ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿ ಒಟ್ಟು ನಾಲ್ಕು ಕೋಟಿ ಮತದಾರರು

|
Google Oneindia Kannada News

Anil Kumar Jha
ಬೆಂಗಳೂರು, ಏ. 23 : ರಾಜ್ಯ ವಿಧಾನಸಭೆ ಚುನಾವಣೆಗಾಗಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಮುಗಿದಿದ್ದು ಈ ಬಾರಿ 4,36,14,881 ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿ 2919 ಮಂಗಳ ಮುಖಿಯರಿಗೂ ಮತದಾನ ಮಾಡಲು ಅವಕಾಶ ನೀಡಲಾಗಿದೆ.

ಸೋಮವಾರ ಸಂಜೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪುರ್ಣಗೊಂಡಿದ್ದು, ಒಟ್ಟು 4,36,14,881 ಅರ್ಹ ಮತದಾರರು ಮತಚಲಾಯಿಸಬಹುದಾಗಿದೆ ಎಂದು ಹೇಳಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮತದಾರರಿದ್ದು, 4,47,914 ಮತದಾರರನ್ನು ಕ್ಷೇತ್ರಹೊಂದಿದೆ. 1,49,980 ಮತದಾರರನ್ನು ಹೊಂದಿರುವ ಶೃಂಗೇರಿ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರಿದ್ದಾರೆ ಎಂದರು.

ಲೈಂಗಿಕ ಅಲ್ಪ ಸಂಖ್ಯಾತರು ಹಲವಾರು ವರ್ಷಗಳಿಂದ ಮುತದಾನದ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರು. ಈ ಬಾರಿ 2919 ಲೈಗಿಂಕ ಅಲ್ಪಸಂಖ್ಯಾತರಿಗೆ ಮತದಾನದ ಹಕ್ಕು ನೀಡಲಾಗಿದೆ. ಇವರಲ್ಲಿ 875 ಜನರು ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದಾರೆ.

118 ಮಂದಿ ಮಹದೇವಪುರ ಕ್ಷೇತ್ರದಲ್ಲಿ ವಾಸವಾಗಿದ್ದಾರೆ ಎಂದು ಅನಿಲ್ ಕುಮಾರ್ ಝಾ ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಅರ್ಜಿಯಲ್ಲಿ ಲಿಂಗ ಪರಿವರ್ತಕ ಎಂದು ನಮೂದಿಸಿದ್ದರು. ಅವರನ್ನು ಲೈಂಗಿಕ ಅಲ್ಪಸಂಖ್ಯಾತರು ಎಂದು ಪರಿಗಣಿಸಿ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಮತಯಂತ್ರ ಬೇಕು : 33 ಕ್ಷೇತ್ರಗಳಲ್ಲಿ 16ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಆದ್ದರಿಂದ ಹೆಚ್ಚವರಿಯಾಗಿ 7700 ಮತಯಂತ್ರಗಳ ಅಗತ್ಯವಿದೆ. 16 ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಎರಡು ಮತಯಂತ್ರಗಳನ್ನು ಬಳಸಲಾಗುತ್ತದೆ ಎಂದರು.

ಹಣ ಪಡೆದರೆ ಜೋಕೆ : ಮತದಾನ ಮಾಡಲು ಹಣ ನೀಡುವುದು ಅಪರಾಧ. ಅದರಂತೆ ಮತ ಹಾಕಲು ಹಣ ಪಡೆಯುವುದು ಅಪರಾಧವಾಗಿದೆ. ಜನರು ಮತ ಹಾಕಲಿ ಹಣ ಪಡೆಯುವುದು ಚುನಾವಣಾಧಿಕಾರಿಗಳ ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮತದಾರರ ವಿವರ

ಒಟ್ಟು ಮತದಾರರು : 4,36,14,881
ಪುರುಷರು :2,22,73,618
ಮಹಿಳೆಯರು : 2,13,38,344
ಲೈಂಗಿಕ ಅಲ್ಪ ಸಂಖ್ಯಾತರು : 2919

(ಮತದಾನಕ್ಕೆ ಈ ಗುರುತಿನ ಪತ್ರಗಳನ್ನು ಬಳಸಬಹುದು)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
The Chief Electoral Officer Anil Kumar Jha said, totally 4,36,14,881 voters will vote in assembly election held on May 5. On Monday, April,22 he address press meet and said, 2,22,73,618 men and 2,13,38,344 women voters will vote election. commission has given 2919 Transgenders for vote in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X