ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಬೀಚಿನಲ್ಲಿ ಬ್ಯಾನ್ ಬ್ಯಾನ್ ಬ್ಯಾನ್

By Mahesh
|
Google Oneindia Kannada News

Liquor Ban in Goa Beaches
ಪಣಜಿ, ಏ.25: ಗೋವೆ ಬೀಚಿನಲ್ಲಿ ಮಜಾ ಮಾಡೋಕೆ ಹೋಗುವ ಪ್ರವಾಸಿಗರಿಗೆ ಇನ್ಮುಂದೆ ನಿಷೇಧ, ನಿರ್ಬಂಧ ಹೇರಿಕೆ ಬೋರ್ಡ್ ಗಳೇ ಕಾಣಿಸಲಿವೆ. ಬಿಜೆಪಿ ಸರ್ಕಾರ ಬಂದ ಮೇಲೆ ಮಹಿಳಾ ಪ್ರವಾಸಿಗರ ಮೇಲಿನ ದೌರ್ಜನ್ಯ ತಡೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.

ಗೋವಾ ಬೀಚಿನಲ್ಲಿ ಇನ್ಮುಂದೆ ಮದ್ಯಪಾನ ಮಾಡುವಂತಿಲ್ಲ. ಕಡಲ ತೀರದಲ್ಲಿ ಸ್ವೇಚ್ಛಾಚಾರ ಅಧಿಕವಾಗಿ ಕಾಮದಾಟಕ್ಕೆ ಅಮಾಯಕರು ಬಲಿಯಾಗುವ ದುರಂತಗಳು ನಡೆದ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ಆದರೆ, ಬೀಚಿನ ಆಸುಪಾಸಿನಲ್ಲಿ ಲೈಸನ್ಸ್ ಹೊಂದಿದ ಮದ್ಯದಂಗಡಿಗಳಲ್ಲಿ ಮಾರಾಟಕ್ಕೆ ಮಾತ್ರ ನಿರ್ಬಂಧ ಹೇರಲಾಗಿಲ್ಲ.

ಬೀಚ್ ಗಳಲ್ಲಿ ಮದ್ಯಪಾನ ಮಾಡಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಒಡೆದು ಹಾಕುವುದು ಇತರೆ ಪ್ರವಾಸಿಗರಿಗೆ ಕಿರಿಕಿರಿಯಾಗುತ್ತದೆ. ಮದ್ಯ ಸೇವಿಸಿದವರು ಪ್ರವಾಸಿಗರ ಜೊತೆ ದುರ್ವರ್ತನೆಯಿಂದ ನಡೆದುಕೊಳ್ಳುವ ಪ್ರಕರಣಗಳು ಬೆಳಕಿಗೆ ಬಂದಿದೆ. ಹೀಗಾಗಿ ಈ ಕಾನೂನು ಜಾರಿಗೆ ತರುವುದು ಅವಶ್ಯ ಎಂದು ಪ್ರವಾಸೋದ್ಯಮ ಸಚಿವ ದಿಲೀಪ್ ಪರುಲ್ಕೆರ್ ಹೇಳಿದ್ದಾರೆ.

ಮಹಿಳೆಯರಿಗೆ ಭಯ ಬೇಡ: ವಿದೇಶಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ಹೊರ ಬಂದ ಮೇಲೆ ಗೋವೆ ಬೀಚಿನಲ್ಲಿ ಮಹಿಳೆಯರು ಅಡ್ಡಾಡಲು ಹೆದರುವ ಪರಿಸ್ಥಿತಿ ತಲೆದೋರಿತ್ತು.

ಈಗ ಪ್ರವಾಸೋದ್ಯಮ ಪೊಲೀಸ್ ಪಡೆ ಸ್ಥಾಪಿಸಲಾಗಿದೆ. ಭಾರತೀಯ ರಿಸರ್ವ್ ಬಟಾಲಿಯನ್ ಬಳಸಿಕೊಂಡು 200-250 ಜನರ ಪಡೆ ನಿಯೋಜಿಸಲಾಗುತ್ತದೆ. 50 ಜನ ಮಹಿಳಾ ಪೇದೆಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ಪಾಳೆಯದಲ್ಲೂ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ ಪ್ರವಾಸಿಗರ ಪಹರೆ ಕಾಯಲು ಸಿದ್ಧರಾಗಿದ್ದಾರೆ ಎಂದು ಸಚಿವ ದಿಲೀಪ್ ಹೇಳಿದರು.

ಇದಲ್ಲದೆ ಕೋಸ್ಟಲ್ ಗಾರ್ಡ್ ಗಳು ಇರುತ್ತಾರೆ. ಆದಷ್ಟು ಸರ್ಕಾರದಿಂದ ಮಾನ್ಯತೆ ಪಡೆದ ಹೋಟೆಲ್, ರೆಸ್ಟೋರೆಂಟ್ ಗಳಲ್ಲೇ ಪ್ರವಾಸಿಗರು ತಂಗುವುದು ಉತ್ತಮ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ತಾಣ ವೀಕ್ಷಿಸಿ ಎಂದು ಸಚಿವ ದಿಲೀಪ್ ಹೇಳಿದ್ದಾರೆ.

English summary
In the aftermath of multiple incidents involving crimes against tourists in the state and travel advisories issued by multiple countries against India, the Department of Tourism, Government of Goa has constituted strict measures to safeguard tourist safety, especially women travellers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X