿಎಐ ಯೋಜನೆ ಅಧ್ಯಕ್ಷ ನಂದನ್ ನಿಲೇಕಣಿ, ಹೊಸ ಆನ್‌ಲೈನ್ ಗುರುತು ಪ್ರಮಾಣೀಕರಣ ಸೇವೆ ಬಿಡುಗಡೆ ಮಾಡಿದರು. ಇದರ ಮೂಲಕ ಡಿಜಿಟಲ್ ಮಾಧ್ಯಮದಲ್ಲಿ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಪ್ರದೇಶದಲ್ಲೂ ನಿವಾಸಿಗಳು ಗುರುತು ಪ್ರಮಾಣೀಕರಿಸಬಹುದಾಗಿದೆ ಎಂದರು.
ನೂತನವಾಗಿ 300 ಕಾಯಂ ಆಧಾರ್ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇದರಿಂದಾಗಿ ಆಧಾರ್ ಕೇಂದ್ರಗಳ ಸಂಖ್ಯೆ ಸಾವಿರಕ್ಕೆ ಏರಲಿದ್ದು, ಆಧಾರ್ ಕಾರ್ಡ್ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸಹಾಯವಾಗಲಿದೆ.
ನೂತನವಾಗಿ ಇ - ಕೆವೈಸಿ, ಒಟಿಪಿ (ಒನ್ ಟೈಂ ಪಿನ್), ಐರಿಸ್ ಪ್ರಮಾಣೀಕರಣ ಎಂಬ ಮೂರು ಹೊಸ ಯೋಜನೆಗಳನ್ನು ಗುರುತು ಪ್ರಮಾಣೀಕರಣ ಸೇವೆಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇ - ಕೆವೈಸಿ : ಸೇವಾದಾರರರಿಗೆ ಗುರುತು ಮತ್ತು ವಿಳಾಸದ ಎಲೆಕ್ಟ್ರಾನಿಕ್ ಪ್ರತಿ ಪಡೆಯಲು ಈ ನೂತನ ಸೇವೆ ನೆರವು ನೀಡಲಿದೆ. ಇ - ಕೆವೈಸಿ ಸೇವೆ ವಿವಿಧ ಸಂಸ್ಥೆಗಳಲ್ಲಿ ಇ - ಕೆವೈಸಿ ಸೇವೆ ಆಳವಡಿಸಲಾಗುತ್ತದೆ. ಬಳಸುವ ವ್ಯಕ್ತಿಯೊಬ್ಬನ ಮನೆ ಗುರುತು ಮತ್ತು ವಿಳಾಸ ಪರಿಶೀಲಿಸಲು ಬಳಸಲಾಗುತ್ತದೆ.
ಕಾರ್ಡ್ ಗೊಂದಿರುವ ವ್ಯಕ್ತಿಗಳ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಫೋಟೋ ಮತ್ತು ಮೊಬೈಲ್ ನಂಬರ್ ಗಳನ್ನು ಪರಿಶೀಲಿಸಬಹುದು. ಗುರುತಿನ ವಿವರಗಳು ದುರುಪಯೋಗಬಾರದು ಎಂಬ ಕಾರಣಕ್ಕಾಗಿ ಇದು ಆನ್‌ಲೈನ್‌ನಲ್ಲಿ ಕೆಲವೇ ಸೆಕೆಂಡುಗಳ ವರೆಗೆ ಮಾತ್ರ ಪ್ರದರ್ಶಿತವಾಗುವಂತೆ ತಂತ್ರಜ್ಞಾನ ರೂಪಿಸಲಾಗಿದೆ.
ಒಟಿಪಿ : ಒಟಿಪಿ ಎಂಬುದರ ಪೂರ್ಣರೂಪ ಒನ್ ಟೈಂ ಪಿನ್ ಎಂದಾಗುತ್ತದೆ. ಮೊಬೈಲ್ ಬಳಸಿ ಗುರುತು ಸಾಬೀತು ಪಡಿಸುವ ಸೇವೆ ಇದಾಗಿದೆ. ಇದಕ್ಕಾಗಿ ಯಾವುದೇ ಬಯೋಮೆಟ್ರಿಕ್ ಪ್ರಮಾಣೀಕರಣ ಸಾಧನಗಳೂ ಅಗತ್ಯವಿಲ್ಲ.
ಐರಿಸ್ ಪುರಾವೆ : ಆಧಾರ್ ಸಂಖ್ಯೆ ಮತ್ತು ಐರಿಸ್ ಭಾವಚಿತ್ರ ಪ್ರದರ್ಶಿಸಿ ಈ ಸೇವೆ ಮೂಲಕ ಗುರುತನ್ನು ಪ್ರಮಾಣೀಕರಣ ಮಾಡಲಾಗುವುದು. ಇಲ್ಲಿ ಜನಸಂಖ್ಯಾ ವಿವರಗಳನ್ನು ಹಂಚಿಕೊಳ್ಳಲಾಗುವುದಿಲ್ಲ. ನಿವಾಸಿಯ ಗುರುತನ್ನು ಪ್ರಮಾಣೀಕರಿಸಿ ಹೌದು ಅಥವಾ ಇಲ್ಲ ಎನ್ನುವ ಆಯ್ಕೆಯನ್ನು ಮಾತ್ರ ನೀಡಲಾಗಿರುತ್ತದೆ.
ಬೆಚ್ಚಿಬಿದ್ದ ಆಹ್ಲುವಾಲಿಯಾ : ಸರ್ಕಾರಿ ಅಧಿಕಾರಿಗಳ ಕಾರ್ಯ ಕ್ಷಮತೆ ಕಂಡು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್ ಆಹ್ಲುವಾಲಿಯಾ ಬೆಚ್ಚಿಬಿದ್ದಿದ್ದಾರೆ. ಆಹ್ಲುವಾಲಿಯಾ ಅವರ ಆಧಾರ್ ಕಾರ್ಡ್ ಕಳೆದು ಹೋಗಿತ್ತು.
ಯುಐಡಿಎಐನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಭಾಷಣದ ವೇಳೆ ಈ ವಿಷಯ ತಿಳಿಸಿದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಸಮಯ ವ್ಯರ್ಥ ಮಾಡದೆ, ಅವರ ಮೊಬೈಲ್ ನಂಬರ್ ಸಂಖ್ಯೆ ಆಧಾರದ ಮೇಲೆ ಒಂದು ಗಂಟೆಯೊಳಗೆ ಡೂಪ್ಲಿಕೇಟ್ ಕಾರ್ಡ್ ತಯಾರಿಸಿದರು. ವೇದಿಕೆಯಿಂದ ನಿರ್ಗಮಿಸುವಾಗ ಅಹ್ಲುವಾಲಿಯಾ ಅವರ ಕೈಗೆ ಡೂಪ್ಲಿಕೇಟ್ ಕಾರ್ಡ್ ಇತ್ತ ಅಧಿಕಾರಿಗಳ ಕೆಲಸದ ವೈಖರಿ ನೋಡಿ ಆಹ್ಲುವಾಲಿಯಾ ಬೆಚ್ಚಿಬಿದ್ದರು.












Click it and Unblock the Notifications