ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನ, ಮತದಾರ, ಮತಗಟ್ಟೆ ವಿಶೇಷಗಳು

By Mahesh
|
Google Oneindia Kannada News

ಬೆಂಗಳೂರು, ಮೇ.5 : ರಾಜ್ಯದ ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ ಎಂದು ಅವಧಿಗೆ ಮುನ್ನ ಘೋಷಿಸಿದ ಗೃಹ ಸಚಿವ ಆರ್ ಅಶೋಕ್ ಅವರು ದಿನದ ಕೊನೆ ಕ್ಷಣದಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದು ದಿನದ ವಿಶೇಷವಾಗಿತ್ತು.

ಮೊದಲ ಬಾರಿ ಮತದಾನ ಮಾಡಿದ ಖುಷಿ, ಎಪಿಕ್ ಕಾರ್ಡ್ ಇದ್ದರೂ ಮತಪಟ್ಟಿಯಲ್ಲಿ ಹೆಸರು ಕಾಣಿಸಿಕೊಳ್ಳದೆ ಗರಂ ಆದ ಮತದಾರ, ಮತದಾನ ಬಹಿಷ್ಕಾರ, ನಿರಾಕರಣೆ, ಕೈ ಕೊಟ್ಟ ಆಯೋಗದ ಸಹಾಯವಾಣಿ, ಅಭ್ಯರ್ಥಿಗಳ ನಂಬಿಕೆ, ಅಲ್ಲಲ್ಲಿ ಘರ್ಷಣೆ ನಡುವೆ ಮತದಾನ ಪ್ರಕ್ರಿಯೆ ಮುಕ್ತಾಯ ಕಂಡಿದೆ.

ದಿನದ ಕ್ರೈಂ ವರದಿಗಳನ್ನು ಇಲ್ಲಿ ಓದಿಕೊಂಡು, ಎಲ್ಲೆಲ್ಲಿ ಹೇಗೆ ಮತದಾನ ನಡೆಯಿತು ಎಂಬ ಚಿತ್ರಗಳನ್ನು ಇಲ್ಲಿ ನೋಡಿಕೊಂಡು ಇಂದಿನ ಮತದಾನ ವಿಶೇಷಗಳ ಮುಖ್ಯಾಂಶಗಳಲ್ಲಿ ಇಲ್ಲಿ ತಪ್ಪದೆ ಓದಿ:

Karnataka Votes : Assembly poll voting Highlights

ವೆಂಕಯ್ಯ ಕಿರಿಕ್ : ಮಲ್ಲೇಶ್ವರದಲ್ಲಿನ ಮತ ಕೇಂದ್ರಕ್ಕೆ ಬೆಂಬಲಿಗರೊಂದಿಗೆ ಆಗಮಿಸಿದ ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಸರದಿಯಲ್ಲಿ ನಿಲ್ಲುವ ಬದಲು ನೇರವಾಗಿ ತೆರಳಿ ಮತಚಲಾಯಿಸಲು ಮುಂದಾದರು. ಸಾಲಿನಲ್ಲಿ ನಿಂತಿದ್ದ ಹಿರಿಯರಿಂದ ಆಕ್ಷೇಪ ವ್ಯಕ್ತವಾಯಿತು.

ಮಲ್ಲೇಶ್ವರದ 13ನೇ ಅಡ್ಡರಸ್ತೆಯ ಕಾರ್ಪೊರೇಷನ್ ಶಾಲೆಯಲ್ಲಿ ವೆಂಕಯ್ಯನಾಯ್ಡು ಬೆಳಿಗ್ಗೆ 8.45ಕ್ಕೆ ತಮ್ಮ ಹಕ್ಕು ಚಲಾಯಿಸಲು ಆಗಮಿಸಿದರು. ಈ ಸಂದರ್ಭದಲ್ಲಿ ಅವರು ಸರದಿಯಲ್ಲಿ ನಿಲ್ಲುವ ಬದಲು ನೇರವಾಗಿ ಮತದಾನ ನಡೆಯುವ ಸ್ಥಳಕ್ಕೆ ತೆರಳಲು ಪ್ರಯತ್ನಿಸಿದರು. ಇದರಿಂದ ಮತ ಚಲಾಯಿಸಲು ಸರದಿಯಲ್ಲಿ ನಿಂತಿದ್ದ ಕೆಲವು ಹಿರಿಯ ನಾಯಕರು ಸೇರಿದಂತೆ ಹಲವಾರು ಮತದಾರರು ವೆಂಕಯ್ಯನಾಯ್ಡು ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮುಖಭಂಗ ಅನುಭವಿಸಿದ ವೆಂಕಯ್ಯ ನಾಯ್ಡು, ತಕ್ಷಣವೇ ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

* ಬಿಜಾಪುರ: ಕೆಜೆಪಿ ಏಜೆಂಟ್ ಗಳು ಮಧ್ಯಾಹ್ನ 1 ಗಂಟೆ ನಂತರ ಮತಗಟ್ಟೆ ಕೇಂದ್ರದಿಂದ ನಾಪತ್ತೆಯಾಗಿದ್ದು ವಿಶೇಷ.
* ಹೊನ್ನಾಳಿಯ ಹಿರೇಹಟ್ಟಿಯಲ್ಲಿ ಪತಿ ಗೆಲುವಿಗಾಗಿ ಮತಗಟ್ಟೆಗೆ ಪೂಜೆ ಮಾಡಲು ಮುಂದಾದ ರೇಣುಕಾಚಾರ್ಯ ಪತ್ನಿಗೆ ತಡೆ.
* ಉಡರ್ಗೆರೆ ಮತಗಟ್ಟೆಯಲ್ಲಿ 150 ಮಂದಿ ಮತದಾರರ ಮೇಲೆ ಹೆಜ್ಜೇನು ದಾಳಿ.
* ಮೂಲಸೌಕರ್ಯಕ್ಕೆ ನಿರ್ಲಕ್ಷ್ಯ: ಮಡಿಕೇರಿಯ ದಟ್ಟಳ್ಳಿ, ಬಿತ್ತಳ್ಳಿ, ಚೊಟ್ಟೆಪಾರೆ, ಬಸವನಹಳ್ಳಿಯ 300ಕ್ಕೂ ಹೆಚ್ಚು ಹಾಡಿವಾಸಿ ಮತದಾರರಿಂದ ಚುನಾವಣೆ ಬಹಿಷ್ಕಾರ.
* ಮಸ್ಕಿ ಕ್ಷೇತ್ರ ಸೇರ್ಪಡೆಗೆ ವಿರೋಧಿಸಿ ರಾಯಚೂರಿನ ಮೂರು ಗ್ರಾಮಗಳು ಕುಪ್ಪಿಗುಡ್ಡ, ಸರ್ಜಾಪುರ, ಅಮರಾವತಿಯಲ್ಲಿ ಬಹಿಷ್ಕಾರ.
* ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಾಗೇಗೌಡ ಪರ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರ ವಿರೋಧ.
* ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮತಯಂತ್ರ ದೋಷ. ಅಧಿಕಾರಿಗಳಿಂದ ಪರಿಶೀಲನೆ.
* ತುಮಕೂರಿನಲ್ಲಿರುವ ಶಿರಾಗೇಟ್, ಅರಳಿಮರ ಪಾಳ್ಯ ಮತದಾರರ ಪಟ್ಟಿಯಿಂದ 300ಕ್ಕೂ ಹೆಚ್ಚು ಹೆಸರು ನಾಪತ್ತೆ. ಆಕ್ರೋಶಗೊಂಡ ಮತದಾರರಿಂದ ಮತಗಟ್ಟೆಗೆ ಬೀಗ ಜಡಿದು ಪ್ರತಿಭಟನೆ.

English summary
Ruling BJP's senior leader and Rajya Sabha member from the state M. Venkaiah Naidu tried to walk straight into the booth with a couple of his party cadres, instead of standing in line. Several voters already in the queue shouted at him, asking him to fall in line. Finally Naidu stood in line and casted his vote
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X