• search

ಲೇಹ್ ನಲ್ಲಿ ಚೀನಿಯರ ಮತ್ತೊಂದು ಟೆಂಟ್ ಸ್ಥಾಪನೆ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Chinese troops put up another tent in Ladakh
  ಲೇಹ್, ಏ.30: ಲಡಾಕ್‌ನ ಲೇಹ್ ಪ್ರಾಂತ್ಯದಲ್ಲಿ ಡಿಬಿಓ(Daulat Beg Oldi) ವಲಯದಲ್ಲಿ ಚೀನಿ ಪಡೆಗಳ ಅತಿಕ್ರಮಣದಿಂದ ಉದ್ಭವಿಸಿರುವ ಬಿಕ್ಕಟ್ಟು ಮೂರನೆ ವಾರಕ್ಕೆ ಕಾಲಿಟ್ಟಿದೆ. ಚೀನಿ ಸೈನಿಕರು ಈಗ ಮತ್ತೊಂದು ಡೇರೆ ಸ್ಥಾಪಿಸುವ ಮೂಲಕ ಮತ್ತೊಮ್ಮೆ ಭಾರತಕ್ಕೆ ಸವಾಲು ಹಾಕಿದ್ದಾರೆ.

  ಡಿಬಿಓ ವಲಯದಲ್ಲಿ ಚೀನಿ ಸೇನೆಯು ಸ್ಥಾಪಿಸಿರುವ ಶಿಬಿರಗಳ ಸಂಖ್ಯೆ ಐದಕ್ಕೇರಿದೆ.ಚೀನಿ ಪಡೆಗಳು ತಾವು ಅತಿಕ್ರಮಿಸಿರುವ ಡಿಬಿಓ ವಲಯದಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳೂ ಕಂಡುಬರುತ್ತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

  ಡಿಬಿಓ ವಲಯದಿಂದ ಹಿಂದೆ ಸರಿಯ ಬೇಕಾದರೆ ಅಲ್ಲಿನ ವಿವಾದಾತ್ಮಕ ಸ್ಥಳವೊಂದರಲ್ಲಿ ಭಾರತೀಯ ಸೇನೆಯು ನಿರ್ಮಿಸಿರುವ ಕೆಲವು ಬಂಕರ್‌ಗಳನ್ನು ತೆಗೆದುಹಾಕಬೇಕೆಂಬ ಷರತ್ತನ್ನು ಚೀನಿ ಸೇನೆಯು ಭಾರತಕ್ಕೆ ವಿಧಿಸಿದೆ ಎನ್ನಲಾಗಿದೆ. ಈ ವಿವಾದಾತ್ಮಕ ಸ್ಥಳವನ್ನು ಚೀನಾವು ತನಗೆ ಸೇರಿದ್ದೆಂದು ವಾದಿಸುತ್ತಿದೆ.

  ಚೀನಿ ಪಡೆಗಳು ಡಿಬಿಓ ವಲಯದಲ್ಲಿ 19 ಕಿ.ಮೀ. ಒಳನುಗ್ಗಿದ್ದು, ಅಲ್ಲಿ ಕಳೆದ ಮೂರು ವಾರಗಳಿಂದ ಸುಮಾರು 50 ಚೀನಿ ಸೈನಿಕರು ಬೀಡುಬಿಟ್ಟಿದ್ದಾರೆ. ಏತನ್ಮಧ್ಯೆ ಚೀನಿ ಸೈನಿಕರು ಗಡಿಯಾಚೆಯಿಂದ ಟ್ರಕ್‌ಗಳು ಹಾಗೂ ಲಘು ವಾಹನಗಳ ಮೂಲಕ ಅವಶ್ಯಕ ಸಾಮಾಗ್ರಿಗಳನ್ನು ತರಿಸಿಕೊಳ್ಳುತ್ತಿದ್ದಾರೆಂಬ ಮಾಹಿತಿಯೂ ದೊರೆತಿದೆ.

  ಈ ಆಯಕಟ್ಟಿನ ಜಾಗದಿಂದ ಭಾರತವು ತನ್ನ ಬಂಕರ್‌ಗಳನ್ನು ತೆಗೆದುಹಾಕಬೇಕೆಂಬ ತನ್ನ ಬೇಡಿಕೆಗೆ ಚೀನಾವು ಬಲವಾಗಿ ಅಂಟಿಕೊಂಡಿರುವ ಕಾರಣದಿಂದಲೇ ಕಳೆದ ಒಂದುವಾರದಿಂದ ಉಭಯದೇಶಗಳ ಸೇನಾಧಿಕಾರಿಗಳ ಮಧ್ಯೆ ಧ್ವಜ ಸಭೆಯು ನಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

  ಏ.15 ರಿಂದ ಭಾರತೀಯ ಗಡಿಯಲ್ಲಿ ಚೀನಿ ತಂಡ ಸುತ್ತಾಡಲೇ ಇದೆ. ಅದರಲ್ಲೂ ವಿವಾದಿತ ಗಡಿಭಾಗದಲ್ಲೇ ಚೀನಿ ಪಡೆ ಕಾಣಿಸಿಕೊಂಡಿರುವುದು ಆತಂಕಕಾರಿಯಾಗಿದೆ.

  ಚೀನಿ ತಂಡ ಬೀಡು ಬಿಟ್ಟಿರುವ ಸ್ಥಳಕ್ಕೆ ಪೂರಕ ವಾಹನಗಳು, ಇನ್ನಷ್ಟು ಸಾಮಾನು ಸರಂಜಾನುಗಳು ಪ್ರತಿ ದಿನ ಸೇರ್ಪಡೆಗೊಳ್ಳುತ್ತಿದೆ ಎಂಬ ವಿಷಯ ಹೊರ ಬಿದ್ದಿದೆ. ಇದೆಲ್ಲವೂ ಧ್ವಜ ಸಭೆ ನಡೆಯದೆ ವಿಫಲವಾದ ನಂತರದ ಬೆಳವಣಿಗೆಯಾಗಿದೆ.

  ಲಡಾಕ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಸದ್ಯಕ್ಕೆ ಯುದ್ಧದ ಪರಿಸ್ಥಿತಿ ಎದುರಾಗಿಲ್ಲ, ಜನತೆ ಆತಂಕಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.

  ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಸದ್ಯ ಮಾಸ್ಕೋದಲ್ಲಿದ್ದು, ಚೀನಾ ಅತಿಕ್ರಮಣದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Chinese troops have erected one more tent in Daulat Beg Oldi (DBO) sector in Ladakh raising to five the number of such structures in the area of incursion, as the standoff between India and China on Monday (April 29) entered the third week.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more