• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು : ಮಗಳನ್ನು ಕಾಮುಕನಿಗೆ ಮಾರಿದ ತಾಯಿ!

By Prasad
|
Mother pushes daughter to prostitution
ಬೆಂಗಳೂರು, ಏ. 27 : ಹೆತ್ತ ತಾಯಿಯೇ ಹಣದಾಸೆಗಾಗಿ ಸ್ವಂತ ಮಗಳನ್ನು ಕಾಮುಕ ಶಿಕ್ಷಣಾಧಿಕಾರಿಯ ಕಾಮದಾಸೆಯನ್ನು ತೀರಿಸಲು ಒತ್ತೆಯಿಟ್ಟ ಹೇಯ ಕೃತ್ಯ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಯಲಾಗಿದೆ. ಶಿಕ್ಷಣಾಧಿಕಾರಿಯನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದ್ದು, ಹದಿನೈದು ವಯಸ್ಸಿನ ಬಾಲಕಿಯನ್ನು ರಕ್ಷಿಸಲಾಗಿದೆ.

ಚಿಕ್ಕಮ್ಮ ನೀಡಿದ ಧೈರ್ಯದ ಮೇಲೆ ಫೋನ್ ಮುಖಾಂತರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಾಲಕಿ ಸದ್ಯಕ್ಕೆ ಒಡನಾಡಿ ಸಂಸ್ಥೆಯ ರಕ್ಷಣೆಯಲ್ಲಿದ್ದಾಳೆ. ಪೊಲೀಸರಿಗೆ ನೀಡಿರುವ ದೂರಿನಲ್ಲಿ ಎರಡು ವರ್ಷಗಳ ಕಾಲ ತಾನು ಅನುಭವಿಸಿದ ನೋವನ್ನು, ಲೈಂಗಿಕ ದೌರ್ಜನ್ಯದ ಕಥೆಯನ್ನು, ತಾಯಿಯ ಹೇಯ ಕೃತ್ಯವನ್ನು ತೋಡಿಕೊಂಡಿದ್ದಾಳೆ.

ಈ ಘಟನೆಗೆ ಸಂಬಂಧಿಸಿದಂತೆ ಕೆಆರ್ ಪೇಟೆಯ ಶಿಕ್ಷಣಾಧಿಕಾರಿ ಪುಟ್ಟಸ್ವಾಮಿ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೆ, ಶೇಖರ್ ಎಂಬ ಮೈಸೂರು ದೂರದರ್ಶನ ಉದ್ಯೋಗಿ, ಕೇರಳದ ರಿಯಾಜ್, ರಾಜು ಎಂಬ ಬ್ಯಾಂಕ್ ಮ್ಯಾನೇಜರ್, ರಮೇಶ್ ಹಾಗು ಸ್ವತ ತಾಯಿ ಲೀಲಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಬಾಲಕಿ ಹೇಳಿದ ದಾರುಣ ಕಥೆ : ಕುವೆಂಪು ನಗರದ ಶೀಲಾ(ಹೆಸರು ಬದಲಿಸಲಾಗಿದೆ)ಗೆ ಆಗಿನ್ನೂ 13ರ ವಯಸ್ಸು. ಮೈನೆರೆತಿದ್ದರಿಂದ ಆರತಿ ಮಾಡಿ ಎಲ್ಲರಿಗೂ ಊಟಹಾಕಿಸಲಾಗಿದೆ. ಯೌವನದ ಸುಂದರ ಕನಸು ಕಾಣುತ್ತಿದ್ದ ಹುಡುಗಿಗೆ ಮರುದಿನವೇ ಬದುಕು ತಾನು ತಿಳಿದುಕೊಂಡಷ್ಟು ಸುಂದರವಾಗಿಲ್ಲ ಎಂಬುದು ಮರುದಿನವೇ ಅರಿವಾಗಿದೆ.

ಮೈನೆರೆತ ಮರುದಿನವೇ ದುಷ್ಟ ನಿರ್ದಯಿ ತಾಯಿ ಲೀಲಾ, ಶೀಲಾಳನ್ನು 75 ಸಾವಿರ ರು. ನಗದು ಮತ್ತು ಒಂದಿಷ್ಟು ಚಿನ್ನದಾಭರಣಗಳನ್ನು ಪಡೆದು ಶಿಕ್ಷಣಾಧಿಕಾರಿ ಪುಟ್ಟಸ್ವಾಮಿಗೌಡನಿಗೆ ಮಾರಿಬಿಟ್ಟಿದ್ದಾಳೆ. ಅಲ್ಲಿಂದ ಶುರುವಾಗಿದೆ ಶೀಲಾಳ ನರಕದ ಬದುಕು. ಪುಟ್ಟಸ್ವಾಮಿ ಗೌಡನ ಮನೆ ವೇಶ್ಯಾವಾಟಿಕೆ ಮನೆಯಾಗಿ ಬದಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡವರೆಷ್ಟೋ, ದುಡ್ಡು ಮಾಡಿಕೊಂಡವರೆಷ್ಟೋ?

ತಾಯಿ ಮೊದಲಿನಿಂದಲೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು ಎಂದು ಶೀಲಾ ಹೇಳಿದ್ದಾಳೆ. ತನ್ನನ್ನೂ ಮಾಂಸದಂಧೆಗೆ ತಳ್ಳಲು ಯತ್ನಿಸಿದಳು. ಪ್ರತಿಭಟಿಸಿದಾಗ ಹೊಡೆಯುತ್ತಿದ್ದಳು. ತಾನು ಓದಬೇಕು ಎಂದು ಹೇಳುತ್ತಿದ್ದರೂ ಕೇಳುತ್ತಿರಲಿಲ್ಲ. ಕೊನೆಗೆ ಹಣ ಪಡೆದು ಪುಟ್ಟಸ್ವಾಮಿಗೆ ನನ್ನನ್ನು ಮಾರಿಬಿಟ್ಟಳು. ನಂತರ ಪುಟ್ಟಸ್ವಾಮಿ ವಾರಕ್ಕೆ ಎರಡುಮೂರು ದಿನ ಬಂದು ತನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಮುಂದಿನ ದಿನಗಳಲ್ಲಿ ಅನೇಕರು ತನ್ನನ್ನು ಬಳಸಿಕೊಂಡರು ಎಂದು ಆಕೆ ಹೇಳಿದ್ದಾಳೆ.

ದುಷ್ಟ ಜಗತ್ತನ್ನು ಎದುರಿಸಲು ಧೈರ್ಯ ಸಾಲದ ಬಾಲಕಿ ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ. ಆಕೆ ಹೇಳಿರುವ ಪ್ರಕಾರ, ಶೇಖರ್, ರಮೇಶ್, ರಾಜು, ರಿಯಾಜ್ ಎಂಬುವವರೆಲ್ಲ ಬಾಲಕಿಯನ್ನು ಹುರಿದು ಮುಕ್ಕಿದ್ದಾರೆ. ಜೊತೆಗೆ ಪುಟ್ಟಸ್ವಾಮಿಗೌಡ ಕೂಡ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಮುಖ್ಯೋಪಾಧ್ಯಾಯಿನಿ ಕೂಡ ಬಾಲಕಿಯ ಸಹಾಯಕ್ಕೆ ಬಂದಿಲ್ಲ. ಇದೆಲ್ಲ ಶೀಲಾಳ ಚಿಕ್ಕಮ್ಮನ ಅರಿವಿಗೆ ಬಂದಿದೆ. ಆಕೆ ಧೈರ್ಯ ತುಂಬಿದ್ದರಿಂದಲೇ ಬಾಲಕಿ ಕೊನೆಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.

ಒಡನಾಡಿ ಸಂಸ್ಥೆಯ ಸಹಾಯದೊಂದಿಗೆ ಕುವೆಂಪುನಗರದ ಮೇಲೆ ದಾಳಿ ನಡೆಸಿದ ಪೊಲೀಸರು ಪುಟ್ಟಸ್ವಾಮಿಗೌಡನನ್ನು ಬಂಧಿಸಿದ್ದಾರೆ ಮತ್ತು ಶೀಲಾಳನ್ನು ಒಡನಾಡಿ ಆಶ್ರಯಕ್ಕೆ ನೀಡಿದ್ದಾರೆ. ಶೀಲಾಳ ಕಥೆಯನ್ನು ಕೇಳುತ್ತಿದ್ದರೆ ಕರುಳು ಕಿತ್ತುಬಂದಂತಾಗುತ್ತದೆ ಎಂದು ಒಡನಾಡಿ ಸಂಸ್ಥೆಯ ಸ್ಟಾನ್ಲಿ ಎಂಬುವವರು ಹೇಳಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಎಲ್ಲ ಆರೋಪಿಗಳನ್ನು ಹುಡುಕುತ್ತಿದ್ದಾರೆ. [ಮಗಳ ಜೀವನ ಹೊಸಕಿಹಾಕಿದ ಅಪ್ಪ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು atrocity ಸುದ್ದಿಗಳುView All

English summary
A woman has sold her own daughter to education officer for the sake of money. The incident has happened in Mysore. The girl was pushed to prostitution and abused by many including education officer for 2 years. Now, the girl has exposed all of them including her mother.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more