ಮೊಬೈಲ್ ಚಾರ್ಚ್ ಮಾಡಲು 20 ಸೆಕೆಂಡ್ ಸಾಕು

ಭಾರತೀಯ ಮೂಲದವರಾದ ಸದ್ಯ ಕ್ಯಾಲಿಪೋರ್ನಿಯಾದ ಸರಾಟೊಗಾದಲ್ಲಿ ವಾಸಿಸುತ್ತಿರುವ ಇಷಾ ಖಾರೆ ಈ ಪುಟ್ಟ ಈ ಕ್ರಾಂತಿಕಾರಕ ಸಂಶೋಧನೆಯನ್ನು ಮಾಡಿದ್ದಾಳೆ. ಮೊಬೈಲ್ ಫೋನ್ ಗಳ ಬ್ಯಾಟರಿಗಳಲ್ಲಿ ಅಳವಡಿಸಬಹುದಾದ ಈ ಯಂತ್ರದಿಂದ ಮೊಬೈಲ್ 20 ರಿಂದ 30 ಸೆಕೆಂಡ್ ಗಳಲ್ಲಿ ಚಾರ್ಚ್ ಆಗುತ್ತದೆ.
ಯುವತಿಯ ಇಂತಹ ಸಾಧನೆಗೆ ಸ್ಪೂರ್ತಿಯಾಗಿದ್ದು, ಆಕೆಯ ಮೊಬೈಲ್ ಚಾರ್ಚ್ ಯಾವಾಗಲೂ ಕಡಿಮೆ ಆಗುತ್ತಿದ್ದದ್ದು. ಮೊಬೈಲ್ ಫೋನ್‌ಗಳ ಬ್ಯಾಟರಿಗಳಲ್ಲಿ ಅಳವಡಿಸಬಹುದಾದ ಸೂಪರ್ - ಕೆಪಾಸಿಟರ್ ನಿಂದ, ಮೊಬೈಲ್ ತಕ್ಷಣ ಚಾರ್ಚ್ ಆಗುವುದಲ್ಲದೆ, ಸುದೀರ್ಘ ಸಮಯದ ವರೆಗೂ ಚಾರ್ಚ್ ಉಳಿದಿರುತ್ತದೆ.
ಸೂಪರ್ ಕೆಪಾಸಿಟರ್ ಚಿಕ್ಕದಾಗಿದ್ದು, ಇದನ್ನು ಮೊಬೈಲ್ ಫೋನ್ ಬ್ಯಾಟರಿಯೊಳಗೆ ಅಳವಡಿಸಬಹುದಾಗಿದೆ. ಈ ಕೆಪಾಸಿಟರ್ ಅಳವಡಿಸಲು ಚಿಕ್ಕದಾದ ಸ್ಥಳವಕಾಶ ಸಾಕಾಗಿದ್ದು, ಇದು ಸುದೀರ್ಘ ಸಮಯದವರೆಗೆ ಬ್ಯಾಟರಿ ಚಾರ್ಜ್‌ನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಪಡೆದಿದೆ.
ಭಾರತೀಯ ಮೂಲದ ಯುವತಿಯ ಸಾಧನೆಗೆ ಎಲೆಕ್ಟ್ರಾನಿಕ್ ದಿಗ್ಗಜ ಇಂಟೆಲ್ ಕಂಪನಿ ಮೆಚ್ಚುಗೆ ವ್ಯಕ್ತಪಡಿಸಿದ್ದು,ಇಷಾಗೆ ಪ್ರತಿಷ್ಠಾನದ ವತಿಯಿಂದ ಯುವ ವಿಜ್ಞಾನಿ' ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಧ ಮೊಬೈಲ್ ಕಂಪನಿಗಳು ಯುವತಿಯ ಸಂಶೋಧನೆಯನ್ನು ಶ್ಲಾಘಿಸಿವೆ.
ಮೊಬೈಲ್ ಚಾರ್ಚ್ ಉಳಿಯುವುದಿಲ್ಲ, ಪದೇ ಪದೇ ಚಾರ್ಚ್ ಹಾಕಬೇಕು ಎಂದು ಸಂಕಟ ಪಡುತ್ತಿದ್ದವರಿಗೆ ಸುಲಭದ ಮಾರ್ಗವೊಂದು ಲಭ್ಯವಾಗಿದೆ. ಶೀಘ್ರದಲ್ಲೇ ಮೊಬೈಲ್ ಕಂಪನಿಗಳು ಇದನ್ನು ಅಳವಡಿಸಿಕೊಂಡು, ಚಾರ್ಚಿಂಗ್ ಸಮಸ್ಯೆಗೆ ಮುಕ್ತಿ ನೀಡಲಿ ಎಂದು ಹಾರೈಸೋಣ.












Click it and Unblock the Notifications