ಇಂದಿರಾನಗರ: ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

ಶುಕ್ರವಾರ ರಾತ್ರಿ ಇಂದಿರಾನಗರದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಯುವತಿಯನ್ನು ಸೇಂಟ್ ಆನ್ಸ್ ಕಾಲೇಜಿನ ವಿದ್ಯಾರ್ಥಿನಿ ನಿಶಾಂತಿನಿ ಎಂದು ಗುರುತಿಸಲಾಗಿದೆ. ಘಟನೆಗೆ ಕಾರಣಾವಾಗಿದ್ದಾನೆ ಎನ್ನಲಾದ ಯುವಕ ಅರುಳ್ ದಾಸ್ ನನ್ನು ಜೀವನ್ ಭೀಮಾ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ರಾತ್ರಿ ಇಲಿ ಪಾಷಾಣ ಸೇವಿಸಿದ್ದ ನಿಶಾಂತಿನಿಯನ್ನು ತಕ್ಷಣ ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಚಿನ್ಮಯ ಮಿಷನ್ ಆಸ್ಪತ್ರೆಗೆ (ಸಿಎಂಎಚ್) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆ ಏಳುಮಲೈ ತಿಳಿಸಿದ್ದಾರೆ.
ಅರುಳ್ ದಾಸ್ ಎಂಬಾತ ಒಂದು ವರ್ಷದಿಂದ ತನ್ನನ್ನು ಪ್ರೀತಿಸುವಂತೆ ಕಾಟ ಕೊಡುತ್ತಿರುವುದಾಗಿ ನಿಶಾಂತಿನಿ ಇತ್ತೀಚೆಗೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಈ ಮಧ್ಯೆ, ಸದರಿ ನಿಶಾಂತಿನಿ ಬೇರೊಬ್ಬ ಯುವನಕನನ್ನು ಪ್ರೀತಿಸುತ್ತಿದ್ದು, ಆ ಹುಡುಗ ಕೈಕೊಟ್ಟಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದಾಸ್ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ.
ಅರುಳ್ ಮತ್ತು ನಿಶಾಂತಿನಿ ಮೂಲತಃ ಆಂಧ್ರದ ಅನಂತಪುರದವರು.












Click it and Unblock the Notifications