ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಆಗೋ ಯೋಗ ಇದೆ

ಇದರ ನಡುವೆಯೂ ಕೋಡಿಮಠ ಶ್ರೀಗಳು ಬಿಡುವು ಮಾಡಿಕೊಂಡು 'ವಿಜಯವಾಣಿ' ದಿನಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಅದರ ಸಂಕ್ಷಿಪ್ತ ರೂಪ ಇಲ್ಲಿದೆ.
ಸಿದ್ದರಾಮಯ್ಯ ಸಿಎಂ ಆಗೋ ಯೋಗ ಚೆನ್ನಾಗಿದೆ ಎಂಬುದು ಕೋಡಿಮಠ ಶ್ರೀಗಳ ಖಚಿತ ನುಡಿ. ಶ್ರೀಗಳ ತರ್ಕ ಹೀಗಿದೆ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದುಕೊಳ್ಳುವುದಕ್ಕಿಂತ ಗಳಿಸುವುದೇ ಹೆಚ್ಚು. ಬಿಜೆಪಿ ಸ್ಥಿತಿ ಇದಕ್ಕೆ ತದ್ವಿರುದ್ಧ. ಇನ್ನು ಜೆಡಿಎಸ್ ಮತ್ತು ನೂತನ ಕೆಜೆಪಿ ಸಾಧನೆ ಪರವಾಗಿಲ್ಲ. ಬಿಎಸ್ಆರ್ ಕಾಂಗ್ರೆಸ್ಸಿಗೆ ಕಷ್ಟ ಕಷ್ಟ.
ಪರಿಸ್ಥಿತಿ ಹೀಗಿರುವಾಗ ಕೈ ಪಕ್ಷಕ್ಕೆ ನಾಯಕರೇ ಭಾರವಾಗಿ ಅಧಿಕಾರಕ್ಕಾಗಿ ಕಾದಾಟ ನಡೆಯುವುದು ನಿಶ್ಚಿತ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾಯಕರು ಬಲಾಬಲ ಪ್ರದರ್ಶನಕ್ಕೂ ಮುಂದಾಗುತ್ತಾರೆ. ಸಿಎಂ ರೇಸಿನಲ್ಲಿ ಬಹಳ ನಾಯಕರಿದ್ದರೂ ಸಿದ್ದರಾಮಯ್ಯನವರಿಗೆ ಯೋಗ ಚೆನ್ನಾಗಿಯೇ ಇದೆ. ಹಾಗಾಗಿ ಅವರು ಮುಂದಿನ ಸಿಎಂ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.
ಕೋಡಿಮಠಶ್ರೀ ಇನ್ನೂ ಏನು ಹೇಳಿದ್ದಾರೆಂದರೆ...
ಈ ಬಾರಿಯೂ ರಾಜಕೀಯ ಅಸ್ಥಿರತೆ ತಪ್ಪಿದ್ದಲ್ಲ. ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಾಜ್ಯ ರಾಜಕೀಯವು ಧ್ರುವೀಕರಣದಿಂದ ದೂರವಾಗಿ ಮತ್ತೆ ಒಗ್ಗೂಡುವಿಕೆಗೆ ಸನಿಹವಾಗಲಿದೆ. ಮುರಿದ ಮನಸ್ಸುಗಳು ಮತ್ತೆ ಒಂದಾಗುವ ಸಾಧ್ಯತೆ ನಿಚ್ಚಳವಾಗಿದೆ. ಚುನಾವಣೆಯ ಮುಗಿಯುವುದರೊಳಗಾಗಿ ರಾಜಕೀಯ ಅಚ್ಚರಿಗಳನ್ನು ನಾಡಿನ ಜನ ಖುದ್ದು ನೋಡಲಿದ್ದಾರೆ. ಸ್ಫೋಟಕ ಸುದ್ದಿಗಳನ್ನು ಕೇಳಲಿದ್ದಾರೆ.












Click it and Unblock the Notifications