ಸಿದ್ದು ಸಂಪುಟದ ಸಂಭಾವ್ಯರ ಪಟ್ಟಿಯಲ್ಲಿ ಡಿಕೆಶಿ ಹೆಸರಿಲ್ಲ!

DK Shivakumar's name missing from probables
ಬೆಂಗಳೂರು, ಮೇ. 17 : ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವಾರು ಹಗರಣಗಳಲ್ಲಿ ಭಾಗಿಯಾಗಿರುವ 'ಪ್ರಭಾವಿ' ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಸಿಗುತ್ತಾ? ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೀಡಾರುವ ವಿಷಯ. ಆದರೆ, ಸಂಭಾವ್ಯರ ಮೊದಲ ಪಟ್ಟಿಯಲ್ಲಿ ಡಿಕೆಶಿ ಹೆಸರು ಕಾಣೆಯಾಗಿರುವುದು ಭಾರೀ ಕುತೂಹಲ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಕೃಪಾಕಟಾಕ್ಷ ಹೊಂದಿರುವ ಡಿಕೆ ಶಿವಕುಮಾರ್ ಸೇರಿದಂತೆ ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಕೂಗು ಎದ್ದಿದೆ. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಮತ್ತು ಮೈಸೂರಿನ ಸಂಸದ ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.

ಸಾಕಷ್ಟು ಅಳೆದು ತೂಗಿ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಶನಿವಾರ ಮೇ 18ರಂದು ಬೆಳಿಗ್ಗೆ 10.30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಆಹ್ವಾನ ಪತ್ರಿಕೆ ಇರುವವರಿಗೆ ಮಾತ್ರ ಪ್ರವೇಶವಿರುತ್ತದೆ.

ತಮ್ಮ ಸಂಪುಟ ಕ್ಲೀನ್ ಆಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರಾದರೂ, ಕೆಲ ಕಳಂಕಿತರು ಸಂಪುಟದಲ್ಲಿ ನುಸುಳುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಅವರು ಮೇ 13ರಂದು ಪ್ರಮಾಣವಚನ ಸ್ವೀಕರಿಸಿರುವುದರಿಂದ 33 ಸ್ಥಾನಗಳು ಮಾತ್ರ ತುಂಬಲಿಕ್ಕಿವೆ. ಸಂಪುಟ ವಿಸ್ತರಣೆ ಒಟ್ಟು ಎರಡು ಹಂತದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಒಟ್ಟು 29 ಶಾಸಕರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸಿದ್ದು ಶುಕ್ರವಾರ ದೃಢಪಡಿಸಿದ್ದಾರೆ.

ಮೂರು ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದ ಸಿದ್ದರಾಮಯ್ಯ ಅವರು ಎಕೆ ಆಂಟನಿ, ಆಸ್ಕರ್ ಫರ್ನಾಂಡಿಸ್, ಲೂಜಿನೋ ಫೆಲೆರೋ, ಮಧುಸೂಧನ ಮಿಸ್ತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಜಿಲ್ಲಾವಾರು ಮತ್ತು ಜಾತಿವಾರು ಆಧಾರದ ಮೇಲೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರಕಿಸಿ ಕೊಡಿಸಲಾಗುತ್ತಿದೆ.

ಸಂಭಾವ್ಯ ಸಚಿವರ ಪಟ್ಟಿ (ಕೊನೆ ಕ್ಷಣದಲ್ಲಿ ಕೆಲಸ ಹೆಸರುಗಳು ಬದಲಾಗಬಹುದು)

1. ಸತೀಶ್ ಜಾರಕಿಹೊಳಿ - ಯಮಕನಮರಡಿ
2. ಪ್ರಕಾಶ್ ಹುಕ್ಕೇರಿ - ಚಿಕ್ಕೋಡಿ
3. ಎಂಬಿ ಪಾಟೀಲ್ - ಬಬಲೇಶ್ವರ
4. ಉಮಾಶ್ರೀ - ತೇರದಾಳ, ಲಿಂಗಾಯಿತ
5. ಖಮರುಲ್ ಇಸ್ಲಾಂ - ಗುಲಬರ್ಗಾ ಉತ್ತರ, ಮುಸ್ಲಿಂ
6. ಶರಣ ಪ್ರಕಾಶ್ ಪಾಟೀಲ್ - ಸೇಡಂ, ಲಿಂಗಾಯಿತ
7. ಡಾ. ಎ.ಬಿ. ಮಾಲಕರೆಡ್ಡಿ - ಯಾದಗಿರಿ, ಲಿಂಗಾಯಿತ
8. ರಾಜಶೇಖರ್ ಪಾಟೀಲ - ಹುಮ್ನಾಬಾದ್, ಲಿಂಗಾಯಿತ
9. ಎಚ್.ಕೆ. ಪಾಟೀಲ - ಗದಗ, ಲಿಂಗಾಯಿತ
10. ಎಚ್. ಆಂಜನೇಯ - ಹೊಳಲ್ಕೆರೆ, ಎಸ್ ಸಿ
11. ಬಸವರಾಜ ರಾಯರೆಡ್ಡಿ, ಯಲಬುರ್ಗಾ, ಲಿಂಗಾಯಿತ
12. ಶಿವರಾಜ್ ತಂಗಡಗಿ - ಕನಕಗಿರಿ, ಎಸ್ ಸಿ
13. ಆರ್ ವಿ ದೇಶಪಾಂಡೆ - ಹಳಿಯಾಳ, ಬ್ರಾಹ್ಮಣ
14. ಶಾಮನೂರು ಶಿವಶಂಕರಪ್ಪ - ದಾವಣಗೆರೆ ದಕ್ಷಿಣ, ಲಿಂಗಾಯಿತ
15. ಎ. ವೆಂಕಟೇಶ ನಾಯಕ್ - ದೇವದುರ್ಗ, ಎಸ್ ಟಿ
16. ಶ್ರೀನಿವಾಸ ಪ್ರಸಾದ್ - ನಂಜನಗೂಡು, ಎಸ್ ಸಿ
17. ತನ್ವೀರ್ ಸೇಠ್ - ನರಸಿಂಹರಾಜ, ಮುಸ್ಲಿಂ
18. ಅಂಬರೀಷ್ - ಮಂಡ್ಯ, ಒಕ್ಕಲಿಗ
19. ರಮೇಶ್ ಕುಮಾರ್ - ಶ್ರೀನಿವಾಸಪುರ, ಬ್ರಾಹ್ಮಣ
20. ಎ. ಮಂಜು - ಅರಕಲಗೂಡು, ಒಕ್ಕಲಿಗ
21. ಎಚ್.ಎಸ್. ಮಹದೇವಪ್ರಸಾದ್ - ಗುಂಡ್ಲುಪೇಟೆ, ಲಿಂಗಾಯಿತ
22. ಕೃಷ್ಣ ಭೈರೇಗೌಡ - ಬ್ಯಾಟರಾಯನಪುರ, ಒಕ್ಕಲಿಗ
23. ರಾಮಲಿಂಗಾರೆಡ್ಡಿ - ಬಿಟಿಎಂ ಲೇಔಟ್, ಒಕ್ಕಲಿಗ
24. ಕೆ.ಜೆ. ಜಾರ್ಜ್ - ಸರ್ವಜ್ಞ ನಗರ, ಕ್ರೈಸ್ತ
25. ದಿನೇಶ್ ಗುಂಡೂರಾವ್ - ಗಾಂಧಿನಗರ, ಬ್ರಾಹ್ಮಣ
26. ಟಿ.ಬಿ. ಜಯಚಂದ್ರ - ಶಿರಾ, ಒಕ್ಕಲಿಗ
27. ರಮಾನಾಥ ರೈ - ಬಂಟ್ವಾಳ, ಬಂಟ ಸಮುದಾಯ
28. ಸಂತೋಷ್ ಲಾಡ್ - ಕಲಘಟಗಿ, ಮರಾಠ
29. ಕೆ.ಬಿ. ಕೋಳಿವಾಡ - ರಾಣೆಬೆನ್ನೂರು, ಲಿಂಗಾಯಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+