• search

ಸತೀಶ್ ರೆಡ್ಡಿ ಅಕ್ರಮ ಆಸ್ತಿ ಕೇಸ್, ಆಯೋಗ ರೂಲ್ಸ್

By * ಶ್ರೀಧರ ಕೆದಿಲಾಯ, ಉಡುಪಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  DA case complaint against BJP Bommanahalli MLA Satish Reddy
  ಬೆಂಗಳೂರು, ಮೇ.3: ಆಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎಂ ಸತೀಶ್ ರೆಡ್ಡಿ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಇತ್ತೀಚೆಗೆ ದೂರು ದಾಖಲಿಸಲಾಗಿದೆ. ಇದರಿಂದ ಬೊಮ್ಮನಹಳ್ಳಿ ಕ್ಷೇತ್ರದ ಅಭ್ಯರ್ಥಿ ರೆಡ್ಡಿಗೆ ಕೊಂಚ ಹಿನ್ನಡೆಯಾಗಿದೆ.

  ಆದರೆ, ಆಸ್ತಿ ಗಳಿಕೆ ವಿವರ ಸಲ್ಲಿಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅರ್ಜಿ ಸಲ್ಲಿಸಿದರೂ ಅಭ್ಯರ್ಥಿಯ ಸ್ಪರ್ಧೆಗೆ ಏನು ಬಾಧಕವಾಗುವುದಿಲ್ಲ. ಜೊತೆಗೆ ಕೋಟಿಗಟ್ಟಲೆ ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದರೂ ಸದ್ಯಕ್ಕೆ ತೊಂದರೆಯಿಲ್ಲ ಎಂಬ ವಿಚಿತ್ರ ಪರಿಸ್ಥಿತಿ ನಮ್ಮ ಕಾನೂನು ಸೃಷ್ಟಿಸಿದೆ.

  ಯಾವುದೇ ಆರೋಪ ಕೇಳಿ ಬಂದರೂ ಕೂಲಂಕುಷವಾಗಿ ಪರಿಶೀಲಿಸಿ, ವಿಚಾರಣೆ ನಡೆಸಿ ಪ್ರಕರಣ ದಾಖಲಾಗಿ, ಎಫ್ ಐಆರ್ ಹಾಕಿ ದೋಷಾರೋಪಣ ಪಟ್ಟಿ ಸಲ್ಲಿಸಿ ನ್ಯಾಯಾಲಯ ತೀರ್ಮಾನ ಪ್ರಕಟಿಸುವ ವೇಳೆಗೆ ಅಭ್ಯರ್ಥಿ ಗೆದ್ದು ಅಥವಾ ಸೋತು ಕನಿಷ್ಠ ವರ್ಷವಾದರೂ ಕಳೆದಿರುತ್ತದೆ. ಈ ಚೆಂದಕ್ಕೆ ಕಟ್ಟುನಿಟ್ಟಿನ ನಿಯಮ ಎಲ್ಲವೂ ಏಕೆ? ಕರ್ನಾಟಕದ ಲೋಕಾಯುಕ್ತಕ್ಕೆ ಬಂದಿರುವ ಸ್ಥಿತಿಯೇ ಚುನಾವಣಾ ಆಯೋಗಕ್ಕೂ ಬಂದಿದೆ.

  ಆಯೋಗದ ಪಾತ್ರವೇನು? : ಆರೋಪಿಗಳನ್ನು ಹೆದರಿಸಬಹುದೇ ಹೊರತೂ ದಂಡಿಸುವ ಹಕ್ಕಿಲ್ಲ ಎಂದರೆ ಆಯೋಗದ ಪಾತ್ರವೇನು? ಅಲ್ಲದೆ ಇತ್ತೀಚೆಗೆ ಸಿಂಧಗಿ ಜೆಡಿಯು ಅಭ್ಯರ್ಥಿ ಅಕಾಲಿಕ ಸಾವಿನಿಂದ ಅಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲು ಆಯೋಗ ಒಪ್ಪಲಿಲ್ಲ. ಕಾರಣ ಜೆಡಿಯು ಪಕ್ಷಕ್ಕೆ ರಾಜ್ಯದಲ್ಲಿ ಯಾವುದೇ ಹೆಚ್ಚಿನ ಮಾನ್ಯತೆ ಇಲ್ಲ ಎನ್ನಲಾಯಿತು.

  ಆದರೆ, ಪಿರಿಯಾಪಟ್ಟಣದ ಬಿಜೆಪಿ ಅಭ್ಯರ್ಥಿ ಸಾವಿನಿಂದ ಚುನಾವಣೆ ಮುಂದೂಡಲಾಯಿತು. ಇದು ಏಕೆ ಎಂದು ಜೆಡಿಯು ಪಕ್ಷದವರೂ ಪ್ರಶ್ನಿಸಿಲ್ಲ, ಬೆಂಗಳೂರಿನಲ್ಲಿ ರಾಜಕೀಯ ಪಾಠ ಮಾಡುತ್ತಿರುವ ಬಿ ಪ್ಯಾಕ್ ಸಂಘಟನೆಯೂ ಸೊಲ್ಲೆತ್ತಿಲ್ಲ. ಆಯೋಗವನ್ನು ಪ್ರಶ್ನಿಸಿದರೆ ನಿಯಮಗಳ ಪಿಡಿಎಫ್ ವೆಬ್ ನಲ್ಲಿ ಇದೆ ಎನ್ನುತ್ತಾರೆ. ಎಲ್ಲವೂ ಇಂಗ್ಲೀಷ್ / ಹಿಂದಿ ಭಾಷೆಯಲ್ಲಿದ್ದು, ಕನ್ನಡ ಮಾತ್ರ ಬಲ್ಲವರಿಗೆ ಕಾನೂನು ತಿಳಿಯುವ ಅವಕಾಶ ಇಲ್ಲವೇ ಇಲ್ಲ.

  ಸದ್ಯ ಸತೀಶ್ ರೆಡ್ಡಿ ಪ್ರಕರಣಕ್ಕೆ ಬಂದರೆ, ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರ ಪ್ರಕಾರ 2008ರ ವಿಧಾನಸಭೆ ಚುನಾವಣೆ ವೇಳೆ ಸತೀಶ್ ರೆಡ್ಡಿ ಅವರು ಸಲ್ಲಿಸಿದ ಆಸ್ತಿ ವಿವರಕ್ಕೂ ಈಗ ಸಲ್ಲಿಸಿರುವ ಆಸ್ತಿ ವಿವರಕ್ಕೂ ಬಹಳಷ್ಟು ವ್ಯತ್ಯಾಸವಿದೆ. 5 ವರ್ಷದಲ್ಲಿ ಅಷ್ಟೊಂದು ಹಣ ಸಂಪಾದನೆ ಮಾಡಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ಅಬ್ರಹಾಂ ಅವರ ಅರ್ಜಿಯನ್ನು ನ್ಯಾ. ಎನ್ ಕೆ ಸುಧೀಂದ್ರರಾವ್ ಅವರು ಅಂಗೀಕರಿಸಿದ್ದಾರೆ.

  2008ರಲ್ಲಿ 62 993 ಮತ ಗಳಿಸಿ ಸತೀಶ್ ರೆಡ್ಡಿ ಜಯ ಗಳಿಸಿದ್ದರು. ಕುಪೇಂದ್ರ ರೆಡ್ಡಿ ಅವರಿಗೆ 49,353 ಮತ ಸಿಕ್ಕಿತ್ತು. 2008ರಂತೆ ಸತೀಶ್ ರೆಡ್ಡಿ ಅವರ ಬಳಿ 5.90 ಲಕ್ಷ ನಗದು ಹಣ, ಬಿಎಂಡಬ್ಲ್ಯೂ ಕಾರು, ಟಿವಿಎಸ್ ಅಪಾಚಿ ಬೈಕು, ಬ್ಯಾಂಕ್ ಠೇವಣಿ 5,03,216 ರು ಇದೆ. ಚಿನ್ನಾಭರಣ 4 ಕೆಜಿ ಬೆಳ್ಳಿ ಪತ್ನಿ ಬಳಿ 6 ಕೆಜಿ ಬೆಳ್ಳಿ ಇದೆ. 17 ಲಕ್ಷಕ್ಕೂ ಮಿಕ್ಕಿದ ಚರಾಸ್ತಿ ಇದೆ.

  ಸಿಂಗಸಂದ್ರ, ಹುಲಿಮಂಗಲ, ಜಿಗಣಿ, ಆನೇಕಲ್ 2 ಎಕರೆ ಭೂಮಿ ಸೇರಿ 8,36,35,600 ರು. ಮೌಲ್ಯದ ಜಮೀನು. 2,42,68,750 ರು ಮೌಲ್ಯದ ಕೃಷಿಯೇತರ ಭೂಮಿ, 15 ಕೋಟಿ ರು ಗೂ ಮಿಕ್ಕ ಸ್ಥಿರಾಸ್ತಿ ಇದೆ.ಇದಲ್ಲದೆ 2,71,84,267 ರು. ಬ್ಯಾಂಕ್ ಸಾಲ ಹೊಂದಿದ್ದಾರೆ.

  2013ರ ಲೆಕ್ಕಾಚಾರದಂತೆ
  * ಚರಾಸ್ತಿ 8,56,15,121 ರು (2008ರಲ್ಲಿ 17 ಲಕ್ಷ ರು)
  * ಸ್ಥಿರಾಸ್ತಿ 33,25,00,000 ರು (2008ರಲ್ಲಿ 15 ಕೋಟಿ ರು)
  * ಒಟ್ಟಾರೆ 41,81,15,121 ರು (2008ರಲ್ಲಿ 15,88,50,986 ರು)
  * ಸಾಲ 2008ರಲ್ಲಿ 2,71,84,267 ರು ಇದ್ದದ್ದು ಈಗ 5,98,00,000 ರು ಗೆ ಏರಿಕೆಯಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Social Activist TJ Abraham filed a DA case complaint against BJP Bommanahalli MLA Satish Reddy in Lokayukta Court. Abraham quoted the Asset declared by Reddy during 2008 Assembly Poll and current poll declaration. Wish Election commission rules strong enough to punish the accused with fast track court and make him not contest the election.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more