ಕೈಬಂಡಾಯಗಾರರು ಕೆಜೆಪಿ, ಜೆಡಿಎಸ್ ತೆಕ್ಕೆಗೆ

ಚುನಾವಣೆಯಲ್ಲಿ ಅಧಿಕ ಸ್ಥಾನಗಳಿಸುವ ಉದ್ದೇಶದಿಂದ ಬಿ.ಎಸ್.ಯಡಿಯೂರಪ್ಪ ಇಂತಹ ರಣತಂತ್ರ ರೂಪಿಸಿದ್ದಾರೆ. ಕೈ ಟಿಕೆಟ್ ವಂಚಿತ ಅಭ್ಯರ್ಥಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ಯಡಿಯೂರಪ್ಪ ತಯಾರಿಸಿರುವ ಹಿಟ್ ಲೀಸ್ಟ್ ನಲ್ಲಿ ಮದ್ದೂರು ಶಾಸಕಿ ಕಲ್ಪನಾ ಸಿದ್ದರಾಜು, ಮಾಜಿ ಮೇಯರ್ ಕೆ.ಚಂದ್ರಶೇಖರ್ ಹಾಗೂ ಶ್ರವಣಬೆಳಗೊಳ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿವೆ. ಈ ಮೂವರು ಕೆಜೆಪಿ ಸೇರುವುದು ಬಹುತೇಕ ಖಚಿತವಾಗಿದೆ ಎಂಬುದು ಪಕ್ಷದ ಮೂಲಗಳ ಮಾಹಿತಿ.
ಬಸವನಗುಡಿ ಮಾಜಿ ಶಾಸಕ ಮತ್ತು ಮಾಜಿ ಮೇಯರ್ ಕೆ.ಚಂದ್ರಶೇಖರ್ ಕೆಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಬಸವನಗುಡಿ ಕ್ಷೇತ್ರದಿಂದ ಕಾಂಗ್ರಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಶೇಖರ್ ಅವರಿಗೆ ಪ್ರೊ.ಬಿ.ಕೆ.ಚಂದ್ರಶೇಖರ್ ಅವರ ಆಗಮನದಿಂದಾಗಿ ಟಿಕೆಟ್ ಕೈ ತಪ್ಪಿದೆ.
ಶ್ರವಣಬೆಳಗೊಳದ ಕಾಂಗ್ರೆಸ್ ಟಿಕೆಟ್ ಹಂಚಿಕೆಯೂ ಗೊಂದಲ ಗೂಡಾಗಿತ್ತು. ಜೆಡಿಎಸ್ ನಿಂದ ವಲಸೆ ಬಂದ ಸಿ.ಎಸ್.ಪುಟ್ಟೇಗೌಡರಿಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂದೆಯೂ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ, ಭಾನುವಾರ ಪ್ರಕಟಗೊಂಡ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಪುಟ್ಟೇಗೌಡರಿಗೆ ಟಿಕೆಟ್ ನೀಡಿದ್ದಾರೆ. ಆದ್ದರಿಂದ ಸ್ಥಳೀಯ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ ಟಿಕೆಟ್ ವಂಚಿತರಾಗಿ ಕೆಜೆಪಿಯತ್ತ ಮುಖ ಮಾಡಿದ್ದಾರೆ.(ಕಾಂಗ್ರೆಸ್ 2ನೇ ಪಟ್ಟಿ)
ಜೆಡಿಎಸ್ ಸಹ ಸನ್ನದ್ಧ : ಕೈ ಟಿಕೆಟ್ ವಂಚಿತರನ್ನು ಸೆಳೆಯಲು ಜೆಡಿಎಸ್ ಸಹ ಸನ್ನದ್ಧವಾಗಿ ನಿಂತಿದೆ. ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಸಚಿವ ಎಚ್.ಎಂ.ರೇವಣ್ಣ ಜೆಡಿಎಸ್ ಸೇರುವುದು ಖಚಿತವಾಗಿದೆ. ಉಳಿದ ಬಂಡಾಯಗಾರರು ಪಕ್ಷಕ್ಕೆ ಬಂದರೆ ಸೇರಿಸಿಕೊಂಡು ಬಲ ಹೆಚ್ಚಿಸಿಕೊಳ್ಳಲು ಜೆಡಿಎಸ್ ಸಿದ್ಧವಾಗಿದೆ.
ನಾಮಪತ್ರ ಸಲ್ಲಿಸಲು ಎರಡು ದಿನಗಳು ಬಾಕಿ ಇವೆ. ಎಂತಹ ರಾಜಕೀಯ ಬೆಳವಣಿಗೆಗಳು ನಡೆದರೂ ಇಂದು ಅಥವ ನಾಳೆ ನಡೆಯಬೇಕು. ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇಂದು ಅಥವ ನಾಳೆ ಪ್ರಕಟಿಸಬೇಕಾದ ಒತ್ತಡದಲ್ಲಿ ಸಿಲುಕಿವೆ. ಬಂಡಾಯದ ಬಾವುಟ ಹಾರಿಸಿರುವ ಅಭ್ಯರ್ಥಿಗಳಿಗೆ ಈಗ ಎರಡು ಪಕ್ಷಗಳು ಮಾತ್ರ ಆಧಾರ ಎಂಬಂತಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications