ವೆಬ್ ಸೈಟಿಗೊಂದು ಹೊಸ ಬಗೆ ಹೆಸರು?

ಡೈರೆಕ್ಟಿ ಗ್ರೂಪ್ ಹೊಸದಾಗಿ '.in.net' ಎಂಬ ಹೊಸ ಅಂತಜಾಲ ವಿಳಾಸವನ್ನು ಪರಿಚಯಿಸುತ್ತಿದೆ. ಇದರಿಂದ ಡೊಮೈನ್ ನೇಮ್ ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು ಹಾಗೂ ನೆನಪಿನಲ್ಲಿಟ್ಟುಕೊಳ್ಳಬಹುದು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಈ ಹಿಂದೆ ಇಂಟರ್ನೆಟ್ ಕಾರ್ಪೊರೇಷನ್ ಫಾರ್ ಅಸೈಂಡ್ ನೇಮ್ಸ್ ಹಾಗೂ ನಂಬರ್ಸ್(ICANN), ಟಾಪ್ ಲೆವಲ್ ಡೊಮೈನ್ ಗೆ ಅನುಮತಿ ನೀಡಿತ್ತು. ಇದರಿಂದ ಡಾಟ್ ಪಕ್ಕದಲ್ಲಿ ಏನಾದರೂ ಹಾಕಿಕೊಳ್ಳುವ ಅವಕಾಶ ಲಭ್ಯವಾಗಿತ್ತು.
ಆದರೆ, ಈ ಅಪ್ಲಿಕೇಷನ್ ಕೊಳ್ಳಬೇಕಾದರೆ 185,000 ಡಾಲರ್ ತೆರಬೇಕು ಅಲ್ಲದೆ ವಾರ್ಷಿಕ ವೆಚ್ಚ 25,000 ಡಾಲರ್ ನೀಡಬೇಕು.ಇದು ವಾಣಿಜ್ಯ ಉದ್ದೇಶಿತ ಕಂಪೆನಿಗಳಿಗೆ ಅನುಕೂಲವಾಗಲಿದೆ. ಫೋನ್ ಕಂಪೆನಿ ತನ್ನ ಡೊಮೈನ್ ಹೆಸರನ್ನು ಡಾಟ್ ಫೋನ್ ಎಂದು ಬದಲಾಯಿಸಿಕೊಂಡರೆ ಗ್ರಾಹಕರಿಗೂ ಕಂಪೆನಿಗೂ ಅನುಕೂಲವಾಗಲಿದೆ ಎಂದು ಸಿಂಗಪುರ ಮೂಲದ ಸಂಸ್ಥೆ ಹೇಳಿತ್ತು.
ಸದ್ಯಕ್ಕೆ ಡಾಟ್ ಕಾಮ್(.com), ಡಾಟ್ ಆರ್ಗ್, ಡಾಟ್ ಇನ್.. ಇತ್ಯಾದಿ ರೀತಿ 22 ಅಧಿಕೃತ ಡೊಮೈನ್ ನೇಮ್ ಗಳನ್ನು ಬಳಸಬಹುದಾಗಿತ್ತು. ಇನ್ನು ಮೇಲೆ ಡಾಟ್ ಮಲೆನಾಡು, ಡಾಟ್ ಕರ್ನಾಟಕ ಡಾಟ್ ಕೆಂಚ ಇತ್ಯಾದಿಗಳನ್ನು ನಿಮ್ಮದೇ ಭಾಷೆಯಲ್ಲಿ ಬಳಸಬಹುದಾಗಿದೆ. ಡಾಟ್ ಕಾರ್, ಡಾಟ್ ಗ್ರೀನ್, ಡಾಟ್ ಪೆಪ್ಸಿ ಈ ರೀತಿ ಟಾಪ್ ಲೆವಲ್ ಡೊಮೈನ್ ಬಳಕೆಗೆ ಬರಲಿದೆ
ಇದೊಂದು ಐತಿಹಾಸಿಕ ನಿರ್ಣಯ ಇಂಟರ್ ನೆಟ್ ನಲ್ಲಿ ನೇಮಿಂಗ್ ಸಿಸ್ಟಮ್ ನಲ್ಲಿ ಕಲ್ಪನೆಗೂ ಮೀರದ ಅವಕಾಶಗಳ ಹೆಬ್ಬಾಗಿಲನ್ನು ತೆರೆಯಲಿದೆ. gTLDs ಮೂಲಕ ಆನ್ ಲೈನ್ ನಲ್ಲಿ ಹುಡುಕಾಟಕ್ಕೂ ಅನುಕೂಲವಾಗಲಿದೆ ಎನ್ನಲಾಗಿದೆ.
ಉದಾಹರಣೆಗೆ sudeepkichcha.in ಅಥವಾ sudeepkichcha.com ಬದಲಿದೆ ಕಿಚ್ಚ ಸುದೀಪ್ ಅವರು sudeepkichcha.in.net ಅನ್ನು ವೆಬ್ ತಾಣ ವಿಳಾಸವಾಗಿ ಬಳಸಬಹುದಾಗಿದೆ.
ಜಾಗತಿಕ ಇಂಟರ್ನೆಟ್ ಜನಸಂಖ್ಯೆ ಪಟ್ಟಿ ಪ್ರಕಾರ 100 ಮಿಲಿಯನ್ ಗೂ ಅಧಿಕ ನೆಟ್ಟಿಗರನ್ನು ಹೊಂದಿರುವ ಭಾರತ ಸದ್ಯಕ್ಕೆ ಮೂರನೇ ಸ್ಥಾನದಲ್ಲಿದೆ. ಆದರೆ, ಡೊಮೈನ್ ನೇಮ್ ಹಾಗೂ ಇಂಟರ್ನೆಟ್ ಅಡ್ರೆಸ್ ಬಳಕೆಯಲ್ಲಿ 3 ಮಿಲಿಯನ್ ಬಳಕೆದಾರರನ್ನು ಭಾರತ ಹೊಂದಿರುವುದು ವಿಶೇಷವಾಗಿದೆ.












Click it and Unblock the Notifications