ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೈಲ್ ಲಿಪಿ ಮತಯಂತ್ರ : ಆಯೋಗದ ಹೊಸ ಪ್ರಯತ್ನ

|
Google Oneindia Kannada News

electronic voting mission
ಬೆಂಗಳೂರು, ಏ. 22 : ಚುನಾವಣಾ ಆಯೋಗ ಈ ಬಾರಿ ಜನಸ್ನೇಹಿಯಾದ ಕಾರ್ಯಕ್ರಮಗಳನ್ನು ರೂಪಿಸಿದ್ದು, ರಾಜ್ಯದಲ್ಲೇ ಮೊಲದ ಬಾರಿಗೆ ಬ್ರೈಲ್ ಲಿಪಿ ಇರುವ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಆಳವಡಿಸಲಿದೆ.

ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚುನಾವಣಾಧಿಕಾರಿ ಬೇವಿನ ಮಠದ್ ಅಂಧರಿಗೆ ಉಪಯೋಗವಾಗಲಿ ಎಂದು ರಾಜ್ಯದಲ್ಲಿ ಮೊದಲ ಬಾರಿಗೆ ಬ್ರೈಲ್ ಲಿಪಿ ಇರುವ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಆಳವಡಿಸಲಿದೆ. ಈ ಯಂತ್ರದಿಂದಾಗಿ ಆಂಧರು ಯಾರ ಸಹಾಯವಿಲ್ಲದೆ ಸ್ವತಂತ್ರವಾಗಿ ಮತ ಚಲಾಯಿಸಬಹುದಾಗಿದೆ ಎಂದು ಹೇಳಿದರು.

ಚಿಕ್ಕಮಕ್ಕಳೊಂದಿಗೆ ಮತ ಚಲಾಯಿಸಲು ಬರುವ ಮಹಿಳೆಯರಿಗೆ ಸಾಲಿನಲ್ಲಿ ನಿಲ್ಲದೆ ಮತದದಾನ ಮಾಡಲು ಅವಕಾಶ ಕಲ್ಪಸಲಾಗುವುದು. ಹೆಚ್ಚು ಬಿಸಿಲಿರುವ ಜಿಲ್ಲೆಗಳಲ್ಲಿ ಮತಗಟ್ಟೆ ಬಳಿ ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಅಂಬಿ ಸಂಧಾನ ವಿಫಲ : ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ಬೆಂಬಲ ಹಿಂಪಡೆದು, ಚುನಾವಣಾ ಪ್ರಚಾರಕ್ಕೆ ಬರುವಂತೆ ಆತ್ಮಾನಂದ ಅವರೊಡನೆ ಅಂಬರೀಶ್ ಮಾಡಿದ ಸಂಧಾನ ಮಾತುಕತೆ ಮುರಿದು ಬಿದ್ದಿದೆ. ತಾವು ಅನಿವಾರ್ಯವಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷದ ಯಾವ ಅಭ್ಯರ್ಥಿಗಳ ಪರವಾಗಿಯೂ ಕೆಲಸ ಮಾಡುವುದಿಲ್ಲ ಎಂದು ಆತ್ಮಾನಂದ ಪ್ರತಿಕ್ರಿಯೆ ನೀಡಿದ್ದಾರೆ.(ಜನಮತ : ಮಂಡ್ಯದಲ್ಲಿ ಅಂಬಿ ಸೋಲೋದು ಗ್ಯಾರಂಟಿ!)

ಮಾತಿನ ಚಕಮಕಿ : ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ, ಮಾತಿನ ಚಕಮಕಿ ಉಂಟಾಗಿ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜೈಲಿಗೆ ಹೋಗಿ ಬಂದ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ಆರೋಪಿಸಿದ್ದಾರೆ.(ಪ್ರೊಡ್ಯೂಸರ್, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಬಂಧನ)

ಕಾಂಗ್ರೆಸ್ ಅಭ್ಯರ್ಥಿ ಮನೆಯಲ್ಲಿ ಲಕ್ಷ ಲಕ್ಷ : ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಲ್ ಮಾರಣ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 10 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕ್ಷಮೆ ಯಾಚಿಸಿದ ಯಡಿಯೂರಪ್ಪ : ಎಲ್.ಕೆ.ಅಡ್ವಾಣಿ ಸೇರಿದಂತೆ ಮೂವರು ರಾಷ್ಟ್ರೀಯ ನಾಯಕರಿಗೆ ಯಡಿಯೂರಪ್ಪ ಹಣ ನೀಡಿದ್ದಾರೆ ಎಂಬ ಧನಂಜಯ್ ಕುಮಾರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ಷಮೆ ಯಾಚಿಸಿದ್ದಾರೆ. (ಬಿಎಸ್ವೈರಿಂದ ಅಡ್ವಾಣಿಗೆ ಕಿಕ್ ಬ್ಯಾಕ್: ಧನಂಜಯ್ ಕಿ(ರಿ)ಕ್ಕು)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
State Election Commission wish to introduce Braille electronic voting mission for blind voters. Its very first step in state that election commission introduce braille electronic voting mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X