ಮಹಾನಗರಗಳಿಗೆ ಬರಲಿದ್ದಾರೆ ಮುನ್ಸಿಪಲ್ ಪೊಲೀಸ್

ಈ ಕುರಿತು ಅಭಿಪ್ರಾಯ ತಿಳಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ. ಮುನ್ಸಿಪಲ್ ಪೊಲೀಸ್ ವ್ಯವಸ್ಥೆ ಜಾರಿಗೆ ಬಂದರೆ ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಸಂಚಾರ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆ ಹೊಣೆ ಮಹಾನಗರ ಪಾಲಿಕೆಗಳ ಕೈ ಸೇರಲಿದೆ.
ಇಂತಹ ವ್ಯವಸ್ಥೆ ಜಾರಿಗೆ ತರುವ ಕುರಿತು ರಾಜ್ಯ ಸರ್ಕಾರಗಳ ಅಭಿಪ್ರಾಯ ತಿಳಿಸುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ. ದೇಶದ 53 ನಗರಗಳಲ್ಲಿ ಮುನ್ಸಿಪಲ್ ಪೊಲೀಸ್ ಸೇವೆ ಆರಂಭಿಸಿರುವ ಉದ್ದೇಶ ಕೇಂದ್ರ ಸರ್ಕಾರದ ಮುಂದಿದೆ.
ವಿಶ್ವದ ಹಲವು ರಾಷ್ಟಗಳಲ್ಲಿ ಮುನ್ಸಿಪಲ್ ಪೊಲೀಸ್ ಸೇವೆ ಜಾರಿಯಲ್ಲಿದ್ದು, ಈ ಪೊಲೀಸರ ವೇತನಕ್ಕಾಗಿ ಮಹಾನಗರ ಪಾಲಿಕೆಗಳ ಬಜೆಟ್‌ನಲ್ಲೇ ಅನುದಾನ ಮೀಸಲಿಡಲಾಗುತ್ತದೆ. ದೇಶದಲ್ಲೂ ಮಹಾನಗರ ಪಾಲಿಕೆಗಳು ಮುನ್ಸಿಪಲ್ ಪೊಲೀಸರಿಗೆ ವೇತನ ಪಾವತಿಸಬೇಕಾಗುತ್ತದೆ.
ಕೇಂದ್ರ ಸರ್ಕಾರ ಈ ಹೊಸ ಪ್ರಸ್ತಾವನೆಯನ್ನು ಆಡಳಿತಾತ್ಮಕ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ವಿವಿಧ ರಾಜ್ಯಗಳಿಗೆ ಸಲ್ಲಿಸಿದ್ದು, ರಾಜ್ಯಗಳು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದರೆ, ಮುನ್ಸಿಪಲ್ ಪೊಲೀಸ್ ವ್ಯವಸ್ಥೆ ಜಾರಿಗೆ ಬರಲಿದೆ.
ವ್ಯತ್ಯಾಸವೇನು : ಮುನ್ಸಿಪಲ್ ಪೊಲೀಸ್ ವ್ಯವಸ್ಥೆ ಮಹಾನಗರ ಪಾಲಿಕೆ ಆಡಳಿತದ ನಿಯಂತ್ರಣಕ್ಕೆ ಒಳಪಡುತ್ತದೆ. ರಾಜ್ಯ ಸರ್ಕಾರದಿಂದ ವೇತನ ಪಡೆಯುವ ಪೊಲೀಸರಿಗೆ ಹೋಲಿಸಿದರೆ ಮುನ್ಸಿಪಲ್ ಪೊಲೀಸರಿಗೆ ಹೆಚ್ಚಿನ ಅಧಿಕಾರಗಳಿರುವುದಿಲ್ಲ.
2011ರ ಜನಗಣತಿ ಪ್ರಕಾರ, ದೇಶದ 53 ನಗರಗಳ ಜನಸಂಖ್ಯೆ ಹತ್ತು ಲಕ್ಷಕ್ಕಿಂತ ಹೆಚ್ಚಿದೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಏಳು ಮಹಾನಗರ ಪಾಲಿಕೆಗಳಿವೆ. ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಪತ್ರ ಬರೆದಿದ್ದು, ಮುನ್ಸಿಪಲ್ ಪೊಲೀಸ್ ವ್ಯವಸ್ಥೆ ಬಗ್ಗೆ ಅಭಿಪ್ರಾಯ ಕೇಳಿದೆ.












Click it and Unblock the Notifications