ಕೆಜೆಪಿ ಅಂತಿಮ ಪಟ್ಟಿ : 212 ಕ್ಷೇತ್ರಗಳಲ್ಲಿ ಸ್ಪರ್ಧೆ

ಬುಧವಾರ ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಬಿಡುಗಡೆ ಮಾಡಿದರು. ಅಂತಿಮ ಪಟ್ಟಿಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಶೇಖರ್ ಗೌಡ ಪಾಟೀಲ್, ಸಚಿವ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಸುರೇಶ್ ಎಸ್.ಲಾತೂರ್, ಆನಂದ್ ಸಿಂಗ್ ವಿರುದ್ಧ ಟಿ. ವೀರೇಶ್, ಎಸ್.ಎ.ರವೀಂದ್ರನಾಥ್ ವಿರುದ್ಧ ಎಂ.ವಿಕಾಸ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಅವರು ಹೇಳಿದರು.
ಕೆ.ಆರ್.ಪೇಟೆ ಕೃಷ್ಣಗೆ ಬೆಂಬಲ : ರೈತ ಸಂಘದ ಮೂವರು ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿರುವ ಪಕ್ಷ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರಿಗೆ ಬೆಂಬಲ ನೀಡಿದೆ. ಆದ್ದರಿಂದ ಆ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎಂದು ಅವರು ತಿಳಿಸಿದರು.
ಯಾರಿಗೆ ಎಷ್ಟು ಸ್ಥಾನಗಳು : ಒಟ್ಟು 212 ಕ್ಷೇತ್ರಗಳ ಅಭ್ಯರ್ಥಿಗಳ ಮಾಹಿತಿ ನೀಡಿದ ಧನಂಜಯ್ ಕುಮಾರ್, ಪರಿಶಿಷ್ಟ ಜಾತಿ - 36, ಪರಿಶಿಷ್ಟ ಪಂಗಡ -3, ಮಹಿಳೆಯರು -13, ಮುಸ್ಲಿಮರು -7, ಕ್ರೈಸ್ತರು - 3 ಮತ್ತು ಜೈನರಿಗೆ 2 ಕಡೆ ಟಿಕೆಟ್ ನೀಡಲಾಗಿದೆ ಎಂದರು.
ಮೂರು ಸಾಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯವರನ್ನು ಕಣಕ್ಕಿಳಿಸಲಾಗಿದೆ. ಮೂಡಿಗೆರೆ, ಶೃಂಗೇರಿ, ಭದ್ರಾವತಿ, ಕಾಪು, ಉಡುಪಿ, ಕುಂದಾಪುರ, ವಿರಾಜಪೇಟೆ ಮತ್ತು ಮಧುಗಿರಿ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಭ್ಯರ್ಥಿಗಳ ಅಂತಿಮ ಪಟ್ಟಿ
ಅರಬಾವಿ - ಸುರೇಶ್ ಎಸ್. ಲಾತೂರು
ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ - ಶೇಖರಗೌಡ ಪಾಟೀಲ್
ಕಾರವಾರ - ಅಂತೋಣಿ ವಿ. ಫರ್ನಾಂಡೀಸ್
ಶಿರಸಿ - ರವಿ ಹೆಗಡೆ ಹೂವಿನಮನೆ
ವಿಜಯನಗರ (ಬಳ್ಳಾರಿ) - ಟಿ. ವೀರೇಶ್
ಬಳ್ಳಾರಿ ನಗರ - ಟಿ. ಪಾರ್ಥಸಾರಥಿ
ಬಳ್ಳಾರಿ - ಪಾಂಡು ಬ್ಯಾಲಿಚಿಂತಿ
ದಾವಣಗೆರೆ ಉತ್ತರ - ಎಂ. ವಿಕಾಸ್
ದಾವಣಗೆರೆ ದಕ್ಷಿಣ - ಬಿ.ಎಸ್. ಸತೀಶ್
ಯಶವಂತಪುರ - ಪ್ರಮೀಳಾ ಗೌಡ
ರಾಮನಗರ - ಎಸ್.ಆರ್. ನಾಗರಾಜ್
ಮದ್ದೂರು - ಆನಂದರೆಡ್ಡಿ
ಯಮಕನಮರಡಿ - ಡಾ.ವೈ.ಬಿ.ನಾಯ್ಕ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications