ಯಾರೆಲ್ಲಾ ರಾಜ್ಯದ ಚುಕ್ಕಾಣಿ ಹಿಡಿದಿದ್ದರು ಗೊತ್ತಾ?

brief-look-at-all-21-chief-ministers-of-karnataka
ಬೆಂಗಳೂರು, ಮೇ 9- ಯಾರಾಗಲಿದ್ದಾರೆ ರಾಜ್ಯದ 22ನೆಯ ಮುಖ್ಯಮಂತ್ರಿ ಎಂಬುದೇ ಈ ಕ್ಷಣದ ಕುತೂಹಲದ ಪ್ರಶ್ನೆ.

ಈ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವವರು ರಾಜ್ಯದ 22ನೆಯ ಮುಖ್ಯಮಂತ್ರಿಯಾಗಲಿದ್ದಾರೆ. ಇದುವರೆಗೂ ಮುಖ್ಯಮಂತ್ರಿಯಾಗಿ 2 ಮತ್ತು 3 ಅವಧಿಗಳಿಗೆ ಸಿಎಂ ಆಗಿ ಆಳ್ವಿಕೆ ನಡೆಸಿರುವುದನ್ನು ಪರಿಗಣಿಸಿದರೆ ರಾಜ್ಯದ ಹೊಸ ಮುಖ್ಯಮಂತ್ರಿಯಾಗುವವರು 28ನೆಯವರಾಗಲಿದ್ದಾರೆ. ಈ ಮಧ್ಯೆ, ರಾಜ್ಯದಲ್ಲಿ 1971ರಿಂದ 2004ರ ಅವಧಿಯಲ್ಲಿ 6 ಬಾರಿ ರಾಷ್ಟ್ರಪತಿ ಆಳ್ವಿಕೆಯೂ ನಡೆದಿತ್ತು ಎಂಬುದು ಗಮನಾರ್ಹ.

ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಜನಾದೇಶ ದೊರೆತಿದ್ದು, ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ದಕ್ಕಿದೆ. ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಈಗ ತೀವ್ರಗೊಂಡಿದೆ. 1947ರಿಂದ ಲೆಕ್ಕ ಹಾಕಿದರೆ ರಾಜ್ಯದಲ್ಲಿ ಇದುವರೆಗೂ 27 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ವ್ಯಕ್ತಿಗತವಾಗಿ 21 ಮುಖ್ಯಮಂತ್ರಿಗಳಾಗಿದ್ದು, ಹೊಸ ಮುಖ್ಯಮಂತ್ರಿ 22ನೆಯವರಾಗಲಿದ್ದಾರೆ.

ಮೊದಲ ಮುಖ್ಯಮಂತ್ರಿ ಕೆ ಚೆಂಗಲರಾಯ ರೆಡ್ಡಿ ಅವರಿಂದ ಜಗದೀಶ್ ಶೆಟ್ಟರ್ ವರೆಗೆ 21 ಮುಖ್ಯಮಂತ್ರಿಗಳು ಕರ್ನಾಟಕವನ್ನು ಆಳಿದ್ದಾರೆ. ರಾಮಕೃಷ್ಣ ಹೆಗಡೆ ಸತತ 3 ಬಾರಿ ಮುಖ್ಯಮಂತ್ರಿಯಾಗಿದ್ದರು. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ದೇವರಾಜ ಅರಸು, ಯಡಿಯೂರಪ್ಪ ಅವರು ತಲಾ 2 ಬಾರಿ ಸಿಎಂ ಆಗಿದ್ದವರು.

ನಿರ್ಗಮಿತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ 2012ರ ಜುಲೈ 12ರಿಂದ ಮುಖ್ಯಮಂತ್ರಿಯಾಗಿದ್ದಾರೆ. ಯಡಿಯೂರಪ್ಪ 2007ರ ನವೆಂಬರ್ 13 ರಿಂದ 19ರವರೆಗೆ ಕೇವಲ 1 ವಾರ ಕಾಲ ಮುಖ್ಯಮಂತ್ರಿಯಾಗಿದ್ದರು. ಆ ನಂತರ ಮತ್ತೆ 2008ರ ಮೇ 30ರಿಂದ 2011ರ ಆಗಸ್ಟ್ 4ರವರೆಗೆ ಅವರು ಮತ್ತೆ ಮುಖ್ಯಮಂತ್ರಿಯಾದರು.

1947ರ ಅಕ್ಟೋಬರ್ 25ರಿಂದ 1952 ಮಾರ್ಚ್ 30ರವರೆಗೆ ಕೆಸಿ ರೆಡ್ಡಿ ಮುಖ್ಯಮಂತ್ರಿಯಾಗಿದ್ದರು. 1952ರ ಮಾರ್ಚ್ 30ರಿಂದ 1956ರ ಆಗಸ್ಟ್ 19ರವರೆಗೆ ವಿಧಾನಸೌಧ ಶಿಲ್ಪಿ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದರು.

1956ರ ಆಗಸ್ಟ್ 19ರಿಂದ ಅಕ್ಟೋಬರ್ 31ರವರೆಗೆ ಕಡಿದಾಳ್ ಮಂಜಪ್ಪ ಅಲ್ಪಾವಧಿ ಮುಖ್ಯಮಂತ್ರಿಯಾಗಿದ್ದರು. 1956ರ ನವೆಂಬರ್ 1ರಿಂದ 1958ರ ಮೇ 16 ರವರೆಗೆ ಎಸ್ ನಿಜಲಿಂಗಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಅವರು ಮತ್ತೆ 1962ರ ಜೂನ್ 21ರಿಂದ 1968ರ ಮೇ 28 ರವರೆಗೂ ಮುಖ್ಯಮಂತ್ರಿಯಾಗಿದ್ದರು.

1958ರ ಮೇ 16 ರಿಂದ 1962ರ ಮಾರ್ಚ್ 9 ರವರೆಗೆ ಬಿಡಿ ಜತ್ತಿ ಮುಖ್ಯಮಂತ್ರಿಯಾಗಿದ್ದರು. 1969ರ ಮಾರ್ಚ್ 14 ರಿಂದ ಜೂನ್ 20ರವರೆಗೆ ಎಸ್ ಆರ್ ಕಂಠಿ ಮುಖ್ಯಮಂತ್ರಿಯಾಗಿದ್ದರು.

1968ರ ಮೇ 29ರಿಂದ 1971 ಮಾರ್ಚ್ 18ರವರೆಗೆ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದರು. 1971ರ ಮಾರ್ಚ್ 19ರಿಂದ 1972ರ ಮಾರ್ಚ್ 20ರವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಮತ್ತೆ ವೀರೇಂದ್ರ ಪಾಟೀಲ್ ಅವರು 1989ರ ನವೆಂಬರ್ 30ರಿಂದ 1990ರ ಅಕ್ಟೋಬರ್ 10ರವರೆಗೆ ಎರಡನೆ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ ಡಿ ದೇವರಾಜ ಅರಸು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. 1977ರ ಡಿಸೆಂಬರ್ 31ರಿಂದ 1978ರ ಫೆಬ್ರವರಿ 28 ರವರೆಗೆ ಜಾರಿಯಲ್ಲಿದ್ದ ರಾಷ್ಟ್ರಪತಿ ಆಳ್ವಿಕೆ ಮುಗಿದ ಬಳಿಕ 1978ರ ಫೆಬ್ರವರಿ 28ರಿಂದ 1980ರ ಜನವರಿ 7ರವರೆಗೆ ಮತ್ತೆ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು.

1980 ಜನವರಿ 12ರಿಂದ 1983 ಜನವರಿ 6 ರವರೆಗೆ ಆರ್ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ನಂತರ 1983ರ ಜನವರಿ 10ರಿಂದ 1988 ಆಗಸ್ಟ್ 10ರವರೆಗೆ ಸತತ 3 ಬಾರಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.

1988ರ ಆಗಸ್ಟ್ 13ರಿಂದ 1989 ಏಪ್ರಿಲ್ 21ರವರೆಗೆ ಎಸ್ ಆರ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದು, ಏಪ್ರಿಲ್ 21ರಿಂದ ನವೆಂಬರ್ 30ರವರೆಗೂ ರಾಷ್ಟ್ರಪತಿ ಆಳ್ವಿಕೆ ಮೂರನೆ ಬಾರಿಗೆ ಜಾರಿಯಲ್ಲಿತ್ತು. 4ಮೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆ 1990ರ ಅಕ್ಟೋಬರ್ 10ರಿಂದ 1 ವಾರ ಕಾಲ ಜಾರಿಯಲ್ಲಿತ್ತು.

1990ರ ಅಕ್ಟೋಬರ್ 17ರಿಂದ 1992ರ ನವೆಂಬರ್ 19ರವರೆಗೆ ಎಸ್ ಬಂಗಾರಪ್ಪ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.
1992ರ ನವೆಂಬರ್ 19ರಿಂದ 1994ರ ಡಿಸೆಂಬರ್ 11ರವರೆಗೆ ಎಂ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದರು.
1994ರ ಡಿಸೆಂಬರ್ 11ರಿಂದ 1996ರ ಮೇ 31ರವರೆಗೆ ಎಚ್ ಡಿ ದೇವೇಗೌಡ ಮುಖ್ಯಮಂತ್ರಿಯಾಗಿದ್ದರು.
1996ರ ಮೇ 31ರಿಂದ 1999 ಅಕ್ಟೋಬರ್ 7ರವರೆಗೆ ಜೆಎಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದರು.
1999ರ ಅಕ್ಟೋಬರ್ 11ರಿಂದ 2004 ಮೇ 28ರವರೆಗೆ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.
2004ರ ಮೇ 28ರಿಂದ 2006ರ ಫೆಬ್ರವರಿ 2ರವರೆಗೆ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಧರಂ ಸಿಂಗ್ ಆಡಳಿತ ನಡೆಸಿದರು.
2006ರ ಫೆಬ್ರವರಿ 3ರಿಂದ 2007ರ ಅಕ್ಟೋಬರ್ 8ರವರೆಗೆ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು.
ನಂತರ 2007ರ ಅಕ್ಟೋಬರ್ 8ರಿಂದ ನವೆಂಬರ್ 12ರವರೆಗೆ 5ನೆಯ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತ್ತು.
ನಂತರ ಒಂದು ವಾರ ಕಾಲ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಬಹುಮತ ಸಾಬೀತು ಪಡಿಸದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಷ್ಟ್ರಪತಿ ಆಳ್ವಿಕೆ ಮತ್ತೆ 6ನೆ ಬಾರಿಗೆ 2007ರ ನವೆಂಬರ್ 20ರಿಂದ 2008ರ ಮೇ 29 ರವರೆಗೆ ಜಾರಿಯಲ್ಲಿತ್ತು.
ಪಕ್ಷೇತರರ ಬೆಂಬಲದೊಂದಿಗೆ 2008 ಮೇ 30ರಂದು ಮತ್ತೆ ಮುಖ್ಯಮಂತ್ರಿಯಾದ ಯಡಿಯೂರಪ್ಪ 2011ರ ಆಗಸ್ಟ್ 4ರವರೆಗೂ ಆಳ್ವಿಕೆ ನಡೆಸಿದರು.
2011ರ ಆಗಸ್ಟ್ 5ರಿಂದ 2012 ಜುಲೈ 11ರವರೆಗೂ ಡಿವಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದರು. ಬಳಿಕ ಜಗದೀಶ್ ಶೆಟ್ಟರ್ 2012ರ ಜುಲೈನಿಂದ ಇದುವರೆಗೂ ಮುಖ್ಯಮಂತ್ರಿಯಾಗಿದ್ದಾರೆ.

ಕೆಸಿ ರೆಡ್ಡಿ, ಎಸ್ ನಿಜಲಿಂಗಪ್ಪ, ದೇವರಾಜ ಅರಸು ಅವರುಗಳು ಮಾತ್ರ ಸಂಪೂರ್ಣಾವಧಿಯಾಗಿ 5 ವರ್ಷಗಳ ಕಾಲ ಕರ್ನಾಟಕವನ್ನು ಆಳಿದ ಮುಖ್ಯಮಂತ್ರಿಗಳಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+