ತುರ್ತು ಚಿಕಿತ್ಸೆಗಾಗಿ ಆರೋಗ್ಯ ವಾಹಿನಿ ಸೇವೆ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 104 ನಂಬರ್ ಗೆ ಕರೆ ಮಾಡಿ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಅನುಭವಿ ತಜ್ಞ ವೈದ್ಯರ ತಂಡ ಈ ಕಾಲ್ ಸೆಂಟರ್ ಉಸ್ತುವಾರಿ ನೋಡಿಕೊಳ್ಳಲಿದೆ. ಇದು ಸಂಪೂರ್ಣ ಟೋಲ್ ಫ್ರೀ ಸಂಖ್ಯೆಯಾಗಿದೆ ಎಂದರು.
ಸದ್ಯ ಜಾರಿಯಲ್ಲಿರುವ 108 ಮತ್ತು ನೂತನ ಆರೋಗ್ಯ ವಾಹಿನಿ ಕಾಲ್ ಸೆಂಟರ್ ಎರಡು ಪ್ರತ್ಯೇಕವಾಗಿದ್ದು, 108 ತುರ್ತು ಸಂದರ್ಭದಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲಿಸಲು ಸಹಾಯ ಮಾಡಲಿದೆ. ಆದರೆ, ಆರೋಗ್ಯವಾಹಿನಿಗೆ ಕರೆ ಮಾಡಿದವರಿಗೆ ತುರ್ತು ಚಿಕಿತ್ಸೆ ಪಡೆಯುವುದು ಹೇಗೆ? ಎಂಬ ಮಾಹಿತಿ ದೊರೆಯಲಿದೆ ಎಂದು ಹೇಳಿದರು.
ಆರೋಗ್ಯ ವಿಮೆ : ಆರೋಗ್ಯ ಇಲಾಖೆ ಬಿಪಿಎಲ್ ಕಾರ್ಡ್ ಹೊಂದಿರದ ಸಾರ್ವಜನಿಕರಿಗೂ ತುರ್ತು ಸಂದರ್ಭದಲ್ಲಿ ಸಹಾಯಕವಾಗುವ ಆರೋಗ್ಯ ವಿಮೆ ಸೌಲಭ್ಯ ಜಾರಲಿದೆ. ಜನರು ತುರ್ತು ಚಿಕಿತ್ಸೆ ಕೊಡಿಸುವ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಾರೆ ಅವರಿಗೆ ಸಹಾಯ ಮಾಡಲು ವಿಮಾ ಯೋಜೆನೆ ಜಾರಿಗೊಳಿಸಲಾಗುವುದು ಎಂದರು.
ಯೋಜನೆ ರದ್ಧತಿ ಇಲ್ಲ : ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಇಲಾಖೆಯ ಯಾವುದೇ ಜನಪರ ಯೋಜನೆಗಳನ್ನು ರದ್ದುಗೊಳಿಸುವುದಿಲ್ಲ. ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಹಿಂದಿನ ಸರ್ಕಾರ ಜಾರಿಗೆ ತಂದಿದೆ. ಯೋಜನೆಯ ಬಿಲ್ ಗಳನ್ನು 48 ಗಂಟೆಗಳಲ್ಲಿ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.
ಸಮಿತಿ ರಚನೆ : ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸಮಿತಿ ರಚಿಸಲಾಗುವುದು. ಆರೋಗ್ಯ ಇಲಾಖೆ ಅಧಿಕಾರಿಗಳು. ಜಿಲ್ಲಾಧಿಕಾರಿಗಳು, ಮತ್ತು ಸ್ಥಳೀಯ ಶಾಸಕರು ಈ ಸಮಿತಿಯಲ್ಲಿರುತ್ತಾರೆ. ಇನ್ನೊಂದು ತಿಂಗಳಿನಲ್ಲಿ ಸಮಿತಿ ರಚಿಸಿ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications