32 ಕ್ಷೇತ್ರಗಳಲ್ಲಿ ಯಡಿಯೂರಪ್ಪ ಕೆಜೆಪಿಗೆ ದ್ವಿತೀಯ ಸ್ಥಾನ!

ಮೊದಲಿಗೆ, ಕೆಜೆಪಿ 6 ಸ್ಥಾನಗಳನ್ನು ಗೆದ್ದುಕೊಂಡಿರುವುದು ಕಂಡುಬರುತ್ತದೆ. ಆದರೆ ಫಲಿತಾಂಶಗಳ ಮೇಲೆ ಮತ್ತಷ್ಟು ತೀಕ್ಷ್ಣ ನೋಟ ಹರಿಸಿದಾಗ ಕೆಜೆಪಿ ಸಾಧನೆ ಮತ್ತಷ್ಟು ಗೋಚರವಾಗುತ್ತದೆ. ಏನಪ್ಪಾ ಅಂದರೆ ಕೆಜೆಪಿ ಒಟ್ಟು 32 ಕ್ಷೇತ್ರಗಳಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ. ನಂತರ, 39 ಕ್ಷೇತ್ರಗಳಲ್ಲಿ ಮೂರನೆಯ ಸ್ಥಾನದಲ್ಲಿದೆ.
32 ಕ್ಷೇತ್ರಗಳಲ್ಲಿ ದ್ವಿತೀಯ: ಶಿವಮೊಗ್ಗದ 5 ಕ್ಷೇತ್ರಗಳಲ್ಲಿ - ತುಮಕೂರು, ದಾವಣಗೆರೆಯಲ್ಲಿ ತಲಾ 4 ಕ್ಷೇತ್ರಗಳಲ್ಲಿ - ಗುಲ್ಬರ್ಗದ 3 ಕ್ಷೇತ್ರಗಳಲ್ಲಿ - ಹುಬ್ಬಳ್ಳಿ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಬೀದರ್ ಜಿಲ್ಲೆಗಳ ತಲಾ 2 ಕ್ಷೇತ್ರಗಳಲ್ಲಿ - ಹಾವೇರಿ, ಬಿಜಾಪುರ, ಮೈಸೂರು, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ತಲಾ 1 ಕ್ಷೇತ್ರದಲ್ಲಿ ಕೆಜೆಪಿ ಎರಡನೆಯ ಸ್ಥಾನ ಅಲಂಕರಿಸಿದೆ.
39 ಕ್ಷೇತ್ರಗಳಲ್ಲಿ ತೃತೀಯ: ಮೈಸೂರು, ದಾವಣಗೆರೆಯಲ್ಲಿ ತಲಾ 4 ಕ್ಷೇತ್ರಗಳಲ್ಲಿ - ತುಮಕೂರು, ಹಾಸನದ ತಲಾ 3 ಕ್ಷೇತ್ರಗಳಲ್ಲಿ - ಬೆಂಗಳೂರು ನಗರ, ರಾಮನಗರ, ಮಂಗಳೂರು, ಉತ್ತರ ಕನ್ನಡ, ಬಾಗಲಕೋಟೆ, ಮಂಡ್ಯ, ಚಾಮರಾಜನಗರ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ತಲಾ 1 ಕ್ಷೇತ್ರದಲ್ಲಿ ಕೆಜೆಪಿ ಮೂರನೆಯ ಸ್ಥಾನವನ್ನು ಆಕ್ರಮಿಸಿಕೊಂಡಿದೆ.











Click it and Unblock the Notifications