ಇನ್ನಷ್ಟು ಕುಸಿತದ ಭೀತಿಯಲ್ಲಿ ಚಿನ್ನ, ಬೆಳ್ಳಿ ರೇಟ್

ಸೋಮವಾರದ ದರ 10 ಗ್ರಾಂ ಚಿನ್ನದ ಮಾರುಕಟ್ಟೆ ಬೆಲೆ 26,370 ರು ಇತ್ತು. ಕಳೆದ 21 ತಿಂಗಳ ಹಿಂದಿನ ದರಕ್ಕೆ ಸಮಾನಾಗಿದ್ದು, ಜಾಗತಿಕ ಮಟ್ಟದಲ್ಲಿ ಕಳೆಗುಂದಿದ ಚಿನ್ನದ ವಹಿವಾಟು ಮತ್ತು ದೇಶೀಯ ವ್ಯಾಪರಸ್ಥರಿಂದ ಬೇಡಿಕೆ ಕುಸಿದಿರುವುದು ಈ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುಪೇರು, ಡಾಲರ್ vs ರುಪಾಯಿ ಸಮರ ಕೂಡಾ ಚಿನ್ನದ ಬೆಲೆ ನಿರಂತರ ಇಳಿಕೆಗೆ ಕಾರಣವಾಗಿದೆ.
21 ತಿಂಗಳ ಹಿಂದೆ ಅಗಸ್ಟ್ 10, 2011ರಂದು ಚಿನ್ನದ ಮಾರುಕಟ್ಟೆ ಬೆಲೆಯು 26,370ರೂ.ಗೆ ನಿಗದಿಯಾಗಿತ್ತು. ಬೆಳ್ಳಿ ಬೆಲೆಯು ಭಾರೀ ಕುಸಿತವನ್ನು ಕಂಡಿದ್ದು, 42,170 ರೂ.ಯಿದ್ದ ಬೆಳ್ಳಿಯ ಬೆಲೆಯು 1,530ರೂ. ಕುಸಿತ ಕಂಡಿದೆ. ಪ್ರಸ್ತುತ ಬೆಲೆ 31 ತಿಂಗಳಿಗೆ ಮುಂಚೆ ಅಂದರೆ ನವೆಂಬರ್ 26, 2010ಕ್ಕೆ ಇದ್ದ ಬೆಲೆಗೆ ಸಮವಾದುದಾಗಿದೆ.
ಮಂಗಳವಾರ(ಮೇ.21) ವಿವಿಧ ನಗರಗಳಲ್ಲಿ ಖರೀದಿ ಚಿನ್ನ, ಬೆಳ್ಳಿ ಬೆಲೆ(ಪ್ರತಿ ಕೆಜಿಗೆ) ಇಂತಿದೆ:
ಚಿನ್ನದ ದರ ( ಪ್ರತಿ 10ಗ್ರಾಂಗೆ ರುಪಾಯಿಗಳಲ್ಲಿ)
ಬೆಂಗಳೂರು : 22K: 24,500, 24K : 26,200,
ದೆಹಲಿ: 22K: 23,580, 24K : 25,390
ಮುಂಬೈ: 22K: 23,510, 24K : 25,330
ಚೆನ್ನೈ: 22K: 24,460, 24K : 26,190
ಕೋಲ್ಕತ್ತಾ: 22K: 23,650, 24K : 25,460,
ಹೈದರಾಬಾದ್: 22K: 24,550, 24K : 26,250,
ಬೆಳ್ಳಿ ದರ(ಪ್ರತಿ ಕೆಜಿಗೆ) ಸರಾಸರಿ ದರ 42,747(ನಿನ್ನೆಗೆ ಹೋಲಿಸಿದರೆ 2345 ರು ಇಳಿಕೆ)
ಬೆಂಗಳೂರು : 42,200 ರು
ದೆಹಲಿ: 42,747
ಮುಂಬೈ: 42,960
ಕೋಲ್ಕತ್ತಾ: 43,066
ಹೈದರಾಬಾದ್: 42,100
MCX ಪ್ರಕಟಣೆಯಂತೆ ವಿವಿಧ ನಗರಗಳಲ್ಲಿ ಚಿನ್ನದ ದರ(future) ಪಟ್ಟಿ ಇಲ್ಲಿ ನೋಡಿ
ಬೆಂಗಳೂರು ಚಿನಿವಾರ ಪೇಟೆಯಲ್ಲಿ ಸೋಮವಾರ (ಮೇ.20) 22 Karat ಚಿನ್ನದ ದರ 10 ಗ್ರಾಂಗೆ 24,400 ರು, 24 karat ಚಿನ್ನ 10 ಗ್ರಾಂಗೆ 26,100 ರು ಇತ್ತು. ಮದುವೆ, ಹಬ್ಬದ ಋತು ಮುಗಿದ ಹಿನ್ನೆಲೆಯಲ್ಲಿ ಬೇಡಿಕೆ ತಗ್ಗಿದ್ದು, ಪರಿಣಾಮ ಹಳದಿ ಲೋಹದ ದರ ಭಾರಿ ಇಳಿಕೆ ಕಂಡಿದೆ. ಚಿನ್ನದ ದರ ಇನ್ನಷ್ಟು ಇಳಿಯುವ ಸಾಧ್ಯತೆಯಿದೆ ಎಂದು ಚಿನಿವಾರ ಪೇಟೆಯಿಂದ ಸುದ್ದಿ ಬಂದಿದೆ.












Click it and Unblock the Notifications