• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎರಡು ಕಡೆ ಮತದಾನ ಮಾಡಿದರೆ ಜೈಲು : ಆಯೋಗ

|
Anil Kumar Jha
ಬೆಂಗಳೂರು, ಮೇ 3 : ಚುನಾವಣೆಯಲ್ಲಿ ಎರಡು ಕಡೆ ಮತ ಹಾಕಲು ಪ್ರಯತ್ನ ನಡೆಸಿದರೆ ಅಥವಾ ಬೇರೊಬ್ಬರ ಹೆಸರಿನಲ್ಲಿ ನಕಲಿ ಮತದಾನ ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮತದಾರರ ಹೆಸರು ಆಕಸ್ಮಿಕವಾಗಿ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಸೇರಿದ್ದು, ಭಾವಚಿತ್ರ ಸಹಿತ ಗುರುತಿನ ಚೀಟಿ ಇದ್ದರೂ ಒಂದೇ ಕಡೆ ಮತದಾನ ಮಾಡಬೇಕು ಎಂದು ಅವರು ಹೇಳಿದರು.

ಎರಡು ಕಡೆ ಮತದಾನ ಮಾಡುವುದು. ಬೇರೊಬ್ಬರ ಹೆಸರಿನಲ್ಲಿ ನಕಲಿ ಮತದಾನ ಮಾಡುವ ಕೃತ್ಯಗಳು ಕಂಡುಬಂದರೆ ಅಂತಹವರು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿಸಿದರು.

ನಕಲಿ ಮತದಾನವನ್ನು ತಡಗಟ್ಟಲು ಆಯೋಗ ಜಾಗೃತ ದಳವನ್ನು ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಸ್ಥಾಪಿಸಿದೆ. ಅಕ್ರಮ ಮತದಾನದ ಬಗ್ಗೆ ದಳ ನಿಗಾ ವಹಿಸಲಿದೆ. ಅಕ್ರಮ ಮತದಾನ ಪ್ರಯತ್ನದಲ್ಲಿ ಸಿಕ್ಕಿ ಬಿದ್ದರೆ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದರು.

ಮತದಾರರಿಗೆ ಹಣ, ಮದ್ಯ, ಉಡುಗೊರೆಗಳ ಆಮಿಷ ಒಡ್ಡುವುದು ಅಪರಾಧ. ಇಂತಹ ಉಡುಗೊರೆ ಕೊಟ್ಟವರು ಹಾಗೂ ಪಡೆದವರು ಇಬ್ಬರ ಮೇಲೂ ಪ್ರಕರಣ ದಾಖಲಾಗುತ್ತವೆ.

ಮತದಾನಕ್ಕೆ ಎರಡು ದಿನ ಬಾಕಿ ಉಳಿದಿರುವುದರಿಂದ ಅಭ್ಯರ್ಥಿಗಳು, ಅವರ ಪರ ಕೆಲಸ ಮಾಡುವ ಕಾರ್ಯಕರ್ತರ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ. ಅಕ್ರಮ ನಡೆಯುವ ಪುರಾವೆ ದೊರೆತರೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಅಂಚೆ ಮತ ಪತ್ರ : ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿರುವ 3,11,147 ಸಿಬ್ಬಂದಿಗೆ ಅಂಚೆ ಮತ ಪತ್ರ ರವಾನಿಸಿದ್ದು ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಮತಗಳ ಚಲಾವಣೆಯಾಗಿದೆ. ಕೆಲವರು ಅಂಚೆ ಮೂಲಕ ಕಳುಹಿಸುವುದಾಗಿ ತಿಳಿಸಿದ್ದು ಮತ ಎಣಿಕೆ ವೇಳೆಗೆ ಬರುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಎಫ್ಐಆರ್ ದಾಖಲು : ಚುನಾವಣಾ ಅಕ್ರಮ ಹಾಗೂ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 2203 ಪ್ರಕರಣಗಳು ಇದುವರೆಗೂ ದಾಖಲಾಗಿವೆ. ಅವುಗಳಲ್ಲಿ ಹಣ ಸಾಗಣೆ - 199, ಮದ್ಯ ಸಾಗಣೆ - 756, ಅನುಮತಿಯಲ್ಲದೆ ಬ್ಯಾನರ್ ಅಳವಡಿಕೆ - 69 ಪ್ರಕರಣಗಳಿ ಸೇರಿವೆ.

ಅನುಮತಿ ಇಲ್ಲದೆ ವಾಹನ ಬಳಕೆ - 178, ಅನುಮತಿ ಇಲ್ಲದೆ ಸಮಾವೇಶ ಆಯೋಜನೆ - 67, ನೀತಿ ಸಂಹಿತೆ ಉಲ್ಲಂಘನೆ ಕುರಿತು - 905 ಪ್ರಕರಣ ದಾಖಲಿಸಲಾಗಿದೆ. ಒಟ್ಟು 633 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವಿವಿರ ನೀಡಿದರು.
ಕ್ರಮ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All kinds of electoral offenses, including offering or accepting inducements, proxy or multiple voting, will attract stringent action, including imprisonment of up to one year, said chief electoral officer Anil Kumar Jha on Thursday. Jha said, Accepting cash or gifts is an equally punishable offense under the law.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more