ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಹೃತ ಏನಾದ ಗೊತ್ತಿಲ್ಲ; ಮತ್ತೆ ಬಾಂಬ್ ಸ್ಫೋಟಗಳು

By Srinath
|
Google Oneindia Kannada News

pak-elections-twin-bomb-blasts-peshawar-karachi-14-dead
ಇಸ್ಲಾಮಾಬಾದ್, ಮೇ 11: ಪಾಕಿಸ್ತಾನದಲ್ಲಿ ಇಂದು ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂಸಾಚಾರ ಮನೆ ಮಾಡಿದೆ. ತಾಲಿಬಾನಿ ಉಗ್ರರ ಬಂದೂಕು ನಳಿಕೆಯಡಿ ಮತದಾನ ನಡೆಯುತ್ತಿದೆ. ಮತದಾನ ದಿನದಂದೇ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ.

ತಾಲಿಬಾನಿಗಳ ಅಟ್ಟಹಾಸ: ಪಾಕ್ ಸಂಸದೀಯ ಚುನಾವಣೆ ಮತದಾನ ಸಂದರ್ಭದಲ್ಲಿ ಪೇಷಾವರದಲ್ಲಿ ಶಾಲೆಯ ಸಮೀಪ ಎಎನ್‌ಪಿ ಚುನಾವಣಾ ಕಚೇರಿ ಬಳಿ ತಾಲಿಬಾನಿ ಉಗ್ರರು ಬೆಳಗ್ಗೆ 11 ಗಂಟೆಯಲ್ಲಿ ಈ ದುಷ್ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಅದಕ್ಕೂ ಮುನ್ನ 10.30ರಲ್ಲಿ ಕರಾಚಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.

ಈ ಮಧ್ಯೆ, ಮೂರು ದಿನಗಳ ಹಿಂದೆ ಅಪಹರಣಗೊಂಡ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರ ಪುತ್ರ ಅಲಿ ಹೈದರ್ ಗಿಲಾನಿ ಏನಾದರೋ ಗೊತ್ತಿಲ್ಲ.

ಪಾಕಿಸ್ತಾನದಲ್ಲಿ ಇದುವರೆಗೆ ಚುನಾವಣಾ ಸಂಬಂಧಿ ಗಲಭೆಗಳು ಮತ್ತು ಉಗ್ರರು ನಡೆಸಿದ ಹಿಂಸಾಕೃತ್ಯಗಳಿಂದಾಗಿ ಸುಮಾರು 130ಕ್ಕು ಹೆಚ್ಚು ಜನ ಅಸು ನೀಗಿದ್ದಾರೆ. ನಿನ್ನೆಯೂ ಚುನಾವಣಾ ಹಿಂಸಾಚಾರವೊಂದರಲ್ಲಿ 15 ಜನ ಮೃತಪಟ್ಟಿದ್ದರು.

ಪಾಕಿಸ್ತಾನದಲ್ಲಿ ಸುಮಾರು 8.6 ಕೋಟಿ ಮತದಾರರಿದ್ದು, ವಿವಿಧ ಪಕ್ಷಗಳ 4,670 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ಮತದಾರರು ನಿರ್ಧರಿಸುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ತೆಹ್ರಿಕ್-ಇ-ಇನ್ಸಾಫ್, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹಾಗೂ ಪಾಕ್ ಮಾಜಿ ಪ್ರಧಾನಿ ನಾವಜ್ ಷರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷಗಳು ಕಣದಲ್ಲಿವೆ.

English summary
Pakistan Elections twin Bobm Blasts Peshawar Karachi 14 killed. May 11th 10:35 am: Reports of second blast near Karachi’s Quaidabad, 10 dead, 25 wounded. 11am: Blast reported near school on Peshawar’s Charsadda road, 4 killed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X