ಬೆಟ್ಟಿಂಗ್ ಭೂತಕ್ಕೆ ಕಾನೂನು ಮೂಗುದಾರ : ಸಿಬಲ್

kapil sibal
ನವದೆಹಲಿ, ಮೇ 25 : ಕ್ರಿಕೆಟ್ ಬೆಟ್ಟಿಂಗ್ ವಿವಾದ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿರುವಾಗಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದೆ. ಕ್ರೀಡೆಗಳಲ್ಲಿ ಬೆಟ್ಟಿಂಗ್ ತಡೆಯುವ ಉದ್ದೇಶದಿಂದ ನೂತನ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಎಲ್ಲಾ ಕ್ರೀಡೆಗಳಿಗೂ ಅನ್ವಯವಾಗು ಬೆಟ್ಟಿಂಗ್ ನಿಷೇಧ ಕಾನೂನು ರೂಪಿಸಲಿದೆ.

ಶನಿವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್, ಕ್ರೀಡೆಗಳಲ್ಲಿ ಬೆಟ್ಟಿಂಗ್ ದಂಧೆ ಹೆಚ್ಚಾಗುತ್ತಿದೆ. ಕ್ರಿಕೆಟ್ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಿದೆ. ಕಾನೂನಿನ ಮೂಲಕ ಬೆಟ್ಟಿಂಗ್ ಗೆ ಕಡಿವಾಣ ಹಾಕಲು ನೀತಿ ರೂಪಿಸಲಾಗುವುದು, ಕೇಂದ್ರ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರವೇ ಕಾನೂನು ರಚನೆಯಾಗಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಎಲ್ಲಾ ಕ್ರೀಡೆಗಳಲ್ಲೂ ಬೆಟ್ಟಿಂಗ್ ನಿಯಂತ್ರಿಸಲು ಪ್ರಬಲ ಕಾನೂನು ರೂಪಿಸಲಿದೆ. ಅರ್ಟಾನಿ ಜನರಲ್ ಮತ್ತು ವಿವಿಧ ಕಾನೂನು ಪಂಡಿತರ ಸಲಹೆ ಪಡೆಯಲಾಗಿದ್ದು, ಶೀಘ್ರದಲ್ಲೇ ಬೆಟ್ಟಿಂಗ್ ನಿಯಂತ್ರಿಸಲು ಕಾನೂನು ರೂಪಿಸಲಾಗುವುದು. ಈ ಕಾನೂನು ಕೇವಲ ಕ್ರಿಕೆಟ್ ಆಟಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲಾ ಕ್ರೀಡೆಗಳಿಗೂ ಅನ್ವಯವಾಗಲಿದೆ ಎಂದರು.

ಬೆಟ್ಟಿಂಗ್ ಭೂತಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಅಗತ್ಯವಿದೆ. ಕ್ರೀಡಾ ಪ್ರೇಮಿಗಳಿಗೆ ನಾವು ಯಾವುದೇ ನಿರಾಸೆ ಉಂಟು ಮಾಡುತ್ತಿಲ್ಲ. ಆದರೆ, ಕಾನೂನು ಜಾರಿಗೆ ತಂದು ಕೋಟ್ಯಾಂತರ ರೂ. ಹಣದ ಅಕ್ರಮ ಹರಿವಿಗೆ ತಡೆ ಹಾಕಲಿದ್ದೇವೆ ಎಂದು ಹೇಳಿದರು.

ಬೆಟ್ಟಿಂಗ್ ಗೆ ಕ್ರಿಕೆಟ್ ಆಟ ಹೆಚ್ಚು ಬಲಿಯಾಗಿದೆ. ಇತರ ಕ್ರೀಡೆಗಳ ಮೇಲೆ ಅವುಗಳ ಪ್ರಭಾವ ಬಹಳ ಕಡಿಮೆ ಇದೆ. ಆದ್ದರಿಂದ ಎಲ್ಲಾ ಕ್ರೀಡೆಗಳಿಗೂ ಅನ್ವಯವಾಗುವಂತಹ ನೀತಿಯನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.( ಐಪಿಎಲ್ ಸ್ಪಾಟ್ ಫಿಕ್ಸಿಂಗ್ : ಶನಿವಾರದ ಬೆಳವಣಿಗೆಗಳು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+