ರೇಪ್: ಎರಡು ಬೆರಳು ಪರೀಕ್ಷೆ ಕ್ರೂರ, ಘನತೆಗೆ ಕುಂದು

2-finger-test-on-rape-victim-crude-supreme-court-india
ನವದೆಹಲಿ, ಮೇ 21: ಅತ್ಯಾಚಾರ ಪ್ರಕರಣಗಳಲ್ಲಿ ಎರಡು ಬೆರಳುಗಳ ಪರೀಕ್ಷೆಯ ಮೂಲಕ ಅತ್ಯಾಚಾರ ದೃಢೀಕರಣ ಪರೀಕ್ಷೆ ಮಾಡುವುದು ಪ್ರಕೃತಿಗೆ ವಿರುದ್ಧವಾಗಿದ್ದು, ಅದರಿಂದ ಹೆಣ್ಣಿನ ಖಾಸಗೀತನದ ಮೇಲೆ ಆಕ್ರಮಣ ನಡೆಸಿದಂತಾಗುತ್ತದೆ. ಬಾಧಿತ ಮಹಿಳೆಯ ಘನತೆಗೆ ಕುಂದುಂಟಾಗುತ್ತದೆ. ಅದು ಒರಟು ಮತ್ತು ಕ್ರೂರ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಹೆಣ್ಣಿನ ಘನತೆಯ ಹರಣ:
'ಪ್ರಸ್ತುತ ಆಚರಣೆಯಲ್ಲಿರುವ ಎರಡು ಬೆರಳುಗಳ ಕನ್ಯತ್ವ ಪರೀಕ್ಷೆಯು ಅತ್ಯಾಚಾರ ಸಂತ್ರಸ್ತೆಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆಕೆಯನ್ನು ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿಸುತ್ತದೆ. ಅಷ್ಟೇ ಅಲ್ಲ ಆಕೆಯ ಏಕತೆ ಹಾಗೂ ವ್ಯಕ್ತಿತ್ವದ ಘನತೆಗೆ ಕುಂದುಂಟುಮಾಡುತ್ತದೆ ಎಂದು ನ್ಯಾ ಬಿಎಸ್ ಚೌಹಾಣ್ ಹಾಗೂ ಎಫ್ಎಮ್ಐ ಕಲಿಫುಲ್ಲಾ ಅವರ ನ್ಯಾಯಪೀಠ ತೀವ್ರ ಬೇಸರ ವ್ಯಕ್ತಪಡಿಸಿದೆ.

ಬೇರೆ ಕೌಶಲಯುತ ಮಾರ್ಗಗಳ ಬಗ್ಗೆ ಆಲೋಚಿಸಿ:
'ಅತ್ಯಾಚಾರವನ್ನು ಖಚಿತ ಪಡಿಸಿಕೊಳ್ಳಲು ಈ ಪರೀಕ್ಷೆ ಉತ್ತಮವಾಗಿದ್ದರೂ ಇದರಿಂದ ಸಂತ್ರಸ್ತೆಯ ಮೇಲೆ ಅಮಾನವೀಯ ಕ್ರೌರ್ಯವೆಸಗಿದಂತಾಗುತ್ತದೆ. ಹೀಗೆ ಅಮಾನವೀಯ ಪರೀಕ್ಷೆ ನಡೆಸುವುದರ ಬದಲು ಕನ್ಯತ್ವ ಪರೀಕ್ಷೆಗಾಗಿ ಬದಲೀ ವ್ಯವಸ್ಥೆಯ ಬಗ್ಗೆ ವೈದ್ಯಕೀಯ ಜಗತ್ತು ಆಲೋಚಿಸುವುದು ಒಳಿತು ಎಂದು ಸುಪ್ರೀಂ ಆಶಿಸಿದೆ.

ಟೂ ಫಿಂಗರ್ ಟೆಸ್ಟ್ ಎಂಬ ಅತ್ಯಾಚಾರ ದೃಢೀಕರಣ ಪರೀಕ್ಷೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿದೆ. ಆದರೆ ಇದರಿಂದ ಹೆಣ್ಣಿನ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬುದನ್ನು ಆದ್ಯವಾಗಿ ಗಮನಿಸಬೇಕು ಎಂದು ಕೋರ್ಟ್ ಕಿವಿಮಾತು ಹೇಳಿದೆ. (PTI)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+