ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪುಹಣ ದಂಧೆಯಲ್ಲಿ ಸರ್ಕಾರಿ ಬ್ಯಾಂಕ್‌ಗಳು

|
Google Oneindia Kannada News

money
ನವದೆಹಲಿ, ಮೇ 7 : ಖಾಸಗಿ ಬ್ಯಾಂಕ್ ಗಳು ಹವಾಲಾ ಜಾಲದಲ್ಲಿ ಹಣ ತೊಡಗಿಸುತ್ತವೆ ಎಂದು ಆರೋಪಿಸಿದ್ದ ಕೋಬ್ರಾಪೋಸ್ಟ್.ಕಾಂ ಸಂಸ್ಥೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸುವ ದಂಧೆಯಲ್ಲಿ ತೊಡಗಿವೆ ಎಂದು ಗಂಭೀರ ಆರೋಪ ಮಾಡಿದೆ.

ಸೋಮವಾರ ತನ್ನ ರಹಸ್ಯ ಕಾರ್ಯಚರಣೆ ವರದಿ ಬಿಡುಗಡೆ ಮಾಡಿರುವ ಕೋಬ್ರಾ ಪೋಸ್ಟ್.ಕಾಂ ವೆಬ್ ಸೈಟ್ ಮುಖ್ಯಸ್ಥ ವೆಬ್‌ಸೈಟ್‌ನ ಮುಖ್ಯಸ್ಥ ಅನಿರುದ್ಧ ಬೆಹಲ್, 23 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಮತ್ತು ಎಲ್ ಐಸಿ ಸೇರಿದಂತೆ ಕೆಲವು ವಿಮಾ ಕಂಪನಿಗಳು ಕಪ್ಪುಹಣವನ್ನು ಬಿಳಿ ಹಣವಾಗಿ ಪರಿವರ್ತಿಸುತ್ತಿವೆ ಎಂದು ದೂರಿದ್ದಾರೆ.

ಹಲವು ತಿಂಗಳ ಕಾಲ ರಹಸ್ಯ ಕಾರ್ಯಾಚರಣೆ ನಡೆಸಿ ಇಂತಹ ಅಂಶಗಳನ್ನು ಪತ್ತೆ ಹಚ್ಚಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಗಳು ಮತ್ತು ನೋ ಯುವರ್ ಕಸ್ಟಮರ್ ನಿಯಮಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಉಲ್ಲಂಘಟನೆ ಮಾಡಿವೆ ಎಂದು ಹೇಳಿದರು.

ಸರ್ಕಾರಿ ಸ್ವಾಮ್ಯದ ಎಸ್‌ಬಿಐ, ಕೆನರಾ ಬ್ಯಾಂಕ್, ಕಾರ್ಪೊರೇಷನ್ ಮುಂತಾದ ಬ್ಯಾಂಕ್ ಗಳು ಇಂತಹ ಚಟುವಟಿಕೆಗಳಲ್ಲಿ ತೊಡಿಗಿಕೊಂಡಿವೆ ಎಂದು ಕೊಬ್ರಾ ಪೋಸ್ಟ್.ಕಾಂ ವೆಬ್ ಸೈಟ್ ಹೇಳಿದೆ. ಆರ್ಥಿಕ ವಲಯದಲ್ಲಿ ಈ ವರದಿಯ ಕುರಿತು ಗಂಭೀರವಾದ ಚರ್ಚೆಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರ ಎಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕು.

ಸೂಕ್ತ ತನಿಖೆ ಮಾಡುತ್ತೇವೆ : ಕಪ್ಪುಹಣವನ್ನು ಬಿಳಿಹಣವನ್ನಾಗಿ ಪರಿವರ್ತಿಸುವ ದಂಧೆಯಲ್ಲಿ ತೊಡಗಿದ್ದೇವೆ ಎಂಬ ಆರೋಪಗಳು ಸುಳ್ಳು. ಇಂತಹ ಪ್ರಕರಣಗಳು ಕಂಡುಬಂದಿಲ್ಲ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು ಎಸ್‌ಬಿಐ ಅಧ್ಯಕ್ಷ ಪ್ರತೀಪ್ ಚೌಧರಿ ಮತ್ತು ಬ್ಯಾಂಕ್ ಆಫ್ ಬರೋಡಾದ ಜನರಲ್ ಮ್ಯಾನೇಜರ್ ಡಿ.ಡಿ.ಸಿಂಗ್ಲಾ ಹೇಳಿದ್ದಾರೆ.

ಅಮಾನತು ಮಾಡಿ: ಕೋಬ್ರಾಪೋಸ್ಟ್.ಕಾಂ ನಡೆಸಿದ ರಹಸ್ಯ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ತಪ್ಪಿತಸ್ಥರನ್ನು ಕೂಡಲೇ ಅಮಾನತು ಮಾಡಿ ಎಂದು ಆದೇಶಿಸಿದೆ. ಪ್ರಕರಣದ ಕುರಿತು ವಿಚಾರಣೆ ನಡೆಸುವಂತೆ ಕೇಂದ್ರ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ.

ಪ್ರಾಥಮಿಕವಾಗಿ ಆರೋಪ ಸಾಬೀತಾಗಿರುವುದು ಕಂಡುಬಂದರೆ ಅಂತಹವರನ್ನು ತಕ್ಷಣ ಅಮಾನತುಗೊಳಿಸಲು ಆದೇಶಿಸಲಾಗಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಟಕ್ರು ಹೇಳಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ಬ್ಯಾಂಕ್ ಗಳ ವಿರುದ್ಧವೂ ಇಂತಹ ಆರೋಪ ಕೇಳಿಬಂದಿತ್ತು. ಅದರ ತನಿಖೆ ಇನ್ನೂ ಪ್ರಗತಿಯಲ್ಲಿದೆ.

ಪ್ರಮುಖ ಸರ್ಕಾರಿ ಬ್ಯಾಂಕ್ ಗಳು : ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ.

English summary
The Cobra-post website alleged that, several public sector banks and insurance companies were involved in money laundering practices. On Monday, portal released its report and said, Public sector lender State Bank of India and Life Insurance Corporation and other major banks convert black money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X