ಅಮೆರಿಕದಲ್ಲಿ ಮತ್ತೊಂದು ಸ್ಫೋಟ: 15 ಸಾವು

ಟೆಕ್ಸಾಸ್ ನಲ್ಲಿರುವ ರಾಸಾಯನಿಕ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 15 ಮಂದಿ ಸತ್ತಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಟೆಕ್ಸಾಸ್ ನ ವಾಕೋ ಪಟ್ಟಣದಿಂದ 32 ಕಿಮೀ ದೂರದಲ್ಲಿರುವ ಈ ಘಟಕದಲ್ಲಿ ಗುರುವಾರ ಸಂಜೆ 7.30ರಲ್ಲಿ (0100 GMT) ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ. ಈ ಫ್ಯಾಕ್ಟರಿ ಆಸುಪಾಸು ಸುಮಾರು 2,700 ಮಂದಿ ವಾಸವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ಸ್ಫೋಟ ಸಂಭವಿಸಿದ ಸ್ಥಳದ ಸುತ್ತವಿರುವ ಐದು ಕಟ್ಟಡಗಳು ತೀವ್ರವಾಗಿ ಜಖಂಗೊಂಡಿವೆ. ಜತೆಗೆ ಸಮೀಪದಲ್ಲಿರುವ West Rest Haven Nursing Home ಕಟ್ಟಡ ಸಹ ಛಿದ್ರಗೊಂಡಿದೆ.
ಹೊನಲುಬೆಳಕಿನ ವ್ಯವಸ್ಥೆಯಿರುವ ಸಮೀಪದ ಫುಟ್ಬಾಲ್ ಸ್ಟೇಡಿಯಂನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಆರು ಹೆಲಿಕಾಪ್ಟರು ಮೂಲಕ ಗಾಯಾಳುಗಳನ್ನು ಘಟನಾ ಸ್ಥಳದಿಂದ ಹೊರಸಾಗಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ:












Click it and Unblock the Notifications