ಬೆಂಗಳೂರು : ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ರೇಪ್

ಕೆ.ಆರ್.ಪುರದ ನಿವಾಸಿಯಾದ ನಿಂಗ್ ಖಲೀಮ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪಿ. ಮಾರತ್ತಹಳ್ಳಿಯಲ್ಲಿ ಯುವತಿ ಸಹೋದರನ ಜೊತೆ ವಾಸಿಸುತ್ತಿದ್ದಳು. ಆರೋಪಿ ಸಹೋದರನ ಸ್ನೇಹಿತನಾಗಿದ್ದು, ಮನೆಯಲ್ಲಿ ವಿದ್ಯಾರ್ಥಿನಿ ಒಬ್ಬಳೇ ಇರುವುದನ್ನು ಗಮನಿಸಿ ಮನೆಗೆ ಬಂದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ನಗರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆ ಎಚ್ಎಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಹೋದರನೊಂದಿಗೆ ಮಾರತ್ತಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಶುಕ್ರವಾರ ಸಹೋದರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆತನ ಸ್ನೇಹಿತ ಮನೆಗೆ ಬಂದಿದ್ದಾನೆ.
ಅನಿರೀಕ್ಷಿತವಾಗಿ ಬಂದ ಈತನನ್ನು ನೋಡಿ ಕ್ಷಣಕಾಲ ಗಾಬರಿಯಾದರೂ ಆಕೆ, ಮಾತನಾಡಿಸಿ ಕಾಫಿ ನೀಡಿದ್ದಾಳೆ. ಸಹೋದರ ಬರುವರೆಗೂ ಕಾಯುತ್ತೇನೆ ಎಂದು ಹೇಳಿ ಟಿವಿ ನೋಡುತ್ತಾ ಕುಳಿತಿದ್ದ ಆರೋಪಿ, ನಂತರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಘಟನೆಯಿಂದಾಗಿ ಯವತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಕೌನ್ಸಿಲಿಂಗ್ ಕೇಂದ್ರಕ್ಕೆ ದಾಖಲಿಸುವಂತೆ ಸೂಚಿಸಿದ್ದಾರೆ.
ಅತ್ಯಾಚಾರವೆಸಗಿದ ಆರೋಪಿ ಪರಾರಿಯಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಎಚ್ಎಎಲ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿ ಮಣಿಪುರಕ್ಕೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆತನನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.











Click it and Unblock the Notifications