• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಳ್ಳಾರಿ: ಆನಿಲ್ ಲಾಡ್ ಏಕಾಂಗಿಯಾಗಿದ್ದು ಏಕೆ?

By Mahesh
|
Anil Lad not getting Support in Bellary City Assembly Constituency
ಬಳ್ಳಾರಿ, ಏ.24: ಸರಿ ಸುಮಾರು 9 ಜನ ಘಟಾನುಘಟಿ ಆಕಾಂಕ್ಷಿಗಳನ್ನು ಹಿಂದಕ್ಕೆ ಹಾಕಿ ಹೈಕಮಾಂಡ್ ಒಲಿಸಿಕೊಂಡು ಟಿಕೆಟ್ ಗಿಟ್ಟಿಸಿಕೊಂಡ ಗಣಿ ಉದ್ಯಮಿ ಅನಿಲ್ ಲಾಡ್ ಕಾಲಿಗೆ ಜಾಲಿ ಮುಳ್ಳು ಹೊಕ್ಕಂತಾಗಿದೆ. ತನ್ನವರೇ ತನಗೆ ಮುಳ್ಳಾದರೇನಗೆ ಎಂದು ಹಂಸಲೇಖ ಬರೆದ ಹಾಡು ಹಾಡುವ ಪರಿಸ್ಥಿತಿ ಒದಗಿದೆ.

ಹೌದು ಅನಿಲ್ ಲಾಡ್ ಗಳಿಸಿದ ಗೆಳೆಯರೆಲ್ಲ ಈಗ ಪ್ರಚಾರದ ಸಂದರ್ಭದಲ್ಲಿ ಕೈ ಕೊಟ್ಟಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಅನಿಲ್ ಲಾಡ್ ಅವರ ಜೊತೆ ಪ್ರಚಾರ ಕಾರ್ಯಕ್ಕೆ ಸ್ಥಳೀಯ ಕಾರ್ಪೊರೇಟರ್ ಗಳು ಬರುತ್ತಿಲ್ಲ. ಸ್ಥಳೀಯ ನಾಯಕರ ಪರ 3 ಬಾರಿ ಸಭೆ ನಡೆಸಿದ್ದೇನೆ. ಎಲ್ಲರೂ ಪ್ರಚಾರಕ್ಕೆ ಸಾಥ್ ನೀಡುವ್ ಭರವಸೆ ಆದರೆ ಯಾರೂ ಕಾಣುತ್ತಿಲ್ಲ ಎಂದು ಅನಿಲ್ ಲಾಡ್ ತಮ್ಮ ಗೋಳು ತೋಡಿಕೊಂಡಿದ್ದಾರೆ. ಸ್ಟಾರ್ ಪ್ರಚಾರಕ ಮಾತಿರಲಿ, ನಗರ ಸಭೆ ಕಾಂಗ್ರೆಸ್ ಮುಖಂಡರು ಕೂಡಾ ಅನಿಲ್ ಲಾಡ್ ಜೊತೆ ಕಾಣಿಸಿಕೊಂಡಿಲ್ಲ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸಾಧನೆ ಮಾಡಲು ಅನಿಲ್ ಲಾಡ್ ಕಾರಣ ಹಾಗೂ ಗಣಿ ಉದ್ಯಮಿಗಳ ಪೈಕಿ ಪಕ್ಷದಲ್ಲಿ ಉಳಿಸಿಕೊಳ್ಳಬಹುದಾದ ವ್ಯಕ್ತಿ ಎಂದರೆ ಅದು ಲಾಡ್ ಮಾತ್ರ ಎಂದು ಹೈಕಮಾಂಡ್ ಗೆ ಮನವರಿಕೆಯಾಗಿ ಟಿಕೆಟ್ ನೀಡಿದ್ದರು.

ಕಾಂಗ್ರೆಸ್ಸು ಕಳೆದ ಚುನಾವಣೆಯಲ್ಲಿ ಅನಿಲ್ ಲಾಡ್ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಹೀಗಾಗಿ ಈ ಬಾರಿ ಅನಿಲ್ ಲಾಡ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಈ ಬಾರಿ ನೀವು ಅವರ ಕೈ ಬಿಡಬೇಡಿ ಎಂದು ಜನತೆಯ ಮುಂದೆ ಹೇಳಿಕೊಂಡಿದ್ದಲ್ಲದೆ. ಅನಿಲ್ ಲಾಡ್ ಗೆ ಟಿಕೆಟ್ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಮಂಗಳಮುಖಿ ಪರ್ವಿನ್ ಬೆದರಿಕೆ ಹಾಕಿದ್ದು ನೆನಪಿರಬಹುದು.

ಬಳ್ಳಾರಿ ನಗರಸಭೆ ಚುನಾವಣೆಯಲ್ಲಿ ಪರ್ವಿನ್ ಬಾನು ಅವರು ವಾರ್ಡ್ 4ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಿಸಿದ ಸಾಧನೆ ಮಾಡಿದ್ದರು. ಕಾರ್ಪೋರೇಟರ್ ಆದ ಮೇಲೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು.

ರಾಜ್ಯಸಭಾ ಸಂಸದ, ಗಣಿ ಒಡೆಯ ಅನಿಲ್ ಲಾಡ್ ಪರ ಬಳ್ಳಾರಿ ರಾಯಲ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆದಿತ್ತು. ಕೆಪಿಸಿಸಿ, ಹೈಕಮಾಂಡ್ ಮೇಲೆ ಲಾಡ್ ಭಾರಿ ಒತ್ತಡ ಹೇರಿದ್ದರು. ಬಳ್ಳಾರಿ ಮೇಲೆ ಪ್ರಭುತ್ವ ಸಾಧಿಸಲು ಯತ್ನಿಸುತ್ತಿದ್ದಾರೆ. ಬಳ್ಳಾರಿ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಸಿಗದಿದ್ದರೆ ಬಂಡಾಯ ಬಾವುಟ ಹಾರಿಸಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುತ್ತೇವೆ ನೋಡುತ್ತಿರಿ ಎಂದು ಅನಿಲ್ ಲಾಡ್ ಚಾಲೆಂಜ್ ಹಾಕಿದ್ದರು.

ರಾಜ್ಯಸಭಾ ಸದಸ್ಯ ಅನಿಲ್ ಲಾಡ್,ಕೆ.ಸಿ ಕೊಂಡಯ್ಯ, ಪಂಪಾವತಿ, ದಿವಾಕರ್ ಬಾಬು, ಅಲ್ಲಂ ವೀರಭದ್ರಪ್ಪ ಸೇರಿದಂತೆ ದೊಡ್ಡ ದೊಡ್ಡ ಮುಖಂಡರ ಹೆಸರುಗಳು ಕೇಳಿ ಬಂದಿತ್ತು.ಎಲ್ಲಾ ಆಕಾಂಕ್ಷಿಗಳು ಬಳ್ಳಾರಿ ಮೇಲೆ ಕಾಂಗ್ರೆಸ್ ಬಾವುಟ ಹಾರಿಸುವುದಕ್ಕಿಂತ ತಮ್ಮ ಹಿಡಿತ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಬಂಡಾಯಕ್ಕೆ ಕಾರಣವಾಗಿತ್ತು. [ಬಳ್ಳಾರಿ ಜಿಲ್ಲಾ ಪ್ರವಾಸ ಮಾಡಿ ಬನ್ನಿ]

ಅಕ್ರಮ ಗಣಿಗಾರಿಕೆ ಸಹಕಾರ ಮಾಡುವವರು ಇವರಿಗೆ ಬೆಂಬಲಿಗರಾಗ್ತಾರಾ? ಇವರೇನು ರಾಹುಲ್ ಗಾಂಧಿ ಫ್ಯಾಮಿಲಿ ಅವರಾ? ರೆಡ್ಡಿ ಸೋದರರ ವಿರುದ್ಧ ಏನು ಹೋರಾಟ ಮಾಡಿದ್ರಿ? ಇವರ ರಾಜಕೀಯ ಮರಕೋತಿ ನಡೆಯುವುದಿಲ್ಲ? ಯಾವ ಸಿದ್ಧಾಂತವೂ ಇಲ್ಲ ಮೋಜು ಮಾಡುವುದೇ ಅವರ ಉದ್ದೇಶ. ಅನಿಲ್ ಲಾಡ್ ಗೆ ಯಾವುದೇ ಪಕ್ಷವಿಲ್ಲ ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಂಪಾವತಿ ದೆಹಲಿಯಲ್ಲಿ ಕೆರಳಿದ್ದರು.

ಕೋಪಗೊಂಡಿರುವ ನಾಯಕರು ಪಕ್ಷದಿಂದ ಲಾಡ್ ರನ್ನು ಉಚ್ಚಾಟಿಸುವ ನಿರ್ಣಯ ಕೈಗೊಂಡಿದ್ದಾರೆ. ಟಿಕೆಟ್ ಘೋಷಣೆಯಾದ ನಂತರವೂ ಲಾಡ್ ವರ್ತನೆ ಮುಂದುವರೆದರೆ ಶಿಸ್ತು ಕ್ರಮ ಜರುಗಿಸಲು ನಾಯಕರು ಚಿಂತನೆ ನಡೆಸಿದ್ದರು. ಆದರೆ, ರಾಹುಲ್ ಗಾಂಧಿ ಮಧ್ಯ ಪ್ರವೇಶದಿಂದ ಲಾಡ್ ಟಿಕೆಟ್ ಪಡೆದರು ಆದರೆ ಜೊತೆಗಾರರಿಲ್ಲದೆ ಈಗ ಕೊರಗುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rajya Sabha member Anil Lad is not getting support from his fellow local leaders, Lad is facing resistance from former minister Diwakar Babu and his supporters, filed his nomination from Bellary city Assembly constituency on a Congress ticket

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more