ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಯರ್, ಉಪಮೇಯರ್ ಚುನಾವಣೆ ಮುಂದೂಡಿಕೆ

|
Google Oneindia Kannada News

BBMP
ಬೆಂಗಳೂರು, ಏ. 26 : ವಿಧಾನಸಭೆ ಚುನಾವಣೆಗೆ ಮುನ್ನವೇ ನಡೆಯಬೇಕಾಗಿದ್ದ ಬೆಂಗಳೂರು ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ಚುನಾವಣೆಯನ್ನು ಮುಂದೂಡಲಾಗಿದೆ. ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಇದರಿಂದಾಗಿ ಏ.27ರಂದು ನಿಗದಿಯಾಗಿದ್ದ ಮೇಯರ್, ಉಪ ಮೇಯರ್ ಚುನಾವಣೆ ರದ್ದಾಗಿದೆ. ಅಧಿಕಾರದ ಅವಧಿ ಮುಗಿದರೂ ಮೇಯರ್ ಡಿ.ವೆಂಕಟೇಶ್‌ಮೂರ್ತಿ ಮತ್ತು ಉಪ ಮೇಯರ್ ಎಲ್. ಶ್ರೀನಿವಾಸ್ ಚುನಾವಣೆ ನಡೆಯುವರೆಗೆ ಉಸ್ತುವಾರಿ ನೋಡಿಕೊಳ್ಳಲು ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ದೊರಕಿದೆ.

ಮೇಯರ್, ಉಪ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ನಿಗದಿ ಪಡಿಸಬೇಕೆಂದು ಮಾಡಬೇಕೆಂದು ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ, ಕಾಲಾವಕಾಶ ಬೇಕಾಗಿರುವುದರಿಂದ ಪ್ರಾದೇಶಿಕ ಆಯುಕ್ತರು ಗುರುವಾರ ಚುನಾವಣಾ ವೇಳಾಪಟ್ಟಿಯನ್ನೇ ಹಿಂತೆಗೆದುಕೊಂಡಿದ್ದಾರೆ.

ಗೊಂದಲವೇನು : ಪ್ರಾದೇಶಿಕ ಆಯುಕ್ತ ಕೆ.ಶಿವರಾಮ್ ಚುನಾವಣಾ ದಿನಾಂಕವನ್ನು ನಿಗದಿ ಮಾಡಿ ಬಿಬಿಎಂಪಿ ಸದಸ್ಯರಿಗೆ ಮಾಹಿತಿ ನೀಡಿದ್ದರು. ನಿಗದಿಯಂತೆ ಶನಿವಾರ ಏ.27ರಂದು ಚುನಾವಣೆ ನಡೆಯಬೇಕಾಗಿತ್ತು.

ಮೇಯರ್ ಅಥವಾ ಉಪ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಬೇಕೆಂದು ಲೋಕೇಶ್ ವಿ. ನಾಯಕ್ ಎನ್ನುವವರು ಹೈಕೋರ್ಟ್ ಮೆಟ್ಟಿಲೇರಿದರು. ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಮೇಯರ್ ಅಥವಾ ಉಪ ಮೇಯರ್ ಹುದ್ದೆಯನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿಡಿ ಎಂದು ನಿರ್ದೇಶನ ನೀಡಿತು.

ಆದರೆ, ಚುನಾವಣೆಗೆ ಒಂದು ದಿನ ಬಾಕಿ ಉಳಿದಿರುವಂತೆ ಮೀಸಲು ನಿಗದಿಗೊಳಿಸಲು ಸಾಧ್ಯವಿಲ್ಲ. ಎಂದು ಆಲೋಚಿಸಿದ ಸರ್ಕಾರ ಅಡ್ವೋಕೇಟ್ ಜನರಲ್ ಎಸ್.ವಿಜಯ ಶಂಕರ್ ಅವರ ಸಲಹೆಯಂತೆ, ಚುನಾವಣೆಯನ್ನು ಮುಂದೂಡುವಂತೆ ಪ್ರಾದೇಶಿಕ ಆಯುಕ್ತರಿಗೆ ಆದೇಶಿಸಿದೆ.

ಪಕ್ಷಗಳಿಗೂ ಬೇಡವಾಗಿತ್ತು : ವಿಧಾನಸಭೆ ಚುನಾವಣೆ ಎದುರಿಗಿರುವಾಗ ಮೇಯರ್ ಚುನಾವಣೆ ನಡೆಸುವುದು ಪಕ್ಷಗಳಿಗೂ ಇಷ್ಟವಿರಲಿಲ್ಲ. ಪಕ್ಷದ ಗಮನವೆಲ್ಲಾ ವಿಧಾಸಸಭೆ ಚುನಾವಣೆ ಮೇಲೆ ಇರುವಾಗ ಬಿಬಿಎಂಪಿ ಮೇಯರ್ ಆಯ್ಕೆ ಬಗ್ಗೆ ತಲೆಕೆಡಿಸಿಕೊಳ್ಳಲು ಪಕ್ಷಗಳು ಸಿದ್ದವಿರಲಿಲ್ಲ.

ಸದ್ಯ ಮೇಯರ್ ಚುನಾವಣೆ ಮುಂದೂಡಲಾಗಿದೆ. ಹೊಸದಾಗಿ ಅಸ್ತಿತ್ವಕ್ಕೆ ರಾಜ್ಯ ಸರ್ಕಾರದ ಮೇಲೆ ಬಿಬಿಎಂಪಿಗೆ ನೂತ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡುವ ಜವಾಬ್ದಾರಿ ಬಂದು ಕೂತಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
The Government of Karnataka postponed BBMP mayor and Deputy Mayor election. Mayor and Deputy Mayor administration comes to an end on April 26. So new Mayor election will held for BBMP. Government announced that On April, 27 Saturday election would conduct. but now Govt withdraw the order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X