ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ಕೋಟಿ ತೆರಿಗೆ ವಂಚಿಸಿದ ಗಡ್ಕರಿ ಕಂಪನಿ

By Srinath
|
Google Oneindia Kannada News

bjp-leader-gadkari-puthi-companies-evade-rs-7-cr-tax
ನವದೆಹಲಿ, ಮೇ 6: ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ಗಡ್ಕರಿ ಅವರಿಗೆ ಸೇರಿದ ಪೂರ್ತಿ ಗ್ರೂಪ್‌ 7 ಕೋಟಿ ರೂ. ತೆರಿಗೆ ವಂಚಿಸಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪೂರ್ತಿ ಪವರ್‌ ಮತ್ತು ಶುಗರ್‌ ಕಂಪನಿಯ ಕಳೆದ ಎರಡು ವರ್ಷಗಳ ಲೆಕ್ಕಪತ್ರವನ್ನು ಪರಿಶೀಲಿಸಿದ ವೇಳೆ ಈ ತೆರಿಗೆ ವಂಚನೆ ಬೆಳಕಿಗೆ ಬಂದಿದೆ.
ಆದರೆ ಕಳೆದ ಎರಡು ವರ್ಷಗಳಿಂದ ನಿತಿನ್‌ ಗಡ್ಕರಿ ಅವರು ಈ ಯಾವುದೇ ಕಂಪನಿಗಳ ಜತೆ ವಹಿವಾಟು ನಡೆಸಿಲ್ಲ ಎಂದು ಪೂರ್ತಿ ಕಂಪನಿ ಮೂಲಗಳು ತಿಳಿಸಿವೆ.

ಪ್ರಸಕ್ತ ಪೂರ್ತಿ ಗ್ರೂಪ್‌ಗೆ ಸೇರಿದ ಕೆಲ ಕಂಪನಿಗಳ, ಕೆಲ ವರ್ಷಗಳ ಲೆಕ್ಕಪತ್ರವನ್ನು ಮಾತ್ರ ಪರಿಶೀಲಿಸಲಾಗಿದೆ. ಈ ಕೆಲಸ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆ ಬಳಿಕ ತೆರಿಗೆ ವಂಚನೆಯ ಪೂರ್ಣ ಮಾಹಿತಿ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಪೂರ್ತಿ ಗ್ರೂಪ್‌ ಮಾತ್ರ, ತೆರಿಗೆ ವಂಚನೆ ಕುರಿತು ಕಂಪನಿಗೆ ಯಾವುದೇ ನೋಟಿಸ್‌ ಜಾರಿಯಾಗಿಲ್ಲ. ಅಷ್ಟಕ್ಕೂ ನೋಟಿಸ್‌ ಜಾರಿಯಾದ ಕೂಡಲೇ ಅಕ್ರಮ ನಡೆದಿದೆ ಎಂದರ್ಥವಲ್ಲ. ಜೊತೆಗೆ ನಿತಿನ್‌ ಗಡ್ಕರಿ, ಕಳೆದ ಎರಡು ವರ್ಷಗಳಿಂದ ಕಂಪನಿಯ ವ್ಯವಹಾರಗಳಿಂದ ದೂರ ಇದ್ದಾರೆ. ಹೀಗಾಗಿ ಒಂದು ವೇಳೆ ನೋಟಿಸ್‌ ತಲುಪಿದರೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಂಪನಿ ಹೇಳಿದೆ.

English summary
BJP leader Nitin Gadkari Purti group companies evade Rs 7 crore tax. Probing the alleged dubious transactions of the Purti Power and Sugar Limited (PPSL) since last year, the department has completed assessments pertaining to the last two financial years and has found evasion to the tune of more than Rs 7 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X